×
Ad

ಹಝ್ರತ್ ಹಮೀದ್ ಶಾ ದರ್ಗಾ ಜಿ.ಎ.ಬಾವಾ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ ರಚನೆ

Update: 2016-03-08 23:56 IST

ಬೆಂಗಳೂರು, ಮಾ.8: ಹಝ್ರತ್ ಹಮೀದ್ ಶಾ ಹಾಗೂ ಹಝ್ರತ್ ಮುಹೀಬ್ ಶಾ ಖಾದ್ರಿ ದರ್ಗಾಕ್ಕೆ ನಿವೃತ್ತ ಡಿಸಿಪಿ ಜಿ.ಎ.ಬಾವಾ ಅಧ್ಯಕ್ಷತೆಯಲ್ಲಿ ಹೊಸ ಆಡಳಿತ ಸಮಿತಿಯನ್ನು ರಚನೆ ಮಾಡಿ ರಾಜ್ಯ ವಕ್ಫ್ ಬೋರ್ಡ್ ಮಂಗಳವಾರ ಆದೇಶ ಹೊರಡಿಸಿದೆ.

ಆರ್.ಸೈಯ್ಯದ್ ಉಮರ್(ಉಪಾಧ್ಯಕ್ಷ), ಮುಬೀನ್ ಮುನವ್ವರ್ (ಕಾರ್ಯದರ್ಶಿ), ಸೈಯ್ಯದ್ ಮುನವ್ವರ್ ಎಸ್.ಐ.(ಖಜಾಂಚಿ), ಶಫೀವುಲ್ಲಾ ಬೇಗ್(ಆಂತರಿಕ ಲೆಕ್ಕಪರಿಶೋಧಕರು)ರನ್ನು ಆಡಳಿತ ಸಮಿತಿಗೆ ನೇಮಕ ಮಾಡಲಾಗಿದೆ.

ಇದಲ್ಲದೆ, ಸೈಯ್ಯದ್ ರಶೀದ್ ಅಹ್ಮದ್, ಶೇಖ್ ಫಾಝಿಲುಲ್ಲಾ, ಎಂ.ಅಯಾಝ್ ಅಹ್ಮದ್, ನಾಸೀರ್ ಅಝೀಝ್, ಜಿ.ಯಾಕೂಬ್ ಯೂಸುಫ್ ಹಾಗೂ ನಿಸಾರ್ ಅಹ್ಮದ್‌ರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್‌ನ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News