×
Ad

ಮೂಲ ದಾಖಲಾತಿ ಪರಿಶೀಲನೆ

Update: 2016-03-19 23:48 IST

 ಬೆಂಗಳೂರು, ಮಾ. 19: ಆರೋಗ್ಯ ಇಲಾಖೆ ವಿಶೇಷ ನೇಮಕಾತಿ ಸಮಿತಿಯಿಂದ ವಿವಿಧ ಅರೆ ವೈದ್ಯಕೀಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ಹುದ್ದೆಗಳ ನೇಮಕಾತಿ ಸಂಬಂಧ ಎಪ್ರಿಲ್ 4ರಿಂದ ಮೇ 10ರ ವರೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆ, ಕುಷ್ಠರೋಗ ಆಸ್ಪತ್ರೆ ಆವರಣ, ಮಾಗಡಿ ರಸ್ತೆ, ಬೆಂಗಳೂರು -23 ಇಲ್ಲಿ ಮೂಲ ದಾಖಲಾತಿ ಪರಿಶೀಲನೆಯನ್ನು ನಡೆಸಲು ಸಮಯ ನಿಗದಿಪಡಿಸಲಾಗಿದೆ.

ಮೂಲ ದಾಖಲಾತಿ ಪರಿಶೀಲನೆಗೆ ನಿಗದಿಗೊಳಿಸಿದ ಹುದ್ದೆವಾರು ಕೊನೆಯ ಅಭ್ಯರ್ಥಿಯು ಗಳಿಸಿರುವ ಶೇಕಡಾವಾರು ಅಂಕಗಳನ್ನು ಇಲಾಖೆಯ ವೆಬ್‌ಸೈಟ್ www.karhfw.gov.in./drc,aspx ನಲ್ಲಿ ಪ್ರಕಟಿಸಲಾಗಿದ್ದು ಹಾಗೂ ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಸೂಚನಾ ಪತ್ರವನ್ನು ಅರ್ಜಿಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಇಲಾಖೆಯ ವೆಬ್‌ಸೈಟ್‌ನಿಂದಲೇ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಅಧಿಕೃತ ಪ್ರಕಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News