ನಾನು ಬ್ಯಾಟ್ಸ್‌ಮ್ಯಾನ್ ಆಗಿ ತಂಡಕ್ಕೆ ಆಯ್ಕೆ ಆಗಿರಲಿಲ್ಲ: ಶುಐಬ್ ಮಲಿಕ್

Update: 2016-03-14 05:37 GMT

ಹೊಸದಿಲ್ಲಿ, ಮಾರ್ಚ್. 14: ಪಾಕಿಸ್ತಾನದ ಹಿರಿಯ ಆಲ್ ರೌಂಡರ್ ಶುಐಬ್ ಮಲಿಕ್ ಮತ್ತು ಪಾಕ್ ತಂಡ ನಾಯಕ ಶಾಹಿದ್ ಅಫ್ರಿದಿ ವಿಶ್ವಕಪ್ ಟಿ-20 ಕ್ರಿಕೆಟ್ ಆಡಲು ಭಾರತಕ್ಕೆ ಬಂದಾಗ ಸಿಕ್ಕಿರುವ ಭಾರೀ ಸ್ವಾಗತಕ್ಕೆ ನಿನ್ನೆ ಹೃದಯಸ್ಪರ್ಶಿ ಸಂತಸವನ್ನು ವ್ಯಕ್ತಪಡಿಸಿದ್ದರು. ಅದರಲ್ಲೂ ಭಾರತೀಯ ಪತ್ನಿಯನ್ನು ಹೊಂದಿರುವ ಶುಐಬ್ ಮಲಿಕ್‌ರಿಗೆ ಭಾರತದಲ್ಲಿ ಯಾವುದೇ ರೀತಿಯ ಭದ್ರತೆಯ ಕುರಿತು ಆತಂಕವಿಲ್ಲ.

ತಂಡದಲ್ಲಿ ಆರಂಭಿಕ ಆಟಗಾರನ ಪಾತ್ರದ ಕುರಿತು ನುಡಿಯುತ್ತಾ ನಾನೆಂದೂ ಆರಂಭಿಕ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಅಂಗಣಕ್ಕಿಳಿಯುವೆ ಊಹಿಸಿರಲಿಲ್ಲ. ಅವೆಲ್ಲವೂ ಅನಿರೀಕ್ಷಿತವಾಗಿ ಆಗಿವೆಯಷ್ಟೇ. ನಾನು ಬ್ಯಾಟ್ಸ್‌ಮ್ಯಾನ್ ಆಗಿ ತಂಡಕ್ಕೆ ಆಯ್ಕೆ ಆಗಿರಲಿಲ್ಲ. ನಾನು ಆಫ್ ಸ್ಪಿನ್ನರ್ ಆಗಿ ತಂಡಕ್ಕೆ ಆಯ್ಕೆಯಾದವನು. ಆ ನಂತರ ಬ್ಯಾಟ್ಸ್‌ಮ್ಯಾನ್ ಆದೆ. ನಾನು ಪ್ರತಿ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಿರುವೆ. ನಾನು ಬ್ಯಾಟಿಂಗ್ ಕ್ರಮಾಂಕದ ಕುರಿತು ಗಮನ ಹರಿಸುವುದಿಲ್ಲ. ತಂಡವನ್ನು ಗೆಲ್ಲಿಸುವ ಕುರಿತು ಗಮನ ಇರಿಸುತ್ತೇನೆ. ಎಂದು ಹೇಳಿದ್ದಾರೆ. ನಾವು ನಮ್ಮ ಪ್ರದರ್ಶನವನ್ನು ಸುಧಾರಿಸಿಕೊಳ್ಳುತ್ತಿದ್ದೇವೆ. ಬ್ಯಾಟಿಂಗ್ ಟೆಕ್ನಿಕ್ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಮಲಿಕ್ ಹೇಳಿದ್ದಾರೆ. ಭಾರತದಲ್ಲಿ ಆಡಲು ಬಂದು ತುಂಬ ಖುಶಿಯಾಗಿದೆ, ನನಗೆ ಇಲ್ಲಿನ ಜನರ ಪ್ರೀತಿಯನ್ನು ನೋಡಿ ತುಂಬ ಸಂತೋಷವಾಗಿದೆ ಎಂದ ಮಲಿಕ್ ಏಶಿಯಾ ಕಪ್‌ನಲ್ಲಿ ಪಾಕಿಸ್ತಾನದ ಕೆಟ್ಟ ಪ್ರದರ್ಶನವನ್ನು ಉಲ್ಲೇಖಿಸಿದ ಅವರು ನಾವು ಏಶಿಂ ಕಪ್‌ನಲ್ಲಿ ಯೋಚಿಸಿದಂತೆ ಆಡಲು ಸಾಧ್ಯವಾಗಿಲ್ಲ. ಕಳೆದು ಹೋದ ಸಮಯವನ್ನು ನೆನೆದು ಪ್ರಯೋಜನವಿಲ್ಲ ಇದೊಂದು ಹೊಸ ತಂಡ ನಾವು ನಮ್ಮ ಅತ್ಯುತ್ತಮ ಪ್ರದರ್ಶನವನ್ನು ಹೊರತರಲು ಪ್ರಯತ್ನಿಸುತ್ತೇವೆ ಎಂದು ಮಲಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News