‘ಕಬ್ಬನ್ ಪಾರ್ಕ್‌ನಲ್ಲಿ ವಕೀಲರ ವಾಹನ’
ಬೆಂಗಳೂರು, ಮಾ.20: ಕಾರ್ಪೊರೇಶನ್ ಬಳಿ ಇರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊರಾಂಗಣದಲ್ಲಿ ಕಟ್ಟಡವೊಂದು ನಿರ್ಮಾಣವಾಗುತ್ತಿರುವುದರಿಂದ ವಕೀಲರು ತಮ್ಮ ವಾಹನಗಳನ್ನು ಕಬ್ಬನ್ ಪಾರ್ಕ್‌ನಲ್ಲಿ ನಿಲ್ಲಿಸಿ ಕಬ್ಬನ್ ಪಾರ್ಕ್‌ಗೆ ಧಕ್ಕೆ ತರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಾಲಯದವರು ವಕೀಲರ ವಾಹನಗಳನ್ನು ನಿಲ್ಲಿಸಲು ಪರ್ಯಾಯ ಮಾರ್ಗವನ್ನು ಕಲ್ಪಿಸಬೇಕಿತ್ತು. ಆದರೆ, ಅದನ್ನು ಬಿಟ್ಟು ಕಬ್ಬನ್ ಪಾರ್ಕ್‌ನಲ್ಲಿಯೇ ಅವಕಾಶವನ್ನು ಕಲ್ಪಿಸಿ ಕಬ್ಬನ್ ಪಾರ್ಕ್‌ನ ಸೌಂದರ್ಯವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ. ಅಲ್ಲದೆ, ಕಬ್ಬನ್ ಪಾರ್ಕ್‌ನ ಜವಾಬ್ದಾರಿಯನ್ನು ಹೊತ್ತಿರುವ ತೋಟಗಾರಿಕೆ ಇಲಾಖೆಯು ಆದಷ್ಟು ಬೇಗ ಇಲ್ಲಿ ನಿಲ್ಲಿಸಿರುವ ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಹಾಗೂ ಕಬ್ಬನ್ ಪಾರ್ಕ್‌ನ ಸೌಂದರ್ಯ ಪುನಃ ಮೊದಲಿದ್ದಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕಬ್ಬನ್ ಪಾರ್ಕ್‌ನಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ದಿನ ನಿತ್ಯ ವಾಕಿಂಗ್ ಮಾಡುವವರಿಗೆ ಹಾಗೂ ಪಾರ್ಕ್‌ನ ಸೌಂದರ್ಯವನ್ನು ವೀಕ್ಷಿಸುವವರಿಗೆ ಕಿರಿ ಕಿರಿ ಎನಿಸುತ್ತಿದೆ. ಅಲ್ಲದೆ, ಪಾರ್ಕ್‌ನಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ ಪಾರಿವಾಳಗಳ ಸಂಖ್ಯೆಯೂ ಕಡಿಮೆಯಾಗುತ್ತಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.