ನಾಲ್ಕು ಸಾಮಾನ್ಯDry Fruits ಹಾಗೂ ಅವುಗಳ ಅಸಾಮಾನ್ಯ ಲಾಭಗಳು!

Update: 2016-03-27 05:44 GMT

ನಿಮ್ಮ ದೇಹಕ್ಕೆ ಪಡೆದುಕೊಳ್ಳುವ ಕ್ಯಾಲರಿಗಳ ಬಗ್ಗೆ ಬಹಳ ಚಿಂತೆ ಮಾಡುತ್ತಿದ್ದಲ್ಲಿ ಕಡಲೆ ಕಾಳುಗಳು ಕೊಬ್ಬು ಮತ್ತು ಕ್ಯಾಲರಿಗಳನ್ನು ತುಂಬಿಕೊಂಡಿರುತ್ತವೆ ಎಂದು ಓದಿರಬಹುದು. ಕೆಲವು ಕಡಲೆ ಕಾಳುಗಳಲ್ಲಿ ಕೊಲೆಸ್ಟರಾಲ್ ಇದೆ ಎಂದೂ ಹೇಳಲಾಗುತ್ತದೆ. ವಾಸ್ತವದಲ್ಲಿ ಕಡಲೆ ಕಾಳುಗಳು ಮತ್ತು ಎಣ್ಣೆಯ ಬೀಜಗಳು ಸಹ ಸಸ್ಯಜನ್ಯ ಆಹಾರಗಳು. ಹೀಗಾಗಿ ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ ಇರುತ್ತದೆ. ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ಪ್ರೊಟೀನ್ ಅಂಶ ಕಡಿಮೆ ಇರುತ್ತದೆ.

ಬಾದಾಮಿಗಳು

  ಇವು ಹೃದಯಕ್ಕೆ ಅತೀ ಉತ್ತಮ ಆಹಾರ. ಪೌಷ್ಠಿಕಾಂಶಗಳಿಂದ ಕೂಡಿರುವ ಬಾದಾಮಿ, ಹೃದಯ ರೋಗಕ್ಕೆ ಕಾರಣವಾಗುವ ಎಲ್‌ಡಿಎಲ್ ಕೊಲೆಸ್ಟರಾಲ್ ಕಡಿಮೆ ಮಾಡುವ ಆಲ್ಫಾ ಟೊಕೊಫೆರಲ್ ಎನ್ನುವ ಆಂಟಿ ಆಕ್ಸಿಡಂಟನ್ನು ಹೊಂದಿದೆ. ದಿನವೂ 1-2 ಮುಷ್ಠಿ ಬಾದಾಮಿ ತಿಂದರೆ ಎಲ್‌ಡಿಎಲ್ ಕೊಲೆಸ್ಟರಾಲ್ ಮಟ್ಟದಲ್ಲಿ ಕುಸಿತ ಪಡೆಯಬಹುದು ಎಂದು ಅಧ್ಯಯನಗಳು ಹೇಳಿವೆ. ಬಾದಾಮಿಗಳಲ್ಲಿ ವಿಟಮಿನ್ ಇ ಕೂಡ ಚೆನ್ನಾಗಿ ಚರ್ಮಕ್ಕೆ ಪೋಷಣೆ ಕೊಡುತ್ತದೆ. ರೈಬೊಫ್ಲಾವಿಯನ್, ಮ್ಯಾಂಗನೀಸ್ ಮತ್ತು ಮೆಗ್ನೇಶಿಯಂ ಅಂಶವೂ ಚೆನ್ನಾಗಿದೆ.

ಪಿಸ್ತಾ ಕಾಳುಗಳು

 ಪಿಸ್ತಾ ಮಧುಮೇಹಿಗಳಿಗೆ ಉತ್ತಮ ಮತ್ತು ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಪಿಸ್ತಾಗಳನ್ನು ನಿತ್ಯವೂ ಒಂದು ಮುಷ್ಠಿಯಷ್ಟು ತಿಂದರೆ ಮಧುಮೇಹಿಗಳು ಸುರಕ್ಷೆಯ ವಲಯದೊಳಗೆ ಇರಬಹುದು. ಇವೂ ಎಲ್‌ಡಿಎಲ್ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತವೆ. ಅಲ್ಲದೆ ಉತ್ತಮ ಕೊಲೆಸ್ಟರಾಲನ್ನು ಉತ್ತೇಜಿಸುವ ಮೂಲಕ ಹೃದಯಕ್ಕೆ ರಕ್ಷಣೆ ಒದಗಿಸುತ್ತವೆ.

ಗೇರು ಬೀಜಗಳು

ಗೇರು ಬೀಜಗಳು ಅತೀ ಕ್ಯಾಲರಿ ಇರುವ ಆಹಾರವಾಗಿದ್ದು, ಕೊಬ್ಬು ಹೆಚ್ಚಾಗಿರುತ್ತದೆ ಎನ್ನಲಾಗುತ್ತದೆ. ಆದರೆ ಅದು ಸುಳ್ಳು. ವಾಸ್ತವದಲ್ಲಿ ಗೇರುಬೀಜಗಳನ್ನು ಮಿತಿಯಲ್ಲಿ ಸೇವಿಸಿದರೆ ತೂಕ ಇಳಿಸಿಕೊಳ್ಳಲು ನೆರವಾಗುತ್ತವೆ. ಮುಖ್ಯವಾಗಿ ಗೇರು ಬೀಜದ ಎಣ್ಣೆಯನ್ನು ಹಲವಾರು ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇವು ಚರ್ಮದ ಬಣ್ಣ ಮಾಸಿದ ಸಮಸ್ಯೆಯನ್ನು ಕಡಿಮೆ ಮಾಡಿ ಚರ್ಮಕ್ಕೆ ಹಾನಿಯಾಗುವುದರಿಂದ ರಕ್ಷಣೆ ಒದಗಿಸುತ್ತವೆ. ಹೆಚ್ಚುವರಿಯಾಗಿ ನಿಮ್ಮ ಬಿರುಕುಬಿಟ್ಟ ಪಾದಗಳಿಗೂ ಇವು ನೆರವಾಗುತ್ತವೆ ಮತ್ತು ಪೌಷ್ಠಿಕಾಂಶ ನೀಡುತ್ತವೆ. 

ವಾಲ್‌ನಟ್‌ಗಳು

 ಇವು ಒತ್ತಡ ನಿವಾರಣೆಗೆ ಉತ್ತಮ. ಮೆದುಳಿನ ಶಕ್ತಿಯನ್ನು ಉತ್ತೇಜಿಸುವ ಆಹಾರವಾಗಿವೆ. ಕೊಲೆಸ್ಟರಾಲ್ ಕಡಿಮೆ ಮಾಡಲು, ರಕ್ತದಲ್ಲಿ ಒತ್ತಡ ಕಡಿಮೆ ಮಾಡಲು ಮತ್ತು ನಿದ್ದೆಯ ಗುಣಮಟ್ಟವನ್ನು ಏರಿಸಲು ಇವು ನೆರವಾಗುತ್ತವೆ. ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಖಿನ್ನತೆಯ ಚಿಹ್ನೆಗಳನ್ನು ಕಡಿಮೆ ಮಾಡುವುದು ಇವುಗಳ ಉತ್ತಮ ಅಂಶವಾಗಿವೆ. ಒಮೆಗಾ 3 ಕೊಬ್ಬು ಇರುವ ಇವು ಹೃದಯ ರೋಗ, ಉರಿಯೂತ ಮತ್ತು ಸ್ತನ ಕ್ಯಾನ್ಸರ್‌ಗಳಿಂದ ರಕ್ಷಣೆ ಒದಗಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News