ಐಎಎಸ್ ಅಧಿಕಾರಿಗಳನ್ನು ನಿಯಂತ್ರಿಸುತ್ತಿರುವ ಬಿಜೆಪಿ

Update: 2016-03-14 05:15 GMT

ಛತ್ತೀಸ್‌ಗಡ, ಮಾರ್ಚ್.14:ಅಲೆಕ್ಸ್ ಪಾಲ್ ಮೆನನ್‌ರ ಕುರಿತು ಹೆಚ್ಚಿನವರಿಗೆ ಗೊತ್ತಿರಲೇಬೇಕು. ಯಾಕೆಂದರೆ ಅವರನ್ನು 2012ರಲ್ಲಿ ಹನ್ನೆರಡು ದಿವಸಗಳ ಕಾಲ ಮಾವೋವಾದಿಗಳು ಅಪಹರಿಸಿ ಬಂಧನದಲ್ಲಿರಿಸಿದ್ದರು. ಅಂದು ಅವರ ಅಪಹರಣ ಬಹುದೊಡ್ಡ ಸುದ್ದಿಯಾಗಿತ್ತು. ಛತ್ತೀಸ್‌ಗಡದ ಮಾವೋವಾದಿಗಳಿಗೂ ಪ್ರೀತಿಪಾತ್ರನಾದ ಈ ಐಎಎಸ್ ಅಧಿಕಾರಿ ಮತ್ತು ಬಲರಾಂಪುರ ಜಿಲ್ಲಾಧಿಕಾರಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಆತ್ಮಹತ್ಯೆ ಮಾಡಿದ ರೋಹಿತ್ ವೇಮುಲಾರನ್ನು ಬೆಂಬಲಿಸುವ ತಾನು ಶೇರ್ ಮಾಡಿದ್ದ ಫೇಸ್ ಬುಕ್ ಪೋಸ್ಟ್‌ಗಳನ್ನು ಬಿಜೆಪಿ ನಾಯಕರ ಒತ್ತಡದಿಂದಾಗಿ ಹಿಂದೆಯಬೇಕಾಗಿ ಬಂದಿದೆ. ಈ ಕಾರಣಕ್ಕಾಗಿ ಬಲ್‌ರಾಂಪುರ ಜಿಲ್ಲಾಧಿಕಾರಿ ಅಲೆಕ್ಸ್‌ಪಾಲ್ ಮೆನನ್ ಮತ್ತೊಮ್ಮೆ ಮಾಧ್ಯಮಗಳಲ್ಲಿಸುದ್ದಿಯಾಗಿದ್ದಾರೆ. ಬಿಜೆಪಿ ನಾಯಕರು ಮತ್ತು ಇತರ ಸರಕಾರಿ ಉದ್ಯೋಗಿಗಳ ವಿರೋಧದಿಂದಾಗಿ ಅವರು ಪೋಸ್ಟ್‌ಗಳನ್ನು ಡಿಲಿಟ್ ಮಾಡಿದ್ದಾರೆ. ಕನ್ಹಯ್ಯಾಮತ್ತು ವೇಮುಲಾರನ್ನು ಬೆಂಬಲಿಸಿ ಹನ್ನೆರಡರಷ್ಟು ಲೇಖನಗಳನ್ನು ತನ್ನ ಫೇಸ್‌ಬುಕ್ ಪುಟಗಳಲ್ಲಿ ಮೆನನ್ ಶೇರ್ ಮಾಡಿದ್ದರು. ಈ ಮೂಲಕ ತನ್ನ ಬೆಂಬಲವನ್ನು ಈ ಜಿಲ್ಲಾಧಿಕಾರಿ ವ್ಯಕ್ತಪಡಿಸಿದ್ದರು. ತಾನು ಪೋಸ್ಟ್ ಯಾಕೆ ಹಿಂದೆಗೆದೆ ಎಂಬುದರ ಕುರಿತು ಮೆನನ್ ಸ್ಪಷ್ಟೀಕರಣವನ್ನೇನೂ ನೀಡಿಲ್ಲ. ಸರಕಾರಿ ಉದ್ಯೋಗಿ ಎಂಬ ನೆಲೆಯಲ್ಲಿ ತಾನು ಸರಕಾರಕ್ಕೆ ವಿಧೇಯನಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಐಎಎಸ್ ಅಧಿಕಾರಿಗಳ ರಾಜಕೀಯ ಮನೋಭಾವನೆಗಳ ಕುರಿತು ಉನ್ನತ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದು ಇದೇ ಮೊದಲ ಘಟನೆಯೇನಲ್ಲ. ಛತ್ತೀಸ್‌ಗಡದ ಆದಿವಾಸಿಗಳ ನಡುವಿನ ಸಾಮಾಜಿಕ ಕಾರ್ಯಕರ್ತ ಸೋನಿ ಸೋರ್ ವಿರುದ್ಧವೂ ದಾಳಿ ನಡೆದಾಗ ಅದನ್ನು ಖಂಡಿಸಿ ಬಸ್ಸಾರ್ ಜಿಲ್ಲಾಧಿಕಾರಿ ಅಮಿತ್ ಕಟಾರಿಯ ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ನ್ನು ಒತ್ತಡದ ಕಾರಣದಿಂದ ಹಿಂದೆಗೆಯಬೇಕಾಗಿತ್ತು. ಸರಕಾರಿ ಉದ್ಯೋಗಿಯಾಗಿದ್ದೂ ಅಲೆಕ್ಸ್ ಮೆನನ್ ದೇಶದ್ರೋಹ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಕನ್ಹಯ್ಯಿರನ್ನು ಬೆಂಬಲಿಸುವ ಲೇಖನಗಳನ್ನು ಶೇರ್ ಮಾಡಲು ಅವರಿಗೆ ಅನುಮತಿಯಿಲ್ಲ ಎಂದು ಬಿಜೆಪಿ ನಾಯಕರು ವಾದಿಸುತ್ತಿದ್ದಾರೆ. ಪಕ್ಷದ ನಾಯಕರೂ ಸರಕಾರದ ಇತರ ಉದ್ಯೋಗಿಗಳೂ ಈ ವಿಷಯವನ್ನು ಎತ್ತಿ ತೋರಿಸಿದಾಗ ಅಲೆಕ್ಸ್ ತನ್ನ ಶೇರ್‌ಗಳನ್ನು ಹಿಂದೆಗೆಯಬೇಕಾಯಿತೆಂದು ಪಕ್ಷದ ನಾಯಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News