×
Ad

ಮಾ.17ಕ್ಕೆ ‘ಭಾರತೀಯ ಪನೋರಮಾ’ ಚಿತ್ರೋತ್ಸವ

Update: 2016-03-12 23:41 IST

ಬೆಂಗಳೂರು, ಮಾ. 12: ಚಲನಚಿತ್ರ ಅಕಾಡಮಿ ಹಾಗೂ ಚಲನ ಚಿತ್ರೋತ್ಸವ ನಿರ್ದೇಶನಾಲಯ ವತಿಯಿಂದ ಮಾ. 17ರಿಂದ ನಾಲ್ಕು ದಿನಗಳ ಕಾಲ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಭಾರತೀಯ ಪನೋರಾಮ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್‌ಬಾಬು, ಚಲನಚಿತ್ರೋತ್ಸವನ್ನು ಗೋವಾ ಹಾಗೂ ಇನ್ನಿತರ ಕೆಲವು ಸ್ಥಳಗಳಲ್ಲಿ ಮಾತ್ರ ನಡೆಸಲಾಗುತ್ತಿದೆ. ಇದರಿಂದಾಗಿ ಅಷ್ಟು ದೂರಕ್ಕೆ ಹೋಗಲು ಸಾಧ್ಯವಾಗದೇ ಇರುವವರಿಗೆ ಇಲ್ಲಿ ಚಲನ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಚಿತ್ರೋತ್ಸವದಲ್ಲಿ ಕನ್ನಡ, ಮರಾಠಿ, ಬೆಂಗಾಲಿ, ಭೋಜ್‌ಪುರಿ, ಒರಿಯಾ, ತಮಿಳು ಇನ್ನಿತರೆ ಭಾಷೆಯ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಹಾಗೆಯೇ ಪ್ರದರ್ಶನದ ನಂತರ ಚಿತ್ರ ನಿರ್ದೇಶಕರ ಜೊತೆ ಸಂವಾದವನ್ನು ಏರ್ಪಡಿಸಲಾಗಿದೆ. ಇದರ ಜೊತೆಗೆ ಸಿನಿಮಾಗ್ರಫಿ, ಚಿತ್ರಕಥೆ, ನಟನೆ, ಕಿರುಚಿತ್ರ ಹಾಗೂ ಸಾಕ್ಷಚಿತ್ರ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಪ್ರಸ್ತುತ ಸಿನಿಮಾ ಕ್ಷೇತ್ರದಲ್ಲಿ ಕಲಿಯುತ್ತಿರುವವರಿಗೆ ಹಾಗೂ ಸಿನಿಮಾ ರಂಗದಲ್ಲಿರುವವರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News