ಭದ್ರತಾ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ
Update: 2016-03-02 23:56 IST
ಬೆಂಗಳೂರು, ಮಾ.2: ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಮತ್ತು ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಭದ್ರತಾ ಸಿಬ್ಬಂದಿಗಳ ಮೇಲುಸ್ತುವಾರಿ ನೋಡಿಕೊಳ್ಳುವ ಸಲುವಾಗಿ ತಾತ್ಕಾಲಿಕ ಭದ್ರತಾಧಿಕಾರಿ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅನುಭವ ಹೊಂದಿರುವ ನಿವೃತ್ತ ಯೋಧರು ಹಾಗೂ ನಿವೃತ್ತ ಪೊಲೀಸ್‌ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು. ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲು ವಿವಿ ನಿರ್ಧರಿಸಿದ್ದು, ಮಾಸಿಕವಾಗಿ 25 ಸಾವಿರ ರೂ. ವೇತನ ನೀಡಲಿದ್ದು, ಮಾ.18ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.