ಸರಕಾರಿ ಲೇಖನ ಸಾಮಗ್ರಿ ಸದ್ಯಕ್ಕೆ ಸ್ಥಗಿತ
Update: 2016-03-23 23:45 IST
ಬೆಂಗಳೂರು, ಮಾ. 23: 2015-16ನೆ ಸಾಲಿನ ವಾರ್ಷಿಕ ಸರಕು ಪರಿಶೀಲನೆಯ ಪ್ರಯುಕ್ತ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಧಾರವಾಡಗಳಲ್ಲಿರುವ ಸರಕಾರಿ ಲೇಖನ ಸಾಮಗ್ರಿ ಉಗ್ರಾಣಗಳಲ್ಲಿ ಎ.1ರಿಂದ 16ರ ವರೆಗೆ ಎಲ್ಲ ಸರಕಾರಿ ಕಚೇರಿಗೆ ಲೇಖನ ಸಾಮಗ್ರಿಗಳ ಮತ್ತು ಕಾಗದದ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.