ಪುರುಷರೇ, ಕೇವಲ ಕುಟುಂಬ ನೋಡಿಕೊಂಡರೆ ಸಾಲದು ನಿಮ್ಮ ಆರೋಗ್ಯಕ್ಕೆ ಈ ಐದು ಅತ್ಯಗತ್ಯ!
ಚಿಪ್ಸ್, ಬೀರ್, ಫಿಝಾ, ಅಪರೂಪಕ್ಕೊಮ್ಮೆ ಬೇಯಿಸಿದ ಆಹಾರ- ಇದನ್ನೇ ಆಹಾರ ಪದ್ಧತಿಯಾಗಿ ರೂಢಿಸಿಕೊಂಡ ಯುವಕರಿಗೆ ಕೊರತೆ ಇಲ್ಲ. ಆದರೆ ಉತ್ತಮ ಪೌಷ್ಟಿಕ ಆಹಾರ ಎಲ್ಲರಿಗೂ ಅತ್ಯಗತ್ಯ.
ಹಲವು ಮಂದಿ ಅಗತ್ಯ ಪೌಷ್ಟಿಕಾಂಶ ಸೇವಿಸುವುದಿಲ್ಲ. ಅಮೆರಿಕನ್ನರಿಗೆ ನೀಡಲಾದ ಆಹಾರ ಪದ್ಧತಿ ಮಾರ್ಗಸೂಚಿ ಅನ್ವಯ, ಬಹುತೇಕ ಮಂದಿಯ ಆಹಾರದಲ್ಲಿ ಪೊಟಾಷಿಯಂ, ಫೈಬರ್, ಕೊಲೈನ್, ಮೆಗ್ನೇಶಿಯಂ, ಕ್ಯಾಲ್ಸಿಯಂ ಹಾಗೂ ವಿಟಮಿನ್ ಎ, ಡಿ, ಇ ಹಾಗೂ ಸಿ ಕೊರತೆ ಇದೆ.
ಉತ್ತಮ ಪೌಷ್ಟಿಕ ಆಹಾರಕ್ಕೆ ಐದು ಸೂತ್ರಗಳು ಇಲ್ಲಿವೆ ನೋಡಿ.
1. ಪ್ರೊಟೀನ್:
ಆಲೂಗಡ್ಡೆ ತ್ಯಜಿಸುವವರೇ ಅಧಿಕ. ಆದರೆ ಕ್ಯಾಲಿಫೋರ್ನಿಯಾ ವಿವಿ ನಡೆಸಿದ ಒಂದು ಸಂಶೋಧನೆ ಪ್ರಕಾರ, ಆಹಾರ ಪದ್ಧತಿಯಲ್ಲಿ ಆಲೂಗಡ್ಡೆ ತ್ಯಜಿಸಿದವರು 12 ವಾರಗಳಲ್ಲಿ ತೂಕ ಕಳೆದುಕೊಳ್ಳುತ್ತಾರೆ. ಇದರಲ್ಲಿ ಅಧಿಕ ಪ್ರಮಾಣದ ಪೊಟಾಷಿಯಂ ಇದೆ. ರಕ್ತದ ಒತ್ತಡ ನಿರ್ವಹಣೆಗೆ ಮತ್ತು ನರಗಳ ಸಂದೇಶ ರವಾನಿಸಲು ಇದು ಅಗತ್ಯ. ದಿನಕ್ಕೆ 4.7 ಮಿಲಿಗ್ರಾಂ ಪೊಟಾಷಿಯಂ ಅಗತ್ಯ.
2. ಬೇಳೆಕಾಳು:
ಬೇಳೆ ಕಾಳುಗಳಲ್ಲಿ ಕ್ಯಾಲೊರಿ ಕಡಿಮೆ; ಪ್ರೊಟೀನ್ ಹೆಚ್ಚು. ಫೈಬರ್ ಮತ್ತು ಪೊಟಾಷಿಯಂ ಅಧಿಕ ಇರುತ್ತದೆ. ಆದರೆ ಬಹುತೇಕ ಮಂದಿ ಬೇಳೆಕಾಳು ಬಳಸುವುದು ಕಡಿಮೆ. ಇದು ರಕ್ತದ ಸಕ್ಕರೆ ಅಂಶ ನಿಯಂತ್ರಿಸಲು ಸಹಕಾರಿ. ಇದರಿಂದ ಮಧುಮೇಹ ಅಪಾಯ ಸಾಧ್ಯತೆ ಕಡಿಮೆ. ಹೃದಯಕ್ಕೂ ಇದು ಒಳ್ಳೆಯದು ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ.
3. ಕಲ್ಲಂಗಡಿ:
ನಿಮ್ಮ ಜನನೇಂದ್ರಿಯಕ್ಕೆ ಸಂಬಂಧಿಸಿದ ಗ್ರಂಥಿ ಹಾಗೂ ಹೃದಯಕ್ಕೆ ಸುರಕ್ಷೆ ಒದಗಿಸುವ ಜ್ಯೂಸ್ ಬೇಕೇ? ಕಲ್ಲಂಗಡಿ ಸೇವಿಯಿರಿ. ಇದು ಯಥೇಚ್ಛ ಪ್ರಮಾಣದಲ್ಲಿ ಲೈಕೊಪೆನ್ ಹೊಂದಿದ್ದು, ಇದು ಜನನೇಂದ್ರಿಯ ಕ್ಯಾನ್ಸರ್ ತಡೆಯಲು ಸಹಕಾರಿ. ಇದು ಹೃದಯ ಆರೋಗ್ಯಕ್ಕೂ ರಾಮಬಾಣ. ನಿಮ್ಮ ತ್ವಚೆಯನ್ನು ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ ಹಾಗೂ ಚರ್ಮ ಸುಕ್ಕುಕಟ್ಟುವುದನ್ನು ತಡೆಯುತ್ತದೆ.
4. ಡಾರ್ಕ್ ಚಾಕೊಲೇಟ್
ಅಮೆರಿಕದಲ್ಲಿ ಸಾವಿಗೀಡಾಗುವ ಪ್ರತಿ ನಾಲ್ಕು ಮಂದಿಯ ಪೈಕಿ ಒಬ್ಬರು ಹೃದ್ರೋಗದಿಂದ ಸಾಯುತ್ತಾರೆ. ಆದ್ದರಿಂದ ಹೃದಯಕ್ಕೆ ಆಪ್ಯಾಯ ಮಾನವಾದ ಡಾರ್ಕ್ ಚಾಕೊಲೇಟ್‌ಗಳನ್ನು ಸವಿಯುವುದು ಅನಿವಾರ್ಯ. ಇದರಲ್ಲಿರುವ ಕೊಕೋ ಫ್ಲೆವನಾಲ್ ಎಂಬ ಅಂಶ ರಕ್ತ ಪರಿಚಲನೆ ಸರಾಗಗೊಳಿಸುತ್ತದೆ. ರಕ್ತನಾಳ ಒಡೆಯುವುದು ಹಾಗೂ ರಕ್ತದ ಅಧಿಕ ಒತ್ತಡ, ಹೃದಯಾಘಾತ ಪಡೆಯುತ್ತದೆ.
5. ಅರಿಶಿಣ:
ನಿಮ್ಮ ಅಡುಗೆ ಮನೆಯಲ್ಲಿ ಅರಿಶಿಣ ಇರಲೇಬೇಕು. ಇದು ಭಾರತೀಯ ಆಹಾರ ಪದ್ಧತಿಯ ಅವಿಭಾಜ್ಯ ಅಂಗ. ಸಾಂಪ್ರದಾಯಿಕ ಚೀನಿ ಅಡುಗೆ ಹಾಗೂ ಆಯುರ್ವೇದದಲ್ಲೂ ಇದಕ್ಕೆ ಉನ್ನತ ಸ್ಥಾನ. ಅರಿಶಿಣದಲ್ಲಿರುವ ಕುರ್ಕುಮಿನ್ ಎಂಬ ಅಂಶ ಆರೋಗ್ಯಕ್ಕೆ ಗಣನೀಯ ಕೊಡುಗೆ ನೀಡುತ್ತದೆ ಎಂದು ಆಧುನಿಕ ಸಂಶೋಧನೆಗಳು ಹೇಳುತ್ತವೆ.