×
Ad

ವಾಹನಗಳಿಗೆ ಬೆಂಕಿ: ಇಬ್ಬರ ಬಂಧನ

Update: 2016-03-02 23:52 IST

ಬೆಂಗಳೂರು, ಮಾ. 2: ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಇಲ್ಲಿನ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನಗರದ ಗೌಡನಪಾಳ್ಯದ ಸುಣ್ಣದ ಗೂಡು ಕಾಂಪೌಂಡ್ ನಿವಾಸಿ ಜಗನ್(27) ಹಾಗೂ ರಂಜಿತ್(39) ಎಂದು ಗುರುತಿಸಲಾಗಿದೆ.

ಆರೋಪಿಗಳು ಫೆ.25ರಂದು ರಾತ್ರಿ 2:30ಕ್ಕೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಗೌಡನಪಾಳ್ಯ 1ನೆ ಕ್ರಾಸ್‌ನಲ್ಲಿ ನಿಲ್ಲಿಸಿದ್ದ ಮೂರು ದ್ವಿಚಕ್ರ ಮತ್ತು ಒಂದು ಆಟೊರಿಕ್ಷಾಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಿದ್ದು, ಸುನೀಲ್ ಹಾಗೂ ಪ್ರಶಾಂತ ಎಂಬವರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News