ಭಗತ್ ಸಿಂಗ್ ಬಗ್ಗೆ ಅಂಬೇಡ್ಕರ್ ಅಭಿಪ್ರಾಯ
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವು ಅವರನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತಿರುವುದು ಹೊಸ ವಿಷಯವಲ್ಲ. ಆದರೆ ಆತ್ಮಹತ್ಯೆಗಳು ನಡೆದ ರೀತಿ ಈಗಿನ ಆಡಳಿತ ಮಾಡುತ್ತಿರುವ ಅನ್ಯಾಯದ ವರ್ತನೆಯನ್ನು ವಿರೋಧಿಸಲು ಜಾಗೃತಗೊಳಿಸಬೇಕು. ಜೆಎನ್‌ಯುನಲ್ಲಿ ಸಂವಿಧಾನದ ಸಂಪೂರ್ಣ ಉಲ್ಲಂಘನೆ ಮತ್ತು ಅಂಬೇಡ್ಕರ್ ಯಾವ ಆದರ್ಶಗಳಿಗಾಗಿ ಹೋರಾಡಿದ್ದರೋ ಅವೆಲ್ಲವನ್ನೂ ನೆಲಸಮಗೊಳಿಸಲಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಪ್ರಶಂಸಿಸುವಾಗ ಸ್ವಾರ್ಥಹಿತಾಸಕ್ತಿಗಳು ವ್ಯವಸ್ಥಿತವಾಗಿ ಅವರನ್ನು ಅವರ ಸೈದ್ಧಾಂತಿಕ ವಿರೋಧಾಭಾಸಗಳಿಗೆ ಮಿತಿಗೊಳಿಸಿವೆ. ಆಡಳಿತ ವರ್ಗ ಮತ್ತು ಅವರ ರಾಷ್ಟ್ರವು ಇದರಲ್ಲಿ ಮಹತ್ವದ ಪಾತ್ರ ಹೊಂದಿದೆ. ಆದರೆ ಅವರ ಬೆಂಬಲಿಗರೆಂದು ಹೇಳಿಕೊಳ್ಳುವವರೂ ಹಿಂದೆ ಬಿದ್ದಿಲ್ಲ. ಬಿಜೆಪಿ ಸರಕಾರವು ಈ ವರ್ಷ ಅಂಬೇಡ್ಕರ್ ಅವರ 125ನೆ ಜನ್ಮ ದಿನೋತ್ಸವ ಆಚರಣೆಯ ಬಗ್ಗೆ ದೊಡ್ಡದಾಗಿ ಹೇಳಿಕೊಂಡು ತಿರುಗುತ್ತಿದೆಯಾದರೂ, ಅದೇ ವರ್ಷದಲ್ಲಿ ಹೈದರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯದ ಐವರು ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವ ಕರಿನೆರಳೂ ಹರಿಯುತ್ತಿದೆ. ಇವರಲ್ಲಿ ಒಬ್ಬರಾದ ರೋಹಿತ್ ವೇೆಮುಲಾ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ತಮ್ಮ ಕಾಲದ ಬಹುತೇಕ ಸುಧಾರಣಾವಾದಿಗಳಂತಲ್ಲದೆ ಅಂಬೇಡ್ಕರ್ ಉನ್ನತ ಶಿಕ್ಷಣದ ಮೇಲೆ ಒತ್ತು ನೀಡಿದ್ದರು. ಅವರ ಮನಸ್ಸಿನಲ್ಲಿ ಸಿಬ್ಬಂದಿಯ ದೌರ್ಜನ್ಯಗಳ ನಡುವೆ ಶೋಷಿತ ವರ್ಗಕ್ಕೆ ಸ್ವಾತಂತ್ರ್ಯ ಕೊಡುವ ಕನಸು ಕಾಣುವ ರೋಹಿತ್‌ನಂತಹವರೇ ಇದ್ದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವು ಅವರನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತಿರುವುದು ಹೊಸ ವಿಷಯವಲ್ಲ. ಆದರೆ ಆತ್ಮಹತ್ಯೆಗಳು ನಡೆದ ರೀತಿ ಈಗಿನ ಆಡಳಿತ ಮಾಡುತ್ತಿರುವ ಅನ್ಯಾಯದ ವರ್ತನೆಯನ್ನು ವಿರೋಧಿಸಲು ಜಾಗೃತಗೊಳಿಸಬೇಕು.
ಜೆಎನ್‌ಯುನಲ್ಲಿ ಸಂವಿಧಾನದ ಸಂಪೂರ್ಣ ಉಲ್ಲಂಘನೆ ಮತ್ತು ಅಂಬೇಡ್ಕರ್ ಯಾವ ಆದರ್ಶಗಳಿಗಾಗಿ ಹೋರಾಡಿದ್ದರೋ ಅವೆಲ್ಲವನ್ನೂ ನೆಲಸಮಗೊಳಿಸಲಾಗಿದೆ. ಅವರ ಪ್ರಜಾಸತ್ತಾತ್ಮಕ ಪ್ರಜಾತಂತ್ರವನ್ನು ಆದರ್ಶವಾಗಿರಿಸಿಕೊಂಡಿದ್ದ ಸಂಸ್ಥೆಗಳೇ ಅವನ್ನು ನೆಲಸಮ ಮಾಡಿವೆ ಮತ್ತು ಏಕತೆ, ಸಮಾನತೆ, ಸಹೋದರಭಾವದ ತೇಜಸ್ಸನ್ನು ಕೊಲೆ ಮಾಡಿವೆೆ. 1960ರಿಂದೀಚಿಗೆ ಅಂತಹ ದೊಡ್ಡ ಪ್ರಚಾರಾಭಿಯಾನದ ನಡುವೆ ಪಕ್ಷಗಳು ಮಾತ್ರವಲ್ಲ, ಅವುಗಳು ಪ್ರತಿನಿಧಿಸುವ ವರ್ಗ ಇದರಲ್ಲಿ ಮೇಳೈಸಿಕೊಂಡು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂಲಭೂತ ಅಂಶಗಳನ್ನು ವ್ಯವಸ್ಥಿತವಾಗಿ ಮೂಲೆಗುಂಪಾಗಿಸಲಾಗಿದೆ. ಉದಾಹರಣೆಗೆ, ಮಹಾದ್ ಹೋರಾಟದ ನಂತರ ಹತಾಶೆಗೊಂಡು, ಮತ್ತೊಮ್ಮೆ ಜಾತಿ ರಾಜಕೀಯಕ್ಕೆ ಇಳಿಯುವ ಒತ್ತಡದ ಪರಿಸ್ಥಿತಿ ಎದುರಾಗುವವರೆಗೂ ಅವರು ಸಂಪೂರ್ಣ ದಶಕದವರೆಗೆ ವರ್ಗ ರಾಜಕೀಯಕ್ಕೆ ಇಳಿದಿದ್ದರು. ಈ ರಾಜಕೀಯವು ಸ್ವತಂತ್ರ ಕಾರ್ಮಿಕ ಪಕ್ಷದಲ್ಲಿ ಕಾಣುತ್ತದೆ. ಅದನ್ನು ಅವರು ಕಾರ್ಮಿಕರ ಪಕ್ಷ ಎಂದು ವಿವರಿಸಿದ್ದರು ಮತ್ತು ಅದರ ಪ್ರತಿಫಲನವಾಗಿರುವ ಜನತಾ ಎನ್ನುವ ಅವರ ದಿನಪತ್ರಿಕೆಯನ್ನು ಪೂರ್ಣವಾಗಿ ಮರೆತುಬಿಡಲಾಗಿದೆ. 1930ರಲ್ಲಿ ಬಹಳ ಚಟುವಟಿಕೆಗಳು ನಡೆದಿವೆ ಮತ್ತು ಅದರಲ್ಲಿ ಅಂಬೇಡ್ಕರ್ ಪಾತ್ರವನ್ನು ವಿಶ್ಲೇಷಿಸುವುದು ಕುತೂಹಲಕರವಾಗಿರುತ್ತದೆ. ಮರಾಠಿಯೇತರ ಓದುಗರು ಅವರ ಬರಹಗಳಿಗೆ ಮಾರು ಹೋಗಿದ್ದರು. ಏಕೆಂದರೆ ಅವರ ಅನುವಾದ ಇಂಗ್ಲಿಷಿನಲ್ಲಿ ಲಭ್ಯವಿರಲಿಲ್ಲ ಮತ್ತು ಇತರ ಭಾಷೆಗಳಲ್ಲೂ ಲಭ್ಯವಿರಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರರು ದಲಿತರ ಉದ್ಧಾರಕ್ಕಾಗಿ ಮುಡಿ ಪಾಗಿದ್ದರು ಮತ್ತು ಬ್ರಿಟಿಷ್ ಸಾಮ್ರಾಜ್ಯದ ಒಡೆದು ಆಳುವ ನೀತಿ ಯನ್ನು ಪಾಲಿಸಿದ್ದರು ಎಂದು ಕಾಣುವುದಿದೆ. ಈಗಿನ ತಲೆಮಾರಿನ ದಲಿತ ನಾಯಕರು ದಲಿತೇತರ ವಿಷಯಗಳಿಗೆ ತಮ್ಮ ಉದಾಸೀನ ಧೋರಣೆ ತೋರುವಾಗ ಅಂತಹ ಸಂಶಯ ಬಾರದೆ ಇರದು.
ಆ ದಶಕದ ಅತೀ ಮನಕಲಕುವ ಘಟನೆಯೆಂದರೆ ಭಗತ್ ಸಿಂಗ್ ವಿಚಾರಣೆ ಮತ್ತು ಇಬ್ಬರು ಸಹಚರರಾದ ರಾಜಗುರು ಮತ್ತು ಸುಖದೇಬ್ ಜೊತೆಗೆ ನೇಣಿಗೇರಿಸಿರುವುದು. ಅದು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ನಿಜ ಬಣ್ಣವನ್ನು, ಕಾನೂನಿಗೆ ಕುರುಡಾದ ಪ್ರೀತಿ ಮತ್ತು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವ ರಾಷ್ಟ್ರೀಯವಾದಿ ನಾಯಕರ ವಿರುದ್ಧ ಕಪಟ ಕಾಳಜಿಯನ್ನು ಹೊರಹಾಕಿತ್ತು. ಭಗತ್ ಸಿಂಗ್ ಮತ್ತು ಡಾ. ಅಂಬೇಡ್ಕರ್ ಹಾಗೆ ನೋಡಿದರೆ ಪರಸ್ಪರರಿಗೆ ಸಂಪೂರ್ಣ ವಿರುದ್ಧವಾಗಿದ್ದಾರೆ. ಆದರೆ ಇವರು ದೇಶವನ್ನು ಕಾಡುತ್ತಿರುವ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡ ಇಬ್ಬರು ನಾಯಕರು. 2007ರಲ್ಲಿ ಮಹಾರಾಷ್ಟ್ರದಲ್ಲಿ ಭಗತ್ ಸಿಂಗ್ ಶತಮಾನೋತ್ಸವ ಸಂಭ್ರಮಾಚರಣೆ ಸಮಯದಲ್ಲಿ ಹೇಳಿದಾಗ ಅಂತಹ ವಿಚಿತ್ರ ಹೇಳಿಕೆಗೆ ಜನರು ಅಚ್ಚರಿಹೊಂದಿದ್ದರು. ಆದರೆ ಇದು ವಾಸ್ತವ. ಈ ನಾಯಕರಿಬ್ಬರು ನಮ್ಮಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ಅವರ ಪ್ರಸ್ತುತತೆ ಬೆಳೆಯುತ್ತಿದೆ. ಇವರು ಪರಸ್ಪರರನ್ನು ಹೇಗೆ ಕಾಣುತ್ತಾರೆ? ಇಬ್ಬರೂ ಪರಸ್ಪರರ ಬಗ್ಗೆ ಹೇಳಿದ ಯಾವ ಮಾತುಗಳೂ ಲಭ್ಯವಿಲ್ಲ. ಆದರೆ ಭಗತ್ ಸಿಂಗ್ ದಲಿತ ಪ್ರಶ್ನೆಗೆ ಚಿಂತಾಕ್ರಾಂತರಾಗಿದ್ದರು ಎಂಬುವುದು ನಮಗೆ ಗೊತ್ತು. ಅವರು ಅಚೂತ್ ಸಮಸ್ಯೆ ಎನ್ನುವ ಲೇಖನವನ್ನು ತಮ್ಮ 16ನೆ ವಯಸ್ಸಿನಲ್ಲಿ ಬರೆದಿದ್ದರು. ಆದರೆ ಅದು ಈಗಲೂ ಪ್ರಸ್ತುತ ಮತ್ತು ದಲಿತರ ಸಂಘರ್ಷಗಳ ಪ್ರಸ್ತುತತೆಯನ್ನು ಕೊಡುವ ಅದ್ಭುತ ಪ್ರಬುದ್ಧತೆ ಆ ಚಿಂತನೆಗೆ ಇದೆ.
ಅಂಬೇಡ್ಕರ್ ಎಂದೂ ಭಗತ್ ಸಿಂಗ್ ಅವರ ಕ್ರಾಂತಿಕಾರಿ ಚಳವಳಿ ಬಗ್ಗೆ ಬರೆಯಲಿಲ್ಲ. ಆದರೆ ಮೂವರು ಬಲಿಪಶುಗಳು ಎನ್ನುವ ಸಂಪಾದಕೀಯವನ್ನು ಅವರನ್ನು ನೇಣಿಗೇರಿಸಿದ ಸಂದರ್ಭ ಬರೆದಿದ್ದರು. ಅದರಲ್ಲಿ ಅವರ ಸಂಘರ್ಷದ ಬಗ್ಗೆ ಹೇಳದಿದ್ದರೂ, ಕಡಿಮೆ ರಾಜಕೀಯ ಇದ್ದರೂ ಅವರ ನೇಣು ಹೇಗೆ ತವರಿನ ರಾಜಕೀಯ ಅನುಕೂಲಸಿಂಧುವಿನಿಂದ ಪ್ರಭಾವಗೊಂಡಿದೆ ಎಂದು ವಿವರಿಸಿದೆ.
ಇದರ ಐತಿಹಾಸಿಕ ವೌಲ್ಯದ ಜೊತೆಗೆ ಅಂಬೇಡ್ಕರರ ಹಲವು ವಿದ್ಯಾರ್ಥಿಗಳಿಗೆ ಅದು ಆಸಕ್ತಿ ಹುಟ್ಟಿಸಬಹುದಾದ ಕಾರಣ ಅದರ ಅನುವಾದವನ್ನು ನಾನು ಇಲ್ಲಿ ಕೊಡುತ್ತಿದ್ದೇನೆ.
ಮೂವರು ಬಲಿಪಶುಗಳು
(ಜನತಾ ದಿನಾಂಕ 13 ಏಪ್ರಿಲ್ 1931)
ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುರನ್ನು ನೇಣಿಗೇರಿಸಲಾಗಿದೆ. ಅವರ ಮೇಲೆ ಇಂಗ್ಲಿಷ್ ಪೊಲೀಸ್ ಅಧಿಕಾರಿ ಸಾಂಡರ್ಸ್ ಮತ್ತು ಸಿಖ್ ಪೊಲೀಸ್ ಸಿಪಾಯಿ ಚಮನ್ ಸಿಂಗ್ ಕೊಲೆ ಆರೋಗ್ವಿದೆ. ಅಲ್ಲದೆ ಬನಾರಸಿನಲ್ಲಿ ಒಬ್ಬ ಪೊಲೀಸ್ ಇನ್‌ಸ್ಪೆಕ್ಟರ್ ಕೊಲೆ, ಸಂಸತ್ತಿಗೆ ಬಾಂಬ್ ದಾಳಿ, ವೌಲ್ಮಿಯ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿ ಅಮೂಲ್ಯ ವಸ್ತುಗಳನ್ನು ಕೊಳ್ಳೆ ಹೊಡೆದಂತಹ ಮೂರ್ನಾಲ್ಕು ಹೆಚ್ಚುವರಿ ಆರೋಪಗಳು ಅವರ ಮೇಲಿದೆ. ಭಗತ್ ಸಿಂಗ್ ಈಗಾಗಲೇ ಸಂಸತ್ತಿನ ಮೇಲೆ ಬಾಂಬ್ ಎಸೆದಿರುವ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಈ ಅಪರಾಧಕ್ಕೆ ಅವರು ಮತ್ತು ಬಟುಕೇಶ್ವರ್ ದತ್ ಈಗಾಗಲೇ ಜೀವಾವಧಿ ಶಿಕ್ಷೆ ಪಡೆದಿದ್ದಾರೆ. ಭಗತ್ ಸಿಂಗ್ ಅವರ ಸಹಚರರಾದ ಜೈಗೋಪಾಲ್ ಸ್ಯಾಂಡರ್ಸ್ ಕೊಲೆಯನ್ನು ಭಗತ್ ಸಿಂಗ್ ಮತ್ತು ಇತರ ಕ್ರಾಂತಿಕಾರಿಗಳು ಸೇರಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರ ಸಹಚರರ ತಪ್ಪೊಪ್ಪಿಗೆಯನ್ನು ಆಧರಿಸಿ ಸರಕಾರ ಭಗತ್ ಸಿಂಗ್ ಮೇಲೆ ಪ್ರಕರಣ ದಾಖಲಿಸಿದೆ. ಮೂವರು ಆರೋಪಿಗಳಲ್ಲಿ ಯಾರೂ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳಿರುವ ವಿಶೇಷ ನ್ಯಾಯಮಂಡಳಿಯನ್ನು ರಚಿಸಲಾಗಿದೆ. ಅದು ಪ್ರಕರಣದ ವಿಚಾರಣೆ ನಡೆಸಿ ಒಮ್ಮತದಿಂದ ಅವರಿಗೆ ನೇಣಿನ ಶಿಕ್ಷೆಯನ್ನು ಕೊಟ್ಟಿದೆ. ಭಗತ್ ಸಿಂಗ್ ತಂದೆ ಬ್ರಿಟಿಷ್ ರಾಜ ಮತ್ತು ವೈಸರಾಯ್ ಬಳಿ ಕ್ಷಮಾದಾನದ ಅರ್ಜಿ ಇಟ್ಟಿದ್ದಾರೆ. ಶಿಕ್ಷೆಯನ್ನು ಕಾರ್ಯರೂಪಕ್ಕೆ ತಾರದೆ ಇರುವುದು ಮತ್ತು ಅಗತ್ಯವಿದ್ದಲ್ಲಿ ಅದನ್ನು ಅಂಡಮಾನ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯಾಗಿ ಬದಲಿಸುವಂತೆ ಹೇಳಿದ್ದಾರೆ. ಪ್ರಮುಖ ನಾಯಕರೂ ಸಹ ಈ ವಿಚಾರವಾಗಿ ಸರಕಾರವನ್ನು ಬೇಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಭಗತ್ ಸಿಂಗ್ ಮರಣದಂಡನೆ ಗಾಂಧಿ ಮತ್ತು ಲಾರ್ಡ್ ಇರ್ವಿನ್ ನಡುವೆ ನಡೆದ ಮಾತುಕತೆಯ ಫಲವಾಗಿರಬಹುದು. ಲಾರ್ಡ್ ಇರ್ವಿನ್ ಅವರು ಭಗತ್ ಸಿಂಗ್ ಜೀವವನ್ನು ರಕ್ಷಿಸುವ ಯಾವುದೇ ನಿರ್ದಿಷ್ಟ ಭರವಸೆ ಕೊಡದೆ ಇದ್ದರೂ, ಮಧ್ಯಾಂತರ ಅವಧಿಯಲ್ಲಿ ಗಾಂಧಿಯ ಭಾಷಣವು ಇರ್ವಿನ್ ತಮ್ಮ ಅಧಿಕಾರದ ಮಟ್ಟದಲ್ಲಿ ಮೂವರು ಯುವಕರ ಜೀವ ರಕ್ಷಣೆಗೆ ಸಾಧ್ಯವಾದ ಪ್ರಯತ್ನ ಮಾಡುತ್ತಾರೆ ಎನ್ನುವ ಭರವಸೆ ಸಿಕ್ಕಿತ್ತು. ಆದರೆ ಈ ಎಲ್ಲಾ ಭರವಸೆಗಳು, ನಿರೀಕ್ಷೆಗಳು ಮತ್ತು ಬೇಡಿಕೆಗಳು ವಿಫಲವಾಗಿವೆ. ಅವರನ್ನು ಲಾಹೋರಿನ ಕೇಂದ್ರ ಜೈಲಿನಲ್ಲಿ 1931 ಮಾರ್ಚ್ 31ರಂದು ಬೆಳಗ್ಗೆ 7 ಗಂಟೆಗೆ ನೇಣಿಗೇರಿಸಿ ಕೊಲೆ ಮಾಡಲಾಗಿದೆ. ಇವರಲ್ಲಿ ಯಾರೂ ತಮ್ಮ ಜೀವ ಉಳಿಸುವಂತೆ ಬೇಡಿಕೊಂಡಿಲ್ಲ. ಆದರೆ ಈಗಾಗಲೇ ಪ್ರಕಟವಾಗಿರುವಂತೆ ಭಗತ್ ಸಿಂಗ್ ನೇಣಿಗೆ ಕೊರಳೊಡ್ಡುವ ಬದಲಾಗಿ ಬಂದೂಕಿನ ಗುಂಡುಗಳಿಂದ ಸಾಯುವ ಇಚ್ಛೆಯನ್ನು ಪ್ರಕಟಿಸಿದ್ದಾರೆ. ಆದರೆ ಅವರ ಈ ಕೊನೆಯ ಇಚ್ಛೆಯನ್ನೂ ಪೂರೈಸಿಲ್ಲ ಮತ್ತು ನ್ಯಾಯಮಂಡಳಿಯ ತೀರ್ಪನ್ನು ಅಕ್ಷರಶಃ ಅನುಷ್ಠಾನಕ್ಕೆ ತರಲಾಗಿದೆ. ತೀರ್ಪಿನ ಪ್ರಕಾರ ಸಾಯುವವರೆಗೂ ನೇಣಿಗೆ ಏರಿಸಬೇಕು. ಅವರನ್ನು ಗುಂಡಿನ ದಾಳಿ ಮಾಡಿ ಕೊಂದಲ್ಲಿ ಆ ಶಿಕ್ಷೆಯು ತೀರ್ಪನ್ನು ಅಕ್ಷರಶಃ ಪಾಲಿಸಿದಂತಾಗುವುದಿಲ್ಲ. ನ್ಯಾಯದೇವತೆಯ ಆದೇಶವನ್ನು ಹಾಗೇ ಪಾಲಿಸಲಾಗಿದೆ ಮತ್ತು ಮೂವರನ್ನು ಆಕೆ ಹೇಳಿದಂತೆ ಕೊಲೆ ಮಾಡಲಾಗಿದೆ.
ಈ ತ್ಯಾಗ ಯಾರಿಗಾಗಿ?
ಸರಕಾರವು ತನ್ನ ಈ ಭಕ್ತಿ ಮತ್ತು ನ್ಯಾಯ ದೇವತೆಗೆ ಶಿಸ್ತಿನಿಂದ ವಿಧೇಯರಾಗಿರುವುದನ್ನು ಪ್ರದರ್ಶಿಸಿರುವುದರಿಂದ ಜನರು ಸಂತುಷ್ಟರಾಗುತ್ತಾರೆ ಎಂದು ಸರಕಾರ ತಿಳಿದಿದ್ದರೆ ಮತ್ತು ಅದಕ್ಕಾಗಿ ಅವರು ಕೊಲೆ ಮಾಡುವುದಕ್ಕೆ ಅಂಗೀಕಾರ ಕೊಟ್ಟಿದ್ದಾರೆ ಎಂದರೆ, ಅದು ಅದರ ಅನುಭವದ ಕೊರತೆಯಾಗಿರುತ್ತದೆ. ಬ್ರಿಟಿಷ್ ನ್ಯಾಯ ವ್ಯವಸ್ಥೆಯ ಸ್ವಚ್ಛ ಮತ್ತು ನ್ಯಾಯಯುತ ಗೌರವವನ್ನು ನಿಭಾಯಿಸಲು ಈ ತ್ಯಾಗವನ್ನು ಮಾಡಲಾಗಿದೆ ಎಂದು ಯಾರೂ ನಂಬುವುದಿಲ್ಲ. ಅಂತಹ ಅರ್ಥಗಾರಿಕೆಯಿಂದ ಸರಕಾರ ಸ್ವತಃ ತನ್ನನ್ನು ಒಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಿರುವಾಗ ನ್ಯಾಯ ದೇವತೆಯ ಸೆರಗಿನಲ್ಲಿ ಅದು ಇತರರನ್ನು ಒಪ್ಪಿಸುವುದು ಹೇಗೆ ಸಾಧ್ಯ? ಸಂಪೂರ್ಣ ಜಗತ್ತು ಮತ್ತು ಸರಕಾರವೂ ಸಹ ಇದು ನ್ಯಾಯದೇವತೆಗೆ ತೋರಿದ ವಿಧೇಯತೆಯಲ್ಲ ಬದಲಾಗಿ ಇಂಗ್ಲೆಂಡಿನ ಕನ್ಸರ್ವೇಟಿವ್ ಪಕ್ಷ ಮತ್ತು ಸಾರ್ವಜನಿಕ ಅಭಿಪ್ರಾಯದ ಭಯದಿಂದ ಈ ತ್ಯಾಗವನ್ನು ಮಾಡಲಾಗಿದೆ. ರಾಜಕೀಯ ಕೈದಿಗಳಾಗಿರುವ ಗಾಂಧಿಯ ಬೇಷರತ್ ಬಿಡುಗಡೆ ಮತ್ತು ಗಾಂಧಿಯ ಪಕ್ಷದ ಜೊತೆಗೆ ಒಪ್ಪಂದಗಳಿಗೆ ಸಹಿ ಹಾಕುವುದು ಸಾಮ್ರಾಜ್ಯದ ಘನತೆಗೆ ಕುಂದು ತಂದಿದೆ ಎಂದು ಅವರು ಯೋಚಿಸಿದ್ದಾರೆ. ತಾಳಕ್ಕೆ ತಕ್ಕಂತೆ ಕುಣಿದ ಈಗಿನ ಲೇಬರ್ ಪಕ್ಷದ ಸಂಸತ್ತು ಮತ್ತು ವೈಸರಾಯ್ ಇದಕ್ಕೆ ಜವಾಬ್ದಾರರು ಎಂದು ಕನ್ಸರ್ವೇಟಿವ್ ಪಕ್ಷದ ಕೆಲವು ಕನ್ಸರ್ವೇಟಿವ್ ನಾಯಕರು ಪ್ರಚಾರಾಭಿಯಾನ ಆರಂಭಿಸಿದ್ದಾರೆ. ಅಂತಹ ಸ್ಥಿತಿಯಲ್ಲಿ ಇಂಗ್ಲಿಷ್ ಅಧಿಕಾರಿಯನ್ನು ಕೊಂದ ಅಪರಾಧ ಸಾಬೀತಾದವನಿಗೆ ಲಾರ್ಡ್ ಇರ್ವಿನ್ ರಾಜಕೀಯ ಕ್ರಾಂತಿಕಾರಿಗಳಿಗೆ ಕ್ಷಮಾದಾನ ತೋರಿಸಿದ್ದಲ್ಲಿ, ಅದು ಉರಿಯುವ ಪಂಜನ್ನು ವಿಪಕ್ಷ ನಾಯಕರ ಕೈಗೆ ಕೊಟ್ಟಂತಾಗುತ್ತದೆ. ಈಗಾಗಲೇ ಲೇಬರ್ ಪಾರ್ಟಿಯ ಸ್ಥಿತಿ ಸ್ಥಿರವಾಗಿಲ್ಲ. ಅಂತಹ ಸ್ಥಿತಿಯಲ್ಲಿ ಈ ಕನ್ಸರ್ವೇಟಿವ್ ನಾಯಕರಿಗೆ ಇಂಗ್ಲಿಷ್ ವ್ಯಕ್ತಿಯನ್ನು ಕೊಲೆ ಮಾಡಿದ ಲೇಬರ್ ಸರಕಾರವು ಅಪರಾಧಿಗಳಿಗೆ ಕ್ಷಮಾದಾನ ಕೊಟ್ಟಿರುವ ವಿಷಯ ಸಿಕ್ಕರೆ, ಅವರ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಪ್ರಚೋದಿಸುವುದು ಸುಲಭವಾಗುತ್ತದೆ. ಈ ಬಿಕ್ಕಟ್ಟನ್ನು ತಪ್ಪಿಸಿಕೊಳ್ಳಲು, ಕನ್ಸರ್ವೇಟಿವ್ ನಾಯಕರು ಕಿಚ್ಚು ಹಚ್ಚುವುದನ್ನು ತಪ್ಪಿಸಲು ಈ ನೇಣು ಶಿಕ್ಷೆಯನ್ನು ಕೊಡಲಾಗಿದೆ.
ಹಾಗಾಗಿ ಇದು ನ್ಯಾಯದೇವತೆಯನ್ನು ತೃಪ್ತಿಪಡಿಸಲು ಅಲ್ಲ. ಬದಲಾಗಿ ಇಂಗ್ಲೆಂಡಿನ ಸಾರ್ವಜನಿಕ ಅಭಿಪ್ರಾಯವನ್ನು ಓಲೈಸುವ ಉದ್ದೇಶ ಹೊಂದಿದೆ. ಲಾರ್ಡ್ ಇರ್ವಿನ್‌ನ ವೈಯಕ್ತಿಕ ಇಷ್ಟಾನಿಷ್ಟಗಳಾಗಿದ್ದಲ್ಲಿ, ಅವರು ತಮ್ಮ ಅಧಿಕಾರವನ್ನು ಬಳಸಿಕೊಂಡು ಮರಣ ದಂಡನೆಯನ್ನು ನಿರಾಕರಿಸಿ, ಬದಲಾಗಿ ಜೀವಿತಾವಧಿ ಶಿಕ್ಷೆಯನ್ನು ಕೊಡುತ್ತಿದ್ದರು. ಇಂಗ್ಲೆಂಡಿನ ಲೇಬರ್ ಪಾರ್ಟಿ ಸಂಸತ್ತು ಲಾರ್ಡ್ ಇರ್ವಿನ್ ನಿರ್ಧಾರವನ್ನು ಬೆಂಬಲಿಸುತ್ತಿತ್ತು. ಗಾಂಧಿ-ಇರ್ವಿನ್ ಒಪ್ಪಂದದ ಸಂದರ್ಭದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಪರವಾಗಿ ನಿಭಾಯಿಸುವುದು ಅಗತ್ಯ. ದೇಶವನ್ನು ಬಿಡುವಾಗ ಲಾರ್ಡ್ ಇರ್ವಿನ್ ಈ ಉತ್ತಮ ಅಭಿಪ್ರಾಯ ಪಡೆದುಕೊಳ್ಳಲು ಇಚ್ಛಿಸಿರಬಹುದು. ಆದರೆ ಇಂಗ್ಲೆಂಡಿನಲ್ಲಿ ತಮ್ಮ ಕನ್ಸರ್ವೇಟಿವ್ ಸಹೋದರರು ಮತ್ತು ಜಾತಿವಾದಿ ನಡವಳಿಕೆ ತೋರುವ ಭಾರತೀಯ ಅಧಿಕಾರಶಾಹಿಯ ನಡುವೆ ನಲುಗಿದರು. ಹೀಗಾಗಿ ಇಲ್ಲಿನ ಸಾರ್ವಜನಿಕ ಅಭಿಪ್ರಾಯವನ್ನು ಅಲಕ್ಷಿಸಿ ಲಾರ್ಡ್ ಇರ್ವಿನ್ ಭಗತ್ ಸಿಂಗ್ ಮತ್ತು ಅವರ ಸಹಚರರನ್ನು ನೇಣಿಗೇರಿಸಿದರು. ಅದೂ ಕಾಂಗ್ರೆಸ್‌ನ ಕರಾಚಿ ಸಮ್ಮೇಳನಕ್ಕೆ 2-4 ದಿನಗಳಿಗೆ ಮೊದಲು. ಭಗತ್ ಸಿಂಗ್ ಮತ್ತು ಸಹಚರರ ನೇಣು ಮತ್ತು ಅದರ ಸಮಯ ಗಾಂಧಿ-ಇರ್ವಿನ್ ಒಪ್ಪಂದದ ಗಾಳಿ ತೆಗೆಯಲು ಸಾಕಷ್ಟಾಗಿದೆ. ಲಾರ್ಡ್ ಇರ್ವಿನ್ ಈ ಒಪ್ಪಂದವನ್ನು ವಿಫಲಗೊಳಿಸಲು ಬಯಸಿದ್ದರೆ, ಇದಕ್ಕಿಂತ ಉತ್ತಮ ಕೃತ್ಯ ಅವರಿಗೆ ಮತ್ತೊಂದು ಸಿಗಲಾರದು. ಈ ದೃಷ್ಟಿಕೋನದಲ್ಲಿ ಗಮನಿಸಿದಾಗ ಗಾಂಧೀಜಿ ಕೂಡ ಅಂದುಕೊಂಡಿರುವಂತೆ, ಸರಕಾರ ಅತೀ ದೊಡ್ಡ ತಪ್ಪನ್ನು ಮಾಡಿದೆ ಎಂದೇ ಹೇಳಬಹುದು.
ಒಟ್ಟಾರೆಯಾಗಿ, ಇಂಗ್ಲೆಂಡಿನಲ್ಲಿ ಕನ್ಸರ್ವೇಟಿವ್‌ಗಳ ಕೋಪವನ್ನು ಗಮನಿಸದೆ, ಅವರು ಭಗತ್ ಸಿಂಗ್ ಮತ್ತು ಅವರ ಸಹಚರರನ್ನು ಸಾರ್ವಜನಿಕ ಅಭಿಪ್ರಾಯವನ್ನು ಅಲಕ್ಷಿಸಿ ತ್ಯಾಗ ಮಾಡಿದ್ದಾರೆ. ಗಾಂಧಿ ಮತ್ತು ಇರ್ವಿನ್ ಒಪ್ಪಂದಕ್ಕೆ ಏನಾಗಬಹುದು ಎಂದೂ ಯೋಚಿಸಿಲ್ಲ. ಸರಕಾರ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು, ಏನೇ ಆದರೂ ಅದು ಮರೆ ಮಾಚಬಹುದು ಮತ್ತು ಹೊಳಪು ಕೊಡಲು ಪ್ರಯತ್ನಿಸಬಹುದು. ಆದರೆ ಸತ್ಯವನ್ನು ಅಡಗಿಸಲು ಸಾಧ್ಯವಿಲ್ಲ.