ದೇವರಾಜ ಅರಸು ಛಾಯಾಚಿತ್ರ ಪ್ರದರ್ಶನ
Update: 2016-03-27 23:25 IST
ಬೆಂಗಳೂರು, ಮಾ. 27: ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ಮಾ.28ರಿಂದ ಎರಡು ದಿನಗಳ ಕಾಲ ದೊಡ್ಡಬಳ್ಳಾಪುರದ ಅರಸು ಪದವಿ ಪೂರ್ವ ಕಾಲೇಜಿನ ಬಯಲು ರಂಗಮಂದಿರದಲ್ಲಿ ದೇವರಾಜ ಅರಸು ಅವರ ವ್ಯಕ್ತಿ ವಿಶೇಷತೆ ಹಾಗೂ ಸಾಧನೆಗಳ ಕುರಿತ ಅಪೂರ್ವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾಸಕ ವೆಂಕಟರಮಣಯ್ಯ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಈ ವೇಳೆ ಸ್ಥಳೀಯ ಮುಖಂಡರು, ಅಕಾರಿಗಳು ಭಾಗವಹಿಸಲಿದ್ದಾರೆ.