×
Ad

1,795 ವೈದ್ಯಕೀಯ ಸ್ನಾತಕೋತ್ತರ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ

Update: 2016-03-20 23:34 IST

ಬೆಂಗಳೂರು, ಮಾ. 20: ಸೇವಾನಿರತರಲ್ಲದ ವೈದ್ಯಕೀಯ ಸ್ನಾತಕೋತ್ತರ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಪರೀಕ್ಷಾ ಪ್ರಾಧಿಕಾರದಲ್ಲಿ ಮಾ. 17ರಿಂದ ನಡೆಯುತ್ತಿದ್ದು ಇಂದಿನವರೆಗೆ ಒಟ್ಟು 1,795ಅಭ್ಯರ್ಥಿಗಳು ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

ಕ್ರಮ ಸಂಖ್ಯೆ 1ರಿಂದ 3,700 ರವರೆಗಿನ (ಎನ್‌ಬಿಇ/ಎಐಐಎಂಎಸ್ ಅಂಕ ಅನುಸರಿಸಿ) ಸೇವಾನಿರತರಲ್ಲದ ವೈದ್ಯಕೀಯ ಅಭ್ಯರ್ಥಿಗಳಿಗೆ ಪರಿಶೀಲನೆ ನಡೆಸಲಾಗಿದೆ.

ಮಾ.21ರ ಸೋಮವಾರ 3701 ರಿಂದ 4900 ಕ್ರಮಸಂಖ್ಯೆಯ ಅಭ್ಯರ್ಥಿಗಳಿಗೆ ಪರಿಶೀಲನಾ ಕಾರ್ಯ ನಡೆಯಲಿದೆ. ಈವರೆಗೆ ಯಾವುದೇ ಕಾರಣದಿಂದ ದಾಖಲಾತಿ ಪರಿಶೀಲನೆಗೆ ಹಾಜರಾಗದ ಅಭ್ಯರ್ಥಿಗಳು ಮಾ.23ರೊಳಗೆ ಹಾಜರಾಗಿ ತಮ್ಮ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಲು ಸೂಚಿಸಿದೆ.

ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್: http://kea.kar.nic.in ನೋಡಬಹುದು ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News