ದ್ವಿಚಕ್ರ ವಾಹನ ಕಳವು: ಆರೋಪಿ ಬಂಧನ
Update: 2016-03-15 23:40 IST
ಬೆಂಗಳೂರು, ಮಾ. 15: ದ್ವಿಚಕ್ರ ವಾಹನಗಳನ್ನೆ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಯಾಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಇಲ್ಲಿನ ಕೊಡಿಗೆಹಳ್ಳಿಯ ಹನುಮಯ್ಯ ಲೇಔಟ್ ನಿವಾಸಿ ರವಿಕುಮಾರ್(25) ಎಂದು ಗುರುತಿಸಿದ್ದಾರೆ. ಮಾ.12ರಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕಮಹಾದೇವಿ ಪಾರ್ಕ್ ಸಮೀಪದಲ್ಲಿ ಆರೋಪಿ ರವಿಕುಮಾರ್ ದ್ವಿಚಕ್ರ ವಾಹನವನ್ನು ಅನುಮಾನಾಸ್ಪದವಾಗಿ ನಿಲ್ಲಿಸಿಕೊಂಡಿದ್ದ, ಈ ವೇಳೆ ಪೊಲೀಸ್ ಸಿಬ್ಬಂದಿ ವಾಹನದ ದಾಖಲೆ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆತನ ವಶದಲ್ಲಿ 4 ಲಕ್ಷ ರೂ. ವೌಲ್ಯದ 7 ದ್ವಿಚಕ್ರ ವಾಹನಗಳನ್ನು ಪೊಲೀಸರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.