ಕನ್ಹಯ್ಯ ಕುಮಾರ್ ಇಂದಿನ ಭಗತ್ ಸಿಂಗ್ : ಶಶಿತರೂರ್

Update: 2016-03-21 10:03 GMT

ಹೊಸದಿಲ್ಲಿ, ಮಾಚ್. 21: ಕಾಂಗ್ರೆಸ್ ನಾಯಕ ಶಶಿ ತರೂರು ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಜವಾಹರಲಾಲ್ ಯುನಿವರ್ಸಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರನ್ನು ಹುತಾತ್ಮ ಭಗತ್ ಸಿಂಗ್‌ರೊಂದಿಗೆ ಹೋಲಿಸಿದ್ದಾರೆ. ದೇಶಭಕ್ತಿಯ ಕುರಿತು ಪ್ರಸ್ತಾಪಿಸುತ್ತಾ ಇಂದಿನ ಭಗತ್ ಸಿಂಗ್ ಕನ್ಹಯ್ಯಾ ಕುಮಾರ್ ಆಗಿದ್ದಾರೆ ಎಂದು ಹೇಳಿದ್ದಾರೆ. ಅವರ ಈ ಮಾತಿಗೆ ನಗು ಕೇಳಿಸಿ ಬಂದಿತ್ತು. ತರೂರ್ ಕೂಡಾ ನಕ್ಕಿದ್ದರು. ಆದರೆ ನಂತರ ತರೂರ್ ಮಾತು ವಿವಾದಾಸ್ಪದವಾಗಿತ್ತು.

ತರೂರ್ ಮಾತಾಡಿ" ಇಂದು ರಾಷ್ಟ್ರವಾದ ಯಾವನೆ ವ್ಯಕ್ತಿ ಭಾರತ್ ಮಾತಾಕಿ ಜೈ ಎನ್ನುವುದರಲ್ಲಿ ನಿರ್ಧರಿಸಲ್ಪಡುತ್ತಿದೆ. ನನಗೆ ಹಾಗೆ ಹೇಳಲು ಖುಷಿಯಿದೆ. ಹಾಗಂತ ನಾವು ಎಲ್ಲರ ಮೇಲೆಯೂ ನಿರ್ಬಂಧ ಹೇರಬೇಕೇ" ಎಂದು ಪ್ರಶ್ನಿಸಿದ್ದಾರೆ. ಭಾರತ ಕೇವಲ ಹಿಂದಿ, ಹಿಂದೂ, ಹಿಂದುಸ್ತಾನಿ ಮಾತ್ರವೇ ಅಲ್ಲ ಎಂದಿರುವ ತರೂರು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಐಎಂಐಎಂ ಶಾಸಕ ವಾರಿಸ್ ಪಠಾಣ್‌ರನ್ನು ಜೈಭಾರತ್ ಮಾತಾಕಿ ಜೈ ಎಂದು ಹೇಳದಿದ್ದುದಕ್ಕೆ ವಿಧಾನಸಭೆಯಿಂದ ಅಮಾನತು ಗೊಳಿಸಿರುವುದು ತಪ್ಪು ಎಂದು ತನ್ನ ಅಬಿಪ್ರಾಯವನ್ನು ವ್ಯಕ್ತಪಡಿಸಿದರು.

ಭಾರತ್ ಮಾತಾಕಿ ಜೈ ಘೋಷಣೆ ಕೂಗುವುದು ಕೂಗದಿರುವುದರ ಕುರಿತು ಪ್ರತಿಕ್ರಿಯಿಸಿದ ತರೂರ್ ಪ್ರಜಾಪ್ರಭುತ್ವದಲ್ಲಿ ಸರಿ ತಪ್ಪುಗಳು ಅವರವರ ಹಕ್ಕುಗಳಾಗಬೇಕಿದೆ ಮತ್ತು ಇತರರ ವಿಚಾರಗಳನ್ನು ಸಹಿಸಬೇಕಾಗಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಸ್ವತಃ ಕಾಂಗ್ರೆಸ್ ತರೂರ್ ಹೇಳಿಕೆಯಿಂದ ದೂರವುಳಿಯಲು ನಿರ್ಧರಿಸಿದೆ. ಪಕ್ಷದ ನಾಯಕ ಸಂದೀಪ್ ದೀಕ್ಷಿತ್‌ರು ತರೂರ್‌ರಂತಹ ದೊಡ್ಡ ನಾಯಕರು ಇಂತಹ ಹೋಲಿಕೆಗಳನ್ನು ಮಾಡಬಾರದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಕನ್ಹಯ್ಯಾ ಅಂತಹದೇನನ್ನು ಮಾಡಿದ್ದಾರೆ? ಎಂದು ಪ್ರಶ್ನಿಸಿದ ದೀಕ್ಷಿತ್ ಕನ್ಹಯ್ಯಿ ಸೊಗಸಾಗಿ ಮಾತಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ತಮ್ಮ ಮಾತುಗಳನ್ನು ಮುಂದಿಡಬೇಕಾಗಿದೆ. ಆದರೆ ಭಗತ್ ಸಿಂಗ್‌ಗೆಹೋಲಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಆರ್ಜೆಡಿ ವಕ್ತಾರ ಮನೋಜ್ ಝಾ ತರೂರ್‌ರ ಹೇಳಿಕೆಯನ್ನು ಟೀಕಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News