×
Ad

ಪ್ರತಿಯೊಂದಕ್ಕೂ ಮಾತ್ರೆ ನುಂಗುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ

Update: 2016-03-20 11:33 IST

ಮಾತ್ರೆ ನುಂಗುವ ಅಭ್ಯಾಸದಿಂದ ಏನಾಗಬಹುದು ಎನ್ನುವುದರ ವಿವರ ಇಲ್ಲಿದೆ.

ಈ ವಾರದ ಮೊದಲಿಗೆ ಭಾರತ ಸರ್ಕಾರವು 344 ಔಷಧಿಗಳನ್ನು ನಿಷೇಧಿಸಿದ ಸುದ್ದಿ ಕೇಳುತ್ತಲೇ ಭಾರತ ಎಚ್ಚೆತ್ತಿದೆ. ಈ ಪಟ್ಟಿಯಲ್ಲಿ ವಿಕ್ಸ್ ಆಕ್ಷನ್ 500 ಎಕ್ಸಟ್ರಾ, ಕೊರೆಕ್ಸ್, ಫೆನ್ಸಿಡಿಲ್ ಮತ್ತು ಸುಮಾರು 300ಕ್ಕೂ ಅಧಿಕ ಔಷಧಿಗಳನ್ನು ಡೋಸ್ ಕಾಂಬಿನೇಶನ್‌ಗಳೆಂದು ಹೇಳಲಾಗಿದೆ.

 ವೈದ್ಯರ ನಿಗಾ ಇಲ್ಲದೆ ಸೇವಿಸಬಾರದ ಔಷಧಿಗಳ ವಿವರ ನೀಡಿದ್ದಾರೆ. ಹಲವು ಅತೀ ಅಪಾಯಕಾರಿ ಮತ್ತು ಜೀವಕ್ಕೇ ಎರವಾಗುವ ಸಾಧ್ಯತೆಯಿದೆ.

ನೋವು ನಿವಾರಕಗಳು, ಅಡ್ಡಪರಿಣಾಮಗಳು:

ಗಂಭೀರ ಅಸಿಡಿಟಿ, ಅಲ್ಸರ್, ರಕ್ತಸ್ರಾವ, ಪಿತ್ತಜನಕಾಂಗ ನಂಜು, ಮೂತ್ರಪಿಂಡದ ವೈಫಲ್ಯ
ನೋವುಗಳ ಸಂದರ್ಭದಲ್ಲಿ ಪ್ಯಾರಾಸಿಟಮಲ್ ಮತ್ತು ಆಸ್ಪಿರನ್ ತಿನ್ನುವುದು ಮತ್ತು ಋತುಸ್ರಾವದ ಸಂದರ್ಭ ಬೆನ್ನು ನೋವಿಗೆ ಮಾತ್ರೆ ನುಂಗುವ ಅಭ್ಯಾಸ ಜನರಲ್ಲಿದೆ. ಆದರೆ ನೋವು ನಿವಾರಕದ ಓವರ್‌ಡೋಸ್ ಆರೋಗ್ಯಕ್ಕೆ ಮಾರಕ. ನೋವು ನಿವಾರಕ ಔಷಧಿಗಳು ಹೃದಯ, ಮೆದುಳುಗಳ ಮೇಲೆ ಪರಿಣಾಮ ಬೀರಬಹುದು.


ರೋಗನಿರೋಧಕಗಳು, ಅಡ್ಡಪರಿಣಾಮಗಳು:

ರೋಗ ನಿರೋಧಕಗಳಿಗೆ ಪ್ರತಿರೋಧ ಮತ್ತು ಕರುಳಿನ ಪ್ರತಿರೋಧ ನಿಗಾ ಇಲ್ಲದೆ ರೋಗ ನಿರೋಧಕಗಳ ಸೇವನೆಯಿಂದ ಔಷಧಿಗಳಿಗೆ ಪ್ರತಿರೋಧ ಸೃಷ್ಟಿಯಾಗುವ ಸಾಧ್ಯತೆಯಿದೆ. ಅಂತಹ ಔಷಧಿಗಳನ್ನು ಔಷಧಾಲಯಗಳಿಂದ ಖರೀದಿಸುವ ಮುನ್ನ ಎಚ್ಚರವಹಿಸಬೇಕು.

ನಿದ್ದೆ ಮಾತ್ರೆಗಳು, ಅಡ್ಡಪರಿಣಾಮಗಳು:

ಗಂಭೀರ ನಿದ್ರಾರಾಹಿತ್ಯ, ಚಲನೆ ಸಮಸ್ಯೆಗಳು, ನಡುಕ ವೈದ್ಯರ ಸಲಹೆಯಿಲ್ಲದೆ ಔಷಧಾಲಯಗಳು ಈ ಔಷಧಿಗಳನ್ನು ಮಾರುವುದಿಲ್ಲ. ನಿದ್ದೆ ಮಾತ್ರೆಗಳಿಂದ ರೋಗಿಗಳು ಅವುಗಳ ಅಭ್ಯಾಸ ರೂಢಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಇದರಿಂದ ನಿದ್ರಾರಾಹಿತ್ಯ ಬರಬಹುದು. ಧೀರ್ಘ ಅವಧಿಯಲ್ಲಿ ಅಸ್ಥಿರತೆ, ನಡುಕ, ಚಲನೆ ಸಮಸ್ಯೆ, ಸಂಯೋಜನೆ ಸಮಸ್ಯೆ, ಜಡತೆ ಮತ್ತು ಮಾತಿನಲ್ಲಿ ಸಮಸ್ಯೆಗಳು ಕಾಣಬಹುದು.

ಅಸಿಡಿಟಿ ಔಷಧಿಗಳು, ಅಡ್ಡಪರಿಣಾಮಗಳು:

ಅರಿವಿನ ಕೊರತೆ, ಬುದ್ಧಿ ಮಾಂದ್ಯತೆ, ವಿಟಮಿನ್ ಕೊರತೆ, ಧೀರ್ಘ ಅವಧಿಯಲ್ಲಿ ಅಸಿಡಿಟಿ ಔಷಧಿಗಳು ಹಾನಿಕರವಾಗಲಿವೆ. ಪದೇ ಪದೇ ಬಳಕೆಯಿಂದ ಅರಿವಿನ ಕೊರತೆ ಮತ್ತು ಬುದ್ಧಿ ಮಾಂದ್ಯತೆ ಬರಬಹುದು. ಈ ಔಷಧಿಗಳು ಮೂಳೆಗಳನ್ನು ದುರ್ಬಲಗೊಳಿಸಬಹುದು.

ಕಫ್ ಸಿರಪ್‌ಗಳು, ಅಡ್ಡಪರಿಣಾಮಗಳು:

ಅಧಿಕ ಬಿಪಿ, ಮೆದುಳಿನಲ್ಲಿ ರಕ್ತಸ್ರಾವ, ಹೃದಯಾಘಾತ ಕಫ್ ಸಿರಫ್‌ಗಳಲ್ಲಿ ಕೆಫೇನ್ ಇರುವ ಕಾರಣ ಅದು ಚಟವಾಗಬಹುದು. ಅಡ್ಡ ಪರಿಣಾಮಗಳೆಂದರೆ ಅತಿಯಾದ ಉತ್ಸಾಹ, ಅಧಿಕ ಬಿಪಿ, ಮೆದುಳಿನಲ್ಲಿ ರಕ್ತಸ್ರಾವ, ಗಂಭೀರ ಪ್ರಕರಣಗಳಲ್ಲಿ ಹೃದಯಾಘಾತಗಳೂ ಆಗಬಹುದು. ಕಫ್ ಸಿರಪ್‌ಗಳಿಗೆ ಎಷ್ಟು ಚಟವಾಗಬಹುದೆಂದರೆ ಔಷಧಿ ಬದಲು ಅದನ್ನೇ ಕುಡಿಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News