ಎಲ್ಲರೂ ಸಮಾನರೆಂಬ ಭಾವನೆಯಿಂದ ಜಾತ್ಯತೀತ ರಾಷ್ಟ್ರ ನಿರ್ಮಾಣ ಸಾಧ್ಯ: ಅಗ್ನಿ ಶ್ರೀಧರ್
Update: 2016-03-12 23:51 IST
ಬೆಂಗಳೂರು, ಮಾ. 12: ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಒಬ್ಬರ ಮೇಲೆ ಒಬ್ಬರು ದ್ವೇಷವನ್ನು ಹೆಚ್ಚಿಸಿಕೊಳ್ಳುವುದು ಮುಖ್ಯವಲ್ಲ. ಬದಲಿಗೆ ನಾವೆಲ್ಲರೂ ಸಮಾನರು ಎಂದು ಭಾವಿಸಿಕೊಂಡು ಹೋಗುವ ಮೂಲಕ ಜಾತ್ಯತೀತ ದೇಶ ನಿರ್ಮಾಣ ಸಾಧ್ಯ ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಕರ ಸದನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪ್ರಥಮ ಸಂಕ್ರಮಣ ಸಾಹಿತ್ಯ ಸಮ್ಮೇಳನದಲ್ಲಿ ‘ಇಂಡಿಯಾದಲ್ಲಿ ಸೆಕ್ಯುಲರಿಸಂ ಸ್ವರೂಪ’ ಕುರಿತ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ದಿನನಿತ್ಯ ಧರ್ಮ-ಧರ್ಮಗಳ ಮಧ್ಯೆ ಎತ್ತಿ ಕಟ್ಟುವ ಮೂಲಕ ತಮ್ಮದು ಉನ್ನತ ಎಂದು ಬೀಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲ ಧರ್ಮಗಳೂ ಧರ್ಮಾಂಧತೆಯಿಂದ ಕೂಡಿರುವ ಸತ್ಯ ಗೊತ್ತಾಗುತ್ತದೆ ಎಂದರು.