×
Ad

ಉತ್ತರ ಪ್ರದೇಶ: ಬಯಲು ಶೌಚಕ್ಕೆ ತೆರಳಿದ್ದ ದಲಿತ ಬಾಲಕಿಯ ಸಜೀವ ದಹನ

Update: 2024-05-04 20:35 IST

ಸಾಂದರ್ಭಿಕ ಚಿತ್ರ

ಬಲರಾಮಪುರ: ಉತ್ತರ ಪ್ರದೇಶದ ಹರೈಯಾ ಪೋಲಿಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ 13ರ ಹರೆಯದ ದಲಿತ ಬಾಲಕಿಯೋರ್ವಳು ಸಜೀವ ದಹನಗೊಂಡಿದ್ದಾಳೆ.

ಬಾಲಕಿ ಶುಕ್ರವಾರ ಸಂಜೆ ಮನೆ ಸಮೀಪದ ಹೊಲಕ್ಕೆ ಶೌಚಕ್ಕೆಂದು ತೆರಳಿದ್ದಳು. ಆಕೆಯ ಸಜೀವ ದಹನಕ್ಕೆ ಕಾರಣವೇನು ಎನ್ನುವುದು ಇನ್ನೂ ಪೋಲಿಸರಿಗೆ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಯೋರ್ವರು ಶನಿವಾರ ತಿಳಿಸಿದರು.

ಎಎಸ್ಪಿ ಯೋಗೇಶ್ ಕುಮಾರ್ ತಿಳಿಸಿರುವಂತೆ ಶೌಚಕ್ಕೆ ತೆರಳಿದ್ದ ಬಾಲಕಿ ಒಂದು ಗಂಟೆಯಾದರೂ ವಾಪಸ್ ಬರದಿದ್ದಾಗ ಕುಟುಂಬ ಸದಸ್ಯರು ಆಕೆಗಾಗಿ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಸಮೀಪದ ಹೊಲದಲ್ಲಿ ಬೆಂಕಿಯನ್ನು ತಾವು ಕಂಡಿದ್ದಾಗಿ ಕೆಲವು ಗ್ರಾಮಸ್ಥರು ಅವರಿಗೆ ತಿಳಿಸಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸುಟ್ಟು ಕರಕಲಾಗಿದ್ದ ಬಾಲಕಿಯ ಶವ ಪತ್ತೆಯಾಗಿತ್ತು.

ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೋಲಿಸರು ವರದಿಗಾಗಿ ಕಾಯುತ್ತಿದ್ದು,ಆಕೆಯ ಸಾವಿಗೆ ಕಾರಣ ಮತ್ತು ಈ ದುರಂತದ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಲು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News