ಅರ್ಜಿ ಆಹ್ವಾನ
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ
ಬೆಂಗಳೂರು, ಮಾ. 21: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರ -2 ಹಾಗೂ ಸಹಾಯಕಿಯರ -13 ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಎಸೆಸೆಲ್ಸಿ ತೇರ್ಗಡೆಯಾಗಿರಬೇಕು. ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೆ ತರಗತಿ, ಗರಿಷ್ಠ 9ನೆ ತರಗತಿ ತೇರ್ಗಡೆಯಾಗಿರಬೇಕು.
ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು, ಸ್ಥಳೀಯರಾಗಿರಬೇಕು, ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ದಿನಾಂಕದಿಂದ 6 ತಿಂಗಳೊಳಗೆ ಸಂಬಂಧಪಟ್ಟ ತಹಶೀಲ್ದಾರ್‌ರಿಂದ ಪಡೆದ ಮೂಲ ವಾಸ ಸ್ಥಳದ ದೃಢೀಕರಣ ಪತ್ರ ಸಲ್ಲಿಸಬೇಕು, ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
ಎ.16ರ ಸಂಜೆ 5.30ರ ಒಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ದೊಡ್ಡಬಳ್ಳಾಪುರ, ಇಲ್ಲಿ ಇಟ್ಟಿರುವ ಅರ್ಜಿಗಳ ಟೆಂಡರ್ ಪೆಟ್ಟಿಗೆಗೆ ಸಲ್ಲಿಸಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಲಕ್ಷ
ನೇಮಕಾತಿಗೆ
ಬೆಂಗಳೂರು, ಮಾ. 21: ರಾಷ್ಟ್ರೀಯ ಯುವ ದಳದ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಇಚ್ಚಿಸುವ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.
ಮಾಸಿಕ ಗೌರವಧನ 2,500ರೂ.ಗಳನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು 18 ರಿಂದ 25 ವರ್ಷ ವಯೋಮಿತಿಯೊಳಗಿರಬೇಕು, ಎಸೆಸೆಲ್ಸಿಯಲ್ಲಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ ಇರುವವರಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳ ಕಾರ್ಯ ವ್ಯಾಪ್ತಿ ಅವರು ವಾಸಿಸುವ ತಾಲೂಕಿಗೆ ಸೀಮಿತವಾಗಿರುತ್ತದೆ.
ಅರ್ಜಿಯನ್ನು ಆನ್‌ಲೈನ್ www.nyks.org ಮೂಲಕ ಮಾ.31ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನೆಹರು ಯುವಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂ.ಸಂಖ್ಯೆ: 080-2320 9157 ಅಥವಾ ಮೊಬೈಲ್ ಸಂಖ್ಯೆ: 94480 68641ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಯುವ ಸಮನ್ವಯಾಧಿಕಾರಿ, ಜಿ.ಇ. ನಾರಾಯಣಗೌಡ ತಿಳಿಸಿದ್ದಾರೆ.