ಎಳನೀರು ಬರೀ ನೀರಲ್ಲ, ಇದರ ಆರೋಗ್ಯ ಲಾಭಗಳು ಹತ್ತು ಹಲವು

Update: 2016-10-14 18:38 GMT

ಎಳನೀರು ಕೇವಲ ಪಾನೀಯವಲ್ಲ, ಅದು ಸಹಜವಾಗಿ ಸಿಹಿಯಾಗಿರುತ್ತದೆ. ಜೀರ್ಣಕ್ರಿಯೆಗೆ ಉತ್ತೇಜಿಸುತ್ತದೆ. ಮೂತ್ರಕೋಶದ ಹಾದಿಗಳನ್ನು ಸಹಜವಾಗಿ ಸ್ವಚ್ಛಗೊಳಿಸಿ ದೇಹದ ಲ್ಯುಬ್ರಿಕೇಶನ್ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಎಳನೀರಲ್ಲಿ ಸಕ್ಕರೆ, ನೀರು ಬಿಟ್ಟರೆ ಕೊಬ್ಬು ಮತ್ತು ನೈಟ್ರೋಜಿಯಸ್ ತತ್ವಗಳಿರುತ್ತವೆ. ಉಷ್ಣವಲಯದ ಜನರು ಇದನ್ನು ಆರಂಭದಿಂದಲೇ ಆಸ್ವಾದಿಸುತ್ತಿದ್ದಾರೆ.

ಹಲವಾರು ಆರೋಗ್ಯ ಲಾಭಗಳು

ಇದು ಸಹಜವಾದ ಸ್ಟರ್ಲೈಜ್ಡ್ ಆಗಿರುವ ನೀರು. ಇದು ಔಷಧಿಗಳ ಅಡ್ಡಪರಿಣಾಮಗಳಿಗೆ ನಿರೋಧಕವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಮಕ್ಕಳಿಗೆ ಕೊಡಲು ಸುರಕ್ಷಿತ. ಎಳನೀರು ಪಾನೀಯ ತನ್ನದೇ ಆದ ಕಂಟೇನರಲ್ಲಿ ಬರುತ್ತದೆ. ಹಲವಾರು ರೋಗಗಳ ನಿವಾರಣೆಗೆ ಇದನ್ನು ಬಳಸಲಾಗುತ್ತದೆ. ಜ್ವರ, ತಲೆನೋವು, ಅತಿಸಾರ ಮತ್ತು ಅಜೀರ್ಣ ಸಮಸ್ಯೆಗಳ ಸಂದರ್ಭದಲ್ಲಿ ಎಳನೀರು ದಿವ್ಯೌಷಧ. ಗಂಭೀರ ಕಾಯಿಲೆಗಳಿಗೆ ಔಷಧಿ
 

- ಕಾಲರಾ ರೋಗಿಗಳಿಗೆ ಉತ್ತಮ ಔಷಧಿ

- ಜಠರದ ಸಮಸ್ಯೆ ಇರುವ ಹಸುಗೂಸುಗಳಿಗೆ ಉತ್ತಮ. ಹೊಟ್ಟೆಯ ಹುಳುಗಳನ್ನು ಕೊಲ್ಲುತ್ತದೆ.

- ಸಿಡುಬು ರೋಗ ಮತ್ತು ಮೈಮೇಲೆ ಗುಳ್ಳೆ ಬರುವ ಸಮಸ್ಯೆ ಇದ್ದವರಿಗೆ ಇದು ಒಳ್ಳೆಯದು.

- ಮಲಬದ್ಧತೆಯ ಸಮಸ್ಯೆಗೆ ಉತ್ತಮ ಔಷಧಿ, ಕರುಳಿನ ಕಾರ್ಯವನ್ನು ಸುಧಾರಿಸುತ್ತದೆ. ಅಸಿಡಿಟಿ ಮತ್ತು ಅಲ್ಸರ್ ಸಮಸ್ಯೆ ಇರುವವರಿಗೂ ಉತ್ತಮ.

- ವೈರಸುಗಳಿಂದ ದೇಹವನ್ನು ರಕ್ಷಿಸುತ್ತದೆ.

- ಆಸ್ಟಿಯೋಪೊರೊಸಿಸ್‌ನಿಂದ ರಕ್ಷಣೆ ನೀಡುತ್ತದೆ.

- ಆರೋಗ್ಯಕರ ಥೈರಾಯ್ಡ ಕಾರ್ಯಕ್ಕೆ ಅಗತ್ಯ.

- ಕ್ಯಾನ್ಸರ್ ತೆರಪಿಯಲ್ಲೂ ಎಳನೀರು ಬಳಸಲಾಗುತ್ತದೆ.

- ಎಳನೀರು ಮಧುಮೇಹವನ್ನು ನಿಯಂತ್ರಿಸುತ್ತದೆ.

ಎಳನೀರಿನ ಸಾಮಾನ್ಯ ಆರೋಗ್ಯ ಲಾಭಗಳು

- ದೇಹಕ್ಕೆ ಶಾಖ ಮತ್ತು ಬಿರುಬೇಸಗೆಯಿಂದ ಆಗುವ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.

- ದೇಹವನ್ನು ತಂಪಾಗಿ ಸೂಕ್ತ ಉಷ್ಣತೆಯಲ್ಲಿಡಲು ನೆರವಾಗುತ್ತದೆ.

- ಎಳನೀರಲ್ಲಿ ಸಾವಯವ ಸಂಯುಕ್ತಗಳಿದ್ದು, ಆರೋಗ್ಯಕರ ಪ್ರಗತಿಯನ್ನು ಪ್ರಚೋದಿಸುತ್ತದೆ.

- ನಿಶ್ಯಕ್ತಿಯಿಂದ ಪರಿಹಾರ

- ಕರುಳಿನ ಚಲನೆಯಿಂದಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

- ಈಸ್ಟಿನಿಂದಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

- ಇಸಬು ಸಮಸ್ಯೆ ನಿವಾರಿಸುತ್ತದೆ.

- ಎಳನೀರಿನಿಂದ ನಿತ್ಯವೂ ಮುಖ ತೊಳೆದರೆ ಕಪ್ಪು ಕಲೆಗಳು ಮತ್ತು ಮೊಡವೆಗಳಿಂದ ರಕ್ಷಣೆ ಸಿಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News