ಡಾ ಆನಂದ್ ತೇಲ್‌ತುಂಬ್ಡೆ, ರಾಜಕೀಯ ವಿಶ್ಲೇಷಕ,ಲೇಖಕ ಮತ್ತು ಮುಂಬೈ ಕಾರ್ಯಕರ್ತ ಜಾಟ್ ಹಿಂಸೆ ಹರ್ಯಾಣದಲ್ಲಿ ನಡೆದಿದ್ದೇನು

Update: 2016-03-06 11:48 GMT

ಟ್ರಿಬ್ಯೂನ್ ಪತ್ರಿಕೆಯ ರಾಜಕೀಯ ವರದಿಗಾರ ರವೀಂದ್ರ ಸೈನಿ ಅವರ ಪ್ರಕಾರ, ಕಾಂಗ್ರೆಸ್ ಹಾಗೂ ಐಎನ್‌ಎಲ್‌ಡಿ ಈ ಪ್ರತಿಭಟನೆಯ ಗೌರವಕ್ಕಾಗಿ ಹಕ್ಕು ಪ್ರತಿಪಾದಿಸಲಿವೆ. ಆದರೆ ಹಿಂಸಾತ್ಮಕ ಪ್ರತಿಭಟನೆ ಜಾಟ್ ಹಾಗೂ ಇತರ ಸಮುದಾಯಗಳ ನಡುವಿನ ಸಂಘರ್ಷವಾಗಿ ರೂಪುಗೊಂಡ ಹಿನ್ನೆಲೆಯಲ್ಲಿ ಇತರ ಸಮುದಾಯದ ಮತಗಳನ್ನು ಕಾಂಗ್ರೆಸ್ ಕಳೆದುಕೊಳ್ಳುವ ಅಪಾಯವಿದೆ. ಆದರೆ ಐಎನ್‌ಎಲ್‌ಡಿಗೆ ಧ್ರುವೀಕರಣದ ಆಯ್ಕೆ ಕಡಿಮೆ ಎನ್ನುವುದು ಅವರ ಅಭಿಮತ.

ಅನುಮೇಹ ಯಾದವ್

ಚಾವ್ನಿ ಮೊಹಲ್ಲದ ಎಲ್ಲೆಡೆ ಹಿಂಸೆಯ ಹೆಜ್ಜೆಗುರುತು ದಟ್ಟವಾಗಿ ಕಂಡುಬರುತ್ತಿದೆ. ಜಜ್ಜಾರ್‌ನ ವಸತಿ ಕಾಲನಿಯ ಪ್ರವೇಶದ್ವಾರದಲ್ಲೇ ಬುಡಮೇಲಾದ ಟ್ರ್ಯಾಕ್ಟರ್ ಟ್ರಾಲಿ ಸ್ವಾಗತಿಸುತ್ತದೆ. ಸ್ವಲ್ಪ ಒಳಸಾಗಿದರೆ ರಸ್ತೆ ಮಧ್ಯದಲ್ಲಿ ಭಸ್ಮವಾದ ಟ್ರ್ಯಾಕ್ಟರ್‌ನ ಅವಶೇಷವಿದೆ. ಕಾಲನಿಯ ಮೂಲೆಯಲ್ಲಿದ್ದ ಪುಟ್ಟ ಅಂಗಡಿ ದಾಳಿಗೆ ಒಳಗಾಗಿ ಸುಟ್ಟು ಕರಕಲಾಗಿದೆ. ಕ್ಲಿನಿಕ್‌ನ ಬಾಗಿಲು ಮುದ್ದೆಯಾಗಿ ನೇತಾಡುತ್ತಿದೆ. ಮುರಿದ ಕೆಂಪು ಪ್ಲಾಸ್ಟಿಕ್ ಕುರ್ಚಿಗಳು ನಡೆದ ಹಿಂಸಾಚಾರಕ್ಕೆ ಮೂಕಸಾಕ್ಷಿಗಳಾಗಿವೆ.

ರಸ್ತೆಯ ಮೊದಲ ಮನೆಯ ಕಿಷ್ಣದೇವಿ ಚೌಹಾಣ್ ಈ ಭಗ್ನಾವಶೇಷದ ಅನತಿ ದೂರದಲ್ಲಿ, ಸಂಬಂಧಿಕರ ಜತೆ ಕೂತಿದ್ದರು. ಅವರ ಹಜಾರದ ಗೋಡೆ ಕರಕಲಾಗಿದೆ. ನೀರಿನ ಡ್ರಂ, ಮೋಟಾರ್ ಸೈಕಲ್ ಹಾಗೂ ಜಾರುಬಾಗಿಲ ಕಾರು ಭಸ್ಮವಾಗಿವೆ.

ಬಾಗಿಲ ಬಳಿ ಸಾವಿರಾರು ಮಂದಿ ಇದ್ದರು ಎಂದು ಫೆಬ್ರವರಿ 21ರ ಕರಾಳ ಘಟನೆಯ ಕಥೆ ಆರಂಭಿಸಿದರು. ಬಡಿಗೆ, ರಾಡ್ ಹಾಗೂ ಮಚ್ಚು ಹಿಡಿದಿದ್ದ ಮಂದಿ ಮನೆ ಮೇಲೆ ದಾಳಿ ಮಾಡಿದರು. ಪತಿ ಹಾಗೂ ಮಗನಿಗೆ ಇಟ್ಟಿಗೆಯಿಂದ ಹೊಡೆದಿದ್ದಾರೆ. ನಾನು ಹಾಗೂ ಮಗಳು ಮೆಟ್ಟಿಲ ಬಳಿಗೆ ಓಡಿ, ಟೆರೆಸ್‌ನ ಬದಿಯಲ್ಲಿದ್ದ ಕೊಠಡಿಯಲ್ಲಿ ಅವಿತುಕೊಂಡೆವು, ಕೊಠಡಿಯ ಕಿಟಕಿಯಿಂದ ಭಯಾನಕ ಚಿತ್ರ ಅನಾವರಣಗೊ ಳ್ಳುತ್ತಿರುವುದನ್ನು ತಾಯಿ- ಮಗಳು ವೀಕ್ಷಿಸಿದರು. ಕೆಲವರು ಬಾಗಿಲು ಮುರಿದರು; ಮೆಟ್ಟ್ಟಿಲು ಏರಿದರು; ನೆರೆಮನೆಯ ಶ್ಯಾಮಲಾಲ್ ಸೈನಿ ಅವರ ಮೇಲೆ ಮಚ್ಚಿನಿಂದ ಕತ್ತರಿಸಿ, ದೇಹವನ್ನು ಕೆಳಕ್ಕೆ ಎಸೆದರು; ಕೆಲವೇ ನಿಮಿಷಗಳ ಬಳಿಕ, ಪಕ್ಕದ ಹಿಟ್ಟಿನ ಗಿರಣಿಯಲ್ಲಿ ಅವಿತಿದ್ದ ಕೃಷ್ಣ ಸಹಾನಿಯನ್ನು ಹೊರಕ್ಕೆ ಎಳೆದು ಮಚ್ಚಿನಿಂದ ಹಲ್ಲೆ ಮಾಡಿ ದರು. 1947ರ ದೇಶ ವಿಭಜನೆ ಸಂದರ್ಭದಲ್ಲಿ ಕಂಡುಬಂದ ಹಿಂಸೆ ಗಿಂತಲೂ ಭೀಕರ ಎಂದು ನಡುಗುವ ಧ್ವನಿಯಲ್ಲಿ ಚೌಹಾಣ್ ವಿವರಿಸಿದರು.

ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಆಗ್ರಹಿಸಿ ಜಾಟ್ ಸಮುದಾಯ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡು, 20 ಮಂದಿಯನ್ನು ಬಲಿ ಪಡೆಯಿತು. 200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಸುಮಾರು ಹತ್ತು ದಿನಗಳ ಕಾಲ ಕಟ್ಟಡಗಳನ್ನು ಹಾಗೂ ವಾಹನಗಳನ್ನು ಸುಟ್ಟುಹಾಕಲಾಯಿತು. ಹರ್ಯಾಣ ಸುತ್ತಮುತ್ತ ರೈಲು ತಡೆ ಹಾಗೂ ಹೆದ್ದಾರಿ ತಡೆ ನಡೆಸಿದರು. ಅದರಲ್ಲೂ ಮುಖ್ಯವಾಗಿ ಜಜ್ಜಾರ್ ಹಾಗೂ ರೋಹ್ಟಕ್ ನಲ್ಲಿ ಹಿಂಸೆ ಉಗ್ರರೂಪ ಪಡೆದಿತ್ತು. ಸರಕಾರಿ ಬೊಕ್ಕಸಕ್ಕೆ ಈ ಹಿಂಸಾ ಕೃತ್ಯಗಳಿಂದ ಸುಮಾರು 20 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.ಹರ್ಯಾಣದ ಕೃಷಿಕ ಸಮುದಾಯವಾದ ಜಾಟ್ ಜನಾಂಗ ದವರು ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸೇರ್ಪಡೆಗೆ ಆಗ್ರಹಿಸಿ ಚಳವಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಉದ್ಯೋಗ ಸೃಷ್ಟಿ ನಿಧಾನವಾಗಿ, ಶಿಕ್ಷಣ ವ್ಯವಸ್ಥೆ ವಿಫಲವಾದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ನಿರುದ್ಯೋಗಿಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆ ಯಲ್ಲಿ 2009ರಿಂದಲೇ ಮೀಸಲಾತಿಗೆ ಆಗ್ರಹಿಸುತ್ತಾ ಬಂದಿದ್ದಾರೆ.

2010ರ ಸೆಪ್ಟಂಬರ್ ಹಾಗೂ 2012ರ ಮಾರ್ಚ್‌ನಲ್ಲಿ ನಡೆದ ಹಿಂಸೆಯಲ್ಲಿ ಇಬ್ಬರು ಯುವಕರು ಬಲಿಯಾಗಿದ್ದರು. ಆದರೆ ಈ ಪ್ರಮಾಣದ ಹಿಂಸಾಕೃತ್ಯ ಹಿಂದೆಂದೂ ನಡೆದಿರಲಿಲ್ಲ. ಈ ಬಾರಿಯ ಆಕ್ರೋಶದಿಂದ ಸಂಕಷ್ಟಕ್ಕೀಡಾದವರಲ್ಲಿ ಬಹುತೇಕ ಸೈನಿಗಳು. ಸಾಂಪ್ರದಾಯಿಕವಾಗಿ ತರಕಾರಿ ಬೆಳೆಯುವ ಈ ಸಮುದಾಯ ಚಿಕ್ಕ ಭೂ ಹಿಡುವಳಿಗಳನ್ನು ಹೊಂದಿದೆ. ಇವರ ಜತೆಗೆ ಪಾಕಿಸ್ತಾನದಿಂದ ವಲಸೆ ಬಂದು ಈ ಭಾಗದಲ್ಲಿ ನೆಲೆನಿಂತ ಪಂಜಾಬಿಗಳು. ಇದೀಗ ಹಿಂಸೆಯಿಂದಾಗಿ ಹರ್ಯಾಣದ ಸಮುದಾಯಗಳ ನಡುವಿನ ಸ್ನೇಹ ಸಂಬಂಧ ನಶಿಸಿ ಪರಸ್ಪರರಲ್ಲಿ ಸಂದೇಹ ಮನೆಮಾಡಿದೆ. ಜಾಟ್ ಹಾಗೂ ಇತರ ಸಮುದಾಯಗಳ ನಡುವಿನ ರಾಜಕೀಯ ಭೇದಭಾವ ಮುಂದೆಂದೂ ಸರಿಪಡಿಸಲಾಗದ ಮಟ್ಟಿಗೆ ಬೆಳೆದಿದೆ.

ಪೊಲೀಸರು, ಸೈನಿಕರತ್ತ ಸಿಟ್ಟು

 ರೋಹ್ಟಕ್‌ನಲ್ಲಿ ಔಷಧಶಾಸ್ತ್ರ ವಿದ್ಯಾರ್ಥಿ ವಿಕ್ರಾಂತ್ ಜೋಗಿ ಹೇಳುವಂತೆ ಜಾಟ್ ಸಮುದಾಯದ ವಿರುದ್ಧ ರಾಜ್ಯದ ಇತರ ಎಲ್ಲ 35 ಸಮುದಾಯಗಳು ಒಂದಾಗಿವೆ. ಈ ಮೊದಲು ನಾವು 36 ಸಮುದಾಯದವರು ಒಂದಾಗಿದ್ದೆವು. ಈಗ 35 ಸಮುದಾ ಯದವರು ಜಾಟ್ ಸಮುದಾಯ ವಿರುದ್ಧ ಒಂದಾಗಿದ್ದೇವೆ.

ರಾಜ್ಯದಲ್ಲಿ ಮೊದಲ ಬಾರಿಗೆ ಪಂಜಾಬಿ ಖತ್ರಿ ಮುಖ್ಯಮಂತ್ರಿ (ಮನೋಹರಲಾಲ್ ಖಟ್ಟರ್) ಅವರನ್ನು ಬಿಜೆಪಿ 1998ರಲ್ಲಿ ನೇಮಕ ಮಾಡಿದ ಬಳಿಕ ಜಾಟ್ ಸಮುದಾಯದವರು ಮುನಿಸಿ ಕೊಂಡಿದ್ದಾರೆ. ಇದು ಈಗ ರಾಜಕೀಯ ಕವಲಿಗೆ ಕರಣವಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಜಜ್ಜಾರ್‌ನಲ್ಲಿ ಪ್ರತಿಭಟನಾಕಾರರು ಸೈನಿ ಸಮುದಾಯದವರು ಪ್ರಮುಖವಾಗಿರುವ ಛಾವ್ನಿ ಕಾಲನಿ ಮೇಲೆ ದಾಳಿ ಮಾಡಿದ್ದಾರೆ. ಜಜ್ಜಾರ್‌ನ ಮೂರು ಪಟ್ಟು ಜನಸಂಖ್ಯೆ ಹೊಂದಿದ ರೋಹ್ಟಕ್ ನಗರದಲ್ಲಿ ಪ್ರಮುಖ ಗುರಿ ಮನೆಗಳಲ್ಲ; ಬದಲಾಗಿ ಬ್ರಾಂಡೆಡ್ ಷೋರೂಂಗಳ ಮಳಿಗೆಗಳಿರುವ ಮಾದರಿ ನಗರದ ಮಾರುಕಟ್ಟೆ. ಈ ಎರಡೂ ನಗರಗಳ ದಾಳಿಯಲ್ಲಿ ಪಾಲ್ಗೊಂಡಿದ್ದ ಗುಂಪಿನಲ್ಲಿ ನಗರ ಯುವಕರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು. ಬಹುತೇಕ ಸಂಖ್ಯೆಯಲ್ಲಿದ್ದವರು ಪಕ್ಕದ ಗ್ರಾಮಸ್ಥರು. ಬೈಕ್ ಹಾಗೂ ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಇವರು ಆಗಮಿಸಿದ್ದರು.

ರೋಹ್ಟಕ್‌ನ ಪ್ರೇಮ್‌ನಗರದ ನಿವಾಸಿ ಹಿರಿಯ ಜಾಟ್ ಮುಖಂಡ ಧನ್ನೋ ನೈನ್ ಹೇಳುವಂತೆ, ಜಾಟ್ ಸಮುದಾಯ ಕೂಡಾ ದಾಳಿ ಬಗ್ಗೆ ಜಾಗರೂಕವಾಗಿದೆ. ಅಕ್ಕಪಕ್ಕದ ಹಲವು ಮನೆಗಳ ಟೆರೆಸ್‌ಗಳಲ್ಲಿ ಕಲ್ಲು ಹಾಗೂ ಇಟ್ಟಿಗೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಮತ್ತೆ ಹಿಂಸಾಚಾರ ಸ್ಫೋಟಗೊಂಡರೆ ತಮ್ಮನ್ನು ರಕ್ಷಿಸಿಕೊಳ್ಳಲು ಹೀಗೆ ಮಾಡಿದ್ದಾಗಿ ಅವರು ಹೇಳುತ್ತಾರೆ. ಪ್ರೇಮ್‌ನಗರದಿಂದ ಕೆಲವೇ ಮೀಟರ್ ದೂರದಲ್ಲಿರುವ ಸೈನಿಪುರ ಹಾಗೂ ಚಮನ್‌ಪುರ ಕಾಲನಿ ಗಳ ಸೈನಿ ಸಮುದಾಯದವರು ಹೇಳುವಂತೆ, 12 ದಿನಗಳ ಕಾಲ ನಾವು ಅತ್ಯಂತ ಎಚ್ಚರಿಕೆ ವಹಿಸಿದ್ದೆವು. ಇದೀಗ ಛಾವ್ನಿ ಕಾಲನಿಯಲ್ಲಿ ನಡೆದಂಥ ಗುಂಪುದಾಳಿಯ ಭೀತಿಯಿಂದ ಮುಕ್ತರಾಗಿದ್ದೇವೆ. ಏಕೆಂ ದರೆ ಇದೀಗ ಅವರ ದೃಷ್ಟಿ ಪೊಲೀಸರು ಹಾಗೂ ಭದ್ರತಾ ಪಡೆಗಳತ್ತ ತಿರುಗಿದೆ.

ಎಲೆಕ್ಟ್ರಿಷಿಯನ್ ಸುನೀಲ್ ಕುಮಾರ್ ಪ್ರಕಾರ, ಇದು ಜಾಟ್ ಸಮುದಾಯದವರು ಅಧಿಕಾರಿಗಳ ಜತೆ ಶಾಮೀಲಾಗಿ ನಡೆಸಿದ ಪೂರ್ವನಿಯೋಜಿತ ದಾಳಿ. ರಾಜ್ಯ ಪೊಲೀಸ್ ಪಡೆಯಲ್ಲಿ ಭಾರೀ ಸಂಖ್ಯೆಯ ಜಾಟ್ ಸಮುದಾಯದವರಿದ್ದಾರೆ ಎನ್ನುವುದು ಅವರು ತಮ್ಮ ವಾದಕ್ಕೆ ನೀಡುವ ಸಮರ್ಥನೆ. ರೋಹ್ಟಕ್ ಎಸ್ಪಿ ಶಶಾಂಕ್ ಆನಂದ್ ಹೇಳುವಂತೆ, ಸಾವಿರಾರು ಮಂದಿ ಕರ್ಫ್ಯೂ ಧಿಕ್ಕರಿಸಿ ಶಸ್ತ್ರಾಸ್ತ್ರ, ವೈರ್‌ಲೆಸ್ ಸೆಟ್ ಹಾಗೂ ಅಧಿಕೃತ ದಾಖಲೆಗಳನ್ನು ಹೊಂದಿರುವ ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿದ್ದಾರೆ. ಆದರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರಾಹುಲ್ ಸೈನಿ, ಗಲಭೆೆಯ ವೇಳೆ ಪೊಲೀಸ್ ಠಾಣೆಗಳಿಗೆ ಬೀಗ ಜಡಿದಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದ ಪೊಲೀಸ್ ನೆರವು ಪಡೆಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳುತ್ತಾರೆ. ಭಾರತೀಯ ಸೇನೆಯ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರು ಜಾಟ್ ಸಮುದಾಯಕ್ಕೆ ಸೇರಿದ್ದು, ತಮ್ಮ ಸಮುದಾಯದ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಇಚ್ಛಿಸದ ಕಾರಣದಿಂದ ಹಲವು ದಿನಗಳ ಕಾಲ ಹಿಂಸೆ ತಡೆಯಲು ಸಾಧ್ಯವಾಗಲಿಲ್ಲ ಎಂದು ಸಣ್ಣ ಇಲೆಕ್ಟ್ರಿಕಲ್ ಅಂಗಡಿ ಹೊಂದಿರುವ ಅನಿಲ್ ಸೈನಿ ದೂರುತ್ತಾರೆ.

ಆರಂಭ ಹೇಗೆ?

ಜಾಟ್ ಸಮುದಾಯ ಹಮ್ಮಿಕೊಂಡಿದ್ದ ರೈಲು ತಡೆ ಸ್ಥಳೀಯವಾಗಿ ಮಾತ್ರ ಸುದ್ದಿ ಮಾಡಿತ್ತು. ಅಲ್ಲಿಂದ ಈ ಅಭೂತಪೂರ್ವ ಹಿಂಸಾಚಾರ ಆರಂಭವಾಯಿತು. ಫೆೆಬ್ರವರಿ 12 ಹಾಗೂ 13ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ನಿವೃತ್ತ ಕಮಾಂಡೆಂಟ್ ಹಾಗೂ ಆಲ್ ಇಂಡಿಯಾ ಜಾಟ್ ಆರಕ್ಷಣ್ ಸಂಘರ್ಷ ಸಮಿತಿಯ ಹರ್ಯಾಣ ಘಟಕದ ಮುಖ್ಯಸ್ಥ ಹವಾ ಸಿಂಗ್ ಸಂಘವಾನ್ ನೇತೃತ್ವದಲ್ಲಿ ಹಿಸ್ಸಾರ್ ಸಮೀಪದ ಮಯ್ಯಾರ್ ಗ್ರಾಮದಲ್ಲಿ ರೈಲು ತಡೆ ನಡೆಸಲಾಯಿತು. ಅದೇ ಗ್ರಾಮದಲ್ಲಿ ಸಂಘವಾನ್ 2012ರ ಡಿಸೆಂಬರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾಗ, ಕಾಂಗ್ರೆಸ್ ಸರಕಾರ ಜಾಟ್ ಸಮುದಾಯ ಸೇರಿದಂತೆ ಐದು ಸಮುದಾಯಗಳಿಗೆ ವಿಶೇಷ ಹಿಂದುಳಿದ ವರ್ಗಗಳ ಸ್ಥಾನಮಾನ ನೀಡಿತ್ತು.

ಈ ಬಾರಿ ಸಂಘವಾನ್ ಎರಡು ಬೇಡಿಕೆಗಳನ್ನು ಮುಂದಿಟ್ಟರು. ಒಂದು ಬಿಜೆಪಿ ಸರಕಾರದಲ್ಲಿರುವ ಮೂವರು ಪ್ರಮುಖ ಜಾಟ್ ಸಚಿವರಲ್ಲಿ ಒಬ್ಬರು ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುತ್ತೇವೆ ಎಂದು ಖಾತ್ರಿಪಡಿಸಬೇಕು ಹಾಗೂ ಇನ್ನೊಂದು, ಪಕ್ಷದ ಸಂಸದ ರಾಜ್‌ಕುಮಾರ್ ಸೈನಿ, ಜಾಟ್ ಸಮುದಾಯದ ವಿರುದ್ಧ ಕಳೆದ ಹತ್ತು ತಿಂಗಳಿಂದ ಕಿರುಚುತ್ತಿರುವುದಕ್ಕೆ ತಡೆ ಹಾಕಬೇಕು ಎನ್ನುವುದು.

ಹಿಂದುಳಿದ ವರ್ಗಕ್ಕೆ ಸೇರಿದ ರಾಜ್‌ಕುಮಾರ್ ಸೈನಿ ಕುರುಕ್ಷೇತ್ರ ದಿಂದ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಸಾಂಪ್ರದಾ ಯಿಕವಾಗಿ ಪ್ರಬಲವಾಗಿರುವ ಜಾಟ್ ಸಮುದಾಯದಂಥ ಸಮು ದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವುದರಿಂದ ಇತರರಿಗೆ ಮೀಸಲಾತಿ ಸೌಲಭ್ಯಗಳು ದುರ್ಬಲ ವಾಗುತ್ತವೆ ಎಂದು ಸೈನಿ ಹೇಳಿಕೆ ನೀಡುತ್ತಾ ಬಂದಿದ್ದಾರೆ.

ನೆರೆಯ ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ತಾವು ಚಳವಳಿ ಆರಂಭಿಸಿದ್ದಾಗಿ ಸಂಘವಾನ್ ಹೇಳುತ್ತಾರೆ. ಉತ್ತರಪ್ರದೇಶದಲ್ಲಿ ಜಾಟ್ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಸ್ಥಾನ ನೀಡಲಾಗಿದೆ. ಚುನಾವಣೆ ಸನಿಹವಿರುವ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರಕಾರ ಜಾಟ್ ಸಮುದಾಯಕ್ಕೆ ಹರ್ಯಾಣದಲ್ಲೂ ಈ ಸೌಲಭ್ಯ ವಿಸ್ತರಿಸಬಹುದು ಎಂಬ ನಿರೀಕ್ಷೆ ಜಾಟ್ ಸಮುದಾಯದ್ದಾಗಿತ್ತು.

ಈ ಹಿನ್ನೆಲೆಯಲ್ಲಿ ಹರ್ಯಾಣ ಜಾಟ್ ಮುಖಂಡರು ಫೆಬ್ರವರಿ 13ರಂದು ದಿಲ್ಲಿ- ಹಿಸ್ಸಾರ್ ರೈಲುಹಳಿ ತಡೆದರು. ತಮ್ಮ ಸರಕಾರ ಮಾರ್ಚ್ 31ರೊಳಗೆ ಈ ಬೇಡಿಕೆ ಈಡೇರಿಸಲಿದೆ ಎಂದು ಜಾಟ್ ಸಮುದಾಯಕ್ಕೆ ಸೇರಿದ ಕೃಷಿ ಸಚಿವ ಓ.ಪಿ.ಧನಕರ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಹಳಿಗಳಿಂದ ಚದುರಿದರು.

ಆದಾಗ್ಯೂ ಮರುದಿನ ಪರಿಸ್ಥಿತಿ ಹಿಂಸಾತ್ಮಕ ರೂಪ ಪಡೆಯಿತು.

ರೋಹ್ಟಕ್, ಜಜ್ಜಾರ್ ಹಾಗೂ ಸೋನಿಪತ್‌ನ ಖಾಪ್ ಮುಖಂಡರು ಕರೆ ನೀಡಿದ್ದ ಜಾಟ್ ಸ್ವಾಭಿಮಾನ ರ್ಯಾಲಿಯಲ್ಲಿ, ಸರಕಾರ ತನ್ನ ಆಶ್ವಾಸನೆ ಈಡೇರಿಸಲು ವಿಫಲವಾದಲ್ಲಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲು ಎಪ್ರಿಲ್ 6ರಂದು ರಾಜ್ಯಮಟ್ಟದ ಸಭೆ ನಡೆಸಲು ನಿರ್ಧರಿಸಿದರು. ಆದರೆ ರ್ಯಾಲಿ ಯಲ್ಲಿ ಪಾಲ್ಗೊಂಡಿದ್ದ ಯುವಕರು ತಕ್ಷಣದ ಹಾಗೂ ಪ್ರಬಲ ಪರಿಹಾರವನ್ನು ಬಯಸಿದರು. ಮುಖಂಡರ ಆದೇಶವನ್ನು ಧಿಕ್ಕರಿಸಿ, 1,500ಕ್ಕೂ ಹೆಚ್ಚು ಯುವಕರು ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 10)ಗೆ ಆಗಮಿಸಿ ದಿಲ್ಲಿ- ಪಂಜಾಬ್ ಹೆದ್ದಾರಿ ತಡೆದರು. ಇದಾಗಿ ಎರಡು ದಿನಗಳ ಕಾಲ ಪ್ರತಿಭಟನೆ ಹಾಗೂ ರಸ್ತೆ ತಡೆ ವಿಸ್ತರಿಸಿದರೂ ಫೆಬ್ರವರಿ 15 ಮತ್ತು 16ರಂದು ಯಾವ ಹಿಂಸಾಚಾರವೂ ನಡೆಯಲಿಲ್ಲ. ಆದರೆ ಪ್ರಯಾಣಿಕರು ಹೆದ್ದಾರಿ ಯ ಬದಲಾಗಿ ಪರ್ಯಾಯ ಮಾರ್ಗಗಗಳನ್ನು ಬಳಸಲು ಮುಂದಾದಾಗ, ಮೂರು ಜಿಲ್ಲೆಗಳಲ್ಲಿ ಸಂಪರ್ಕ ರಸ್ತೆಗಳನ್ನು ಕೂಡಾ ಪ್ರತಿಭಟ ನಾಕಾರರು ತಡೆದರು.

ಆ ಕರಾಳ ದಿನ

ಫೆಬ್ರವರಿ 18ರಂದು ರೋಹ್ಟಕ್‌ನಲ್ಲಿ ಜಿಲ್ಲಾ ನ್ಯಾಯಾಲಯದ ಮುಂದೆ ಯುವ ವಕೀಲರು, ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಕಾರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಅಗ್ರಹಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ 35 ಬಿರದಾರಿ ಸಂಘರ್ಷ ಸಮಿತಿ ಎಂಬ ಫಲಕಗಳನ್ನು ಹಿಡಿದ 150-200 ಮಂದಿ ವ್ಯಾಪಾರಿಗಳು ಜಾಥಾ ಹಮ್ಮಿಕೊಂಡಿದ್ದರು. ಅವರು ಸಮಾವೇಶಗೊಂಡಾಗ, ವಕೀಲರು ಜಾಟ್ ಸಮುದಾಯದ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡರು.ವ್ಯಾಪಾರಿಗಳು ದಾಳಿ ಮಾಡಿದಾಗ, ಅದರಲ್ಲಿ ಪಂಜಾಬಿ ಖತ್ರಿ ಹಾಗೂ ಪಂಡಿತ್ ವಕೀಲರೂ ಇದ್ದರು ಎಂದು ಜಾಟ್ ವಕೀಲ ರಜನೀಶ್ ಹೂಡಾ ವಿವರಿಸುತ್ತಾರೆ. ನಾವು ಸಂಚಾರಕ್ಕೆ ಅನುವು ಮಾಡಿಕೊಟ್ಟೆವು. ಆದರೆ, 35 ಬಿರದಾರಿ ಬ್ಯಾನರ್‌ಗಳನ್ನು ಹಿಡಿದಿದ್ದ ವ್ಯಾಪಾರಿಗಳು, ಸಿಎಂ ಸಾಬ್ ಆಫ್‌ಮತ್ ಘಬ್ರಾವೋ, 35 ಬಿರದಾರಿ ಆಫ್ ಕೆ ಸಾಥ್ ಹೈ ಎಂಬ ಘೋಷಣೆ ಕೂಗಿ ನಮ್ಮ ಮೇಲೆ ದಾಳಿ ನಡಸಿದ್ದರು ಎಂದು ವಿವರಿಸಿದರು. ಆದರೆ ವ್ಯಾಪಾರಿಗಳ ಸಂಘ ಬಳಿಕ ಹೇಳಿಕೆ ನೀಡಿ, ರಸ್ತೆ ತಡೆಯಿಂದ ಆಗುತ್ತಿರುವ ವ್ಯಾಪಾರ ನಷ್ಟದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ಹೋಗುತ್ತಿದ್ದಾಗ ವಕೀಲರು ತಡೆದರು ಎಂದು ಆಪಾದಿಸಿತು.

ಮೊದಲ ಪರಸ್ಪರ ದಾಳಿಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ವಕೀಲರು ಮತ್ತೆ ಸಮಾವೇಶಗೊಂಡು ಮಧ್ಯಾಹ್ನದ ಬಳಿಕ ವ್ಯಾಪಾರಿಗಳ ಮೇಲೆ ಎರಡನೆ ಬಾರಿ ದಾಳಿ ನಡೆಸಿದರು. ಜಾಟ್ ಕಾಲೇಜು, ಮಹರ್ಷಿ ದಯಾನಂದ ವಿಶ್ವವಿದ್ಯಾನಿಯದ ಜಾಟ್ ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳ ನಡುವೆ ರಾಂಚಿಯ ಅಶೋಕ ಟವರ್ ಬಳಿ ಮೂರನೆ ಸಂಘರ್ಷ ನಡೆಯಿತು. ಎರಡು ಬಾರಿ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಿಸಿದರು. ತಕ್ಷಣ ಈ ಪ್ರತಿಭಟನೆಗಳು ಜಾಟ್ ಹಾಗೂ ಜಾಟ್ ಹೊರತಾದ ಸಮುದಾಯಗಳ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿತು.

ಮರುದಿನ ರಾತ್ರಿ ಪೊಲೀಸರು ನೇಕಿರಾಂ ಕಾಲೇಜಿನ ವಿದ್ಯಾರ್ಥಿ ನಿಲಯವನ್ನು ಪ್ರವೇಶಿಸಿ ವಿದ್ಯಾರ್ಥಿಗಳನ್ನು ಥಳಿಸಿದ ಬಳಿಕ ಮತ್ತಷ್ಟು ಯುವಕರು ಸೇರಿಕೊಂಡರು. ಇಬ್ಬರು ಪೊಲೀಸರ ಮೇಲೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನುವುದು ಪೊಲೀಸರ ವಾದ. ಆದರೆ ಕಾಲೇಜಿನ ಸಿಬ್ಬಂದಿ ಹೇಳುವಂತೆ, ಪೊಲೀಸರು ಜಾತಿಯ ಕಾರಣಕ್ಕೆ ವಿದ್ಯಾರ್ಥಿಗಳನ್ನು ಗುರಿ ಮಾಡಿದ್ದಾರೆ.

ರಾತ್ರಿ 8ರ ಸುಮಾರಿಗೆ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾಗ, ಪೊಲೀಸರು ಹಾಸ್ಟೆಲ್‌ಗೆ ಆಗಮಿಸಿದರು. ನೀವು ಜಾಟ್ ಸಮುದಾಯದವರೇ ಎಂದು ಕೇಳಿ ವಿದ್ಯಾರ್ಥಿಗಳನ್ನು ಥಳಿಸಿದರು ಹಾಗೂ ಬಿಸಿ ಬೇಳೆಯನ್ನು ವಿದ್ಯಾರ್ಥಿಗಳತ್ತ ಚೆಲ್ಲಿದರು ಎಂದು ಭೂಗೋಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಜೋಗೇಂದ್ರ ಅಹ್ಲಾವಟ್ ಹೇಳುತ್ತಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಯಿತು. ಬಳಿಕ ಡಿವೈಎಸ್ಪಿ ಸೇರಿದಂತೆ ಹಲವು ಮಂದಿ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಯಿತು.

ಮರುದಿನ ಅಂದರೆ ಫೆೆಬ್ರವರಿ 20ರಂದು ಗ್ರಾಮೀಣ ಯುವಕರು ಟ್ರ್ಯಾಕ್ಟರ್‌ಗಳಲ್ಲಿ ಜಜ್ಜಾರ್ ಮತ್ತು ರೋಹ್ಟಕ್‌ಗೆ ಆಗಮಿಸಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತರು. ಕೆಲವೇ ಕ್ಷಣದಲ್ಲಿ ರೋಹ್ಟಕ್‌ನಿಂದ 30 ಕಿಲೋಮೀಟರ್ ದೂರದ ಜಜ್ಜಾರ್‌ನಲ್ಲಿ ಹಿಂಸಾಚಾರ ಸ್ಫೋಟವಾಯಿತು. ಜಜ್ಜರ್ ಬಸ್ ನಿಲ್ದಾಣದ ಬಳಿ, ಜಾಟ್ ಪ್ರತಿಭಟನಾಕಾರರು ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಸೈನಿ ಹಾಗೂ ಪಂಜಾಬಿ ಸಮುದಾಯದವರ ಅಂಗಡಿಗಳನ್ನೇ ಹುಡುಕಿ ಹುಡುಕಿ ದಾಳಿ ಮಾಡಿದರು. ಭಗತ್ ಸಿಂಗ್ ಚೌಕದಲ್ಲಿ ಪೊಲೀಸರು ಗುಂಡು ಹಾರಿಸಿದಾಗ ಮೂವರು ಬಲಿಯಾದರು. ಮೃತ ದೇಹಗಳನ್ನು ಆ ರಾತ್ರಿ ಜಾಟ್ ವಿಶ್ರಾಂತಿಗೃಹವಾದ ಸರ್ ಚೋಟುರಾಂ ಧರ್ಮಶಾಲಾದಲ್ಲಿ ಇಡಲಾಯಿತು. 21ರ ಮುಂಜಾನೆ ಪ್ರತಿದಾಳಿ ನಡೆಸಿ 25 ವರ್ಷದ ಹಳೆಯ ಜಾಟ್ ಧರ್ಮಶಾಲೆಗೆ ಬೆಂಕಿ ಹಚ್ಚಲಾಯಿತು. ಸಿಬ್ಬಂದಿ ತಪ್ಪಿಸಿಕೊಂಡರೂ, 20 ಮಂದಿ ಈ ಘಟನೆಯಲ್ಲಿ ಜೀವಂತ ದಹನವಾದರು ಎಂದು ಗಾಳಿ ಸುದ್ದಿ ಹರಡಿತು. ಇದರಿಂದ ಮತ್ತಷ್ಟು ಮಂದಿ ಯುವಕರು ಜಜ್ಜಾರ್‌ಗೆ ಧಾವಿಸಿದರು.

ಜಜ್ಜಾರ್ ಪಟ್ಟಣದ ಏಕೈಕ ಸೈನಿ ಪ್ರಾಬಲ್ಯದ ಚಾವ್ನಿ ಮೊಹಲ್ಲ ಜನ, ಹಿಂಸಾಕೃತ್ಯವನ್ನು ನಿರೀಕ್ಷಿಸಿಕೊಂಡು ಇಡೀ ರಾತ್ರಿ ನಿದ್ದೆ ಮಾಡಲಿಲ್ಲ. ಕಾಲನಿ ಪ್ರವೇಶದ್ವಾರದ ಬಳಿ ಎರಡು ಟ್ರ್ಯಾಕ್ಟರ್‌ಗಳನ್ನು ಅಡ್ಡವಾಗಿ ನಿಲ್ಲಿಸಿ ಯಾರೂ ಪ್ರವೇಶಿಸದಂತೆ ತಡೆದರು. ರಸ್ತೆಯ ಮೇಲೆ ನಿಗಾ ಇಟ್ಟು, ಟೆರೆಸ್‌ಗಳಲ್ಲಿ ನಿಂತು ಕಾವಲು ನಡೆಸಿದರು. ಆದರೆ ಮೂರು ಸಾವಿರ ಮಂದಿಯ ಗುಂಪು ಚಾವ್ನಿ ಮೊಹಲ್ಲಾ ಮೇಲೆ ದಾಳಿ ನಡೆಸಿದಾಗ ಅವರಿಗೆ ಯಾವ ರಕ್ಷಣೆಯೂ ಇರಲಿಲ್ಲ. ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಶಾಮ್‌ಲಾಲ್ ಸೈನಿ ಹಾಗೂ ಕೃಷಿಕ ಕೃಷ್ಣ ಸೈನಿ ಅವರನ್ನು ಕೊಚ್ಚಿಹಾಕಿದ ಗುಂಪು, 25ಕ್ಕೂ ಹೆಚ್ಚು ಅಂಗಡಿಗಳನ್ನು, 13 ಮನೆಗಳನ್ನು ಹಾಗೂ ಹಲವಾರು ವಾಹನಗಳನ್ನು ಸುಟ್ಟುಹಾಕಿತು. 200 ಸೈನಿಕರು ಹಾಗೂ ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ಕೂಡಾ, 11 ಬೇರೆ ಬೇರೆ ದಾರಿಗಳಿಂದ ಹಾಗೂ ಪಕ್ಕದ ಬಯಲಿನಿಂದ ನುಗ್ಗಿದ ಜಾಟ್ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಜಜ್ಜಾರ್ ಎಸ್ಪಿ ಸುಮಿತ್ ಕುಮಾರ್ ಹೇಳುತ್ತಾರೆ. ವಿಭಜನೆ ರಾಜಕೀಯ

ಹಿಂಸೆ ಕೊನೆಗೊಂಡ ಬಳಿಕ ಇದೀಗ ಘಟನಾವಳಿಗಳ ವಿಶ್ಲೇಷಣೆ ಹರ್ಯಾಣದಲ್ಲಿ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಅವರ ರಾಜಕೀಯ ಅನುಯಾಯಿ ಪ್ರೊಫೆಸರ್ ವೀರೇಂದ್ರ ಸಿಂಗ್ ಎಂಬವರು ದಲಾಲ್ ಖಾಫ್‌ನ ಮುಖಂಡ ಕ್ಯಾಪ್ಟನ್ ಮಾನ್ ಅವರನ್ನು ಕುರಿತು ಹಿಂಸೆ ತೀವ್ರಗೊಳಿಸುವಂತೆ ಹೇಳುತ್ತಿರುವ ಆಡಿಯೊ ತುಣುಕು ಇದೀಗ ಒಂದು ವಾರದಿಂದ ಹರಿದಾಡುತ್ತಿದೆ. ಈ ಧ್ವನಿಮುದ್ರಿಕೆಯನ್ನು ಇನ್ನೂ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕಿದ್ದು, ಅದು ತಮ್ಮದೇ ಧ್ವನಿ ಎಂದು ಸಿಂಗ್ ಒಪ್ಪಿಕೊಂಡಿದ್ದಾರೆ. ಆ ಬಳಿಕ ಅವರ ವಿರುದ್ಧ ದೇಶದ್ರೋಹ ಆರೋಪವನ್ನು ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಹೊರಿಸಿದೆ.

ಈ ಪ್ರತಿಭಟನೆಯನ್ನು ಹಿಂಸೆಯಾಗಿ ಪರಿವರ್ತಿಸುವಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಹಲವು ಮಂದಿ ವಿಶ್ಲೇಷಕರು ದ್ವನಿಮುದ್ರಿಕೆ ತುಣುಕಿನ ಆಧಾರದಲ್ಲಿ ಹೇಳುತ್ತಾರೆ. ಆದರೆ ಜಾಟ್ ಮುಖಂಡರ ಪ್ರಕಾರ, ಈ ಪ್ರತಿಭಟನೆ ನಾಯಕರಹಿತ ಪ್ರತಿಭಟನೆ. ಆಲ್ ಇಂಡಿಯಾ ಜಾಟ್ ಆರಕ್ಷಣ್ ಸಂಘರ್ಷ ಸಮಿತಿಯ ಹವಾಸಿಂಗ್ ಸಂಘವಾನ್ ಹಾಗೂ ಅವರ ಪ್ರತಿಸ್ಪರ್ಧಿ ಅಖಿಲ ಭಾರತೀಯ ಆದರ್ಶ ಜಾಟ್ ಮಹಾಸಭಾದ ದೀಪಕ್ ರಾಠಿ ಹೇಳುವಂತೆ, ಫೆಬ್ರವರಿ 14ರ ಸಪ್ಲಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜಾಟ್ ಯುವಕರ ನಡವಳಿಕೆ ಎಲ್ಲರ ನಿಯಂತ್ರಣವನ್ನೂ ಮೀರುವಂತಿತ್ತು. ಬಹುಶಃ ಯುವಕರಲ್ಲಿ ಹೆಚ್ಚುತ್ತಿರುವ ಹತಾಶೆ ಅಥವಾ ರಾಜಕೀಯ ವಿನ್ಯಾಸದ ಕಾರಣದಿಂದ ಸಾವಿರಾರು ಯುವಕರು ಪ್ರತಿಭಟನೆಯಲ್ಲಿ ಸಕ್ರಿಯರಾದರು.

ರಾಜಕೀಯವಾಗಿ ಜಾಟ್-ದೇಸ್ವಾಲಿ ಪ್ರದೇಶ ರೋಹ್ಟಕ್, ಜಜ್ಜಾರ್ ಹಾಗೂ ಸೋನಿಪಥ್‌ವರೆಗೆ ಹರಡಿದೆ. ಹಿಂದೆ ನ್ಯಾಷನಲ್ ಲೋಕದಳ ಸಂಸ್ಥಾಪಕ ಚೌಧರಿ ದೇವಿಲಾಲ್ ಅವರ ಬಿಗಿ ಹಿಡಿತದಲ್ಲಿತ್ತು. ಇದು ಬಳಿಕ 12 ವರ್ಷಗಳಿಂದ ಭೂಪಿಂದರ್ ಹೂಡಾ ಅವರ ಮುಷ್ಟಿಯಲ್ಲಿದೆ. ಫೆಬ್ರವರಿ 14ರ ಸ್ವಪ್ಲಾ ಜಾಟ್ ಸ್ವಾಭಿಮಾನ ರ್ಯಾಲಿ ಬಳಿಕ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News