ಮೆಟ್ರೋ ಅವಧಿ ವಿಸ್ತರಣೆ
Update: 2016-03-19 23:49 IST
ಬೆಂಗಳೂರು, ಮಾ. 19: ಬೆಂಗಳೂರಿನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಪಂದ್ಯಗಳ ದಿನದಂದು ಮೆಟ್ರೋ ಸಮಯ ವಿಸ್ತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಬೈಯಪ್ಪನಹಳ್ಳಿ ಮಹಾತ್ಮಗಾಂಧಿ ರಸ್ತೆ ಮಾರ್ಗದಲ್ಲಿ ಮಾ.20 ಮತ್ತು ಮಾ.21, 23ನೆ ತಾರೀಕಿನಂದು ರೈಲು ಸಂಚಾರ ಅವಧಿಯನ್ನು ರಾತ್ರಿ 10 ರಿಂದ ಮಧ್ಯರಾತ್ರಿ 12.30ರವರೆಗೆ ವಿಸ್ತರಿಸಲಾಗುವುದು.
ವಿಸ್ತರಿಸಿದ ಅವಧಿಯಲ್ಲಿ ಪ್ರತಿ 30 ನಿಮಿಷಗಳಿಗೆ ಒಂದರಂತೆ ರೈಲುಗಳು ಸಂಚರಿಸಲಿವೆ. ಈ ಮೂರು ದಿನಗಳಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟಿ-20 ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದ ಸಮಯ ವಿಸ್ತರಣೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ತಿಳಿಸಿದ್ದಾರೆ.