×
Ad

ನಾಳಿನ ಕಾರ್ಯಕ್ರಮ

Update: 2016-03-13 23:55 IST

ಚಿಂತನಾ ಸಮಾವೇಶ

ಬೆಂಗಳೂರು, ಮಾ.12: ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಜನ್ಮ ದಿನದ ಅಂಗವಾಗಿ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಮಾ.15ಕ್ಕೆ ನಗರದ ಸೆನೆಟ್ ಸಭಾಂಗಣದಲ್ಲಿ ಪರ್ಯಾಯ ರಾಜಕಾರಣ ಸಾಧಕ-ಬಾಧಕಗಳು ‘ಚಿಂತನಾ ಸಮಾವೇಶವನ್ನು ಏರ್ಪಡಿಸಲಾಗಿದೆ.

ಸಮಾವೇಶದ ಉದ್ಘಾಟನೆಯನ್ನು ಹಿರಿಯ ಮುತ್ಸದ್ಧಿ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ನೆರವೇರಿಸಲಿದ್ದು, ಮಾಜಿ ಶಾಸಕ ಝುಲ್ಫಿಕರ್ ಆಸ್ಮಿ, ದಸಂಸ (ಭೀಮವಾದ) ರಾಜ್ಯ ಸಂಚಾಲಕ ಆರ್.ಮೋಹನ್ ರಾವ್, ಪ್ರಧಾನ ಕಾರ್ಯದರ್ಶಿ ಬಸವರಾಜ್ ಕೌತಾಳ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ಕುಂಭಾಭಿಷೇಕ

 ಬೆಂಗಳೂರು, ಮಾ.13: ಇಲ್ಲಿನ ನಗರ್ತರಪೇಟೆಯ ನಗರೇಶ್ವರ ದೇವಾಲಯದಲ್ಲಿ ಅನ್ನಪೂರ್ಣಾಂಬಾ ಸಮೇತ ಶ್ರೀನಗರೇಶ್ವರಸ್ವಾಮಿ ದೇವಾಲಯದ 132ನೆ ವರ್ಷಾಚರಣೆ ಅಂಗವಾಗಿ ಮಾ.15ರಿಂದ 20ರವರೆಗೆ ಐದು ದಿನಗಳ ಮಹಾ ಕುಂಬಾಭಿಷೇಕ, ವಿಶೇಷ ಪೂಜೆ ಸೇರಿ ಹಲವು ಪೂಜಾ ಕೈಂಕರ್ಯಗಳನ್ನು ಏರ್ಪಡಿಸಲಾಗಿದೆ.

ಮಾ.15ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬೇಲಿಮಠ ಮಹಾಸಂಸ್ಥಾನ ಮಠದ ಶಿವರುದ್ರ ಮಹಾಸ್ವಾಮಿ, ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಶಾಸಕ ಆರ್.ವಿ.ದೇವರಾಜು, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಮೇಯರ್ ಬಿ.ಎನ್.ಮಂಜುನಾಥ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶಿವಾಚಾರ ವೈಶ್ಯ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News