ಹುಡುಕಾಟ ಲೇಖಕನ ಕೆಲಸ: ಶೈಲೇಶಚಂದ್ರ ಗುಪ್ತ
ಬೆಂಗಳೂರು, ಮಾ.27: ಪ್ರತಿಯೊಬ್ಬ ಲೇಖಕನಲ್ಲಿಯೂ ಅಸತ್ಯ ಕಾಡುತ್ತಿರುತ್ತದೆ. ಆದುದರಿಂದ ಯಾರಿಂದಲೂ ಪೂರ್ಣಸತ್ಯವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ರಾಜಾ ಶೈಲೇಶಚಂದ್ರ ಗುಪ್ತ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಕಸಾಪ ಸಭಾಂಗಣದಲ್ಲಿ ಪ್ರಣತಿ ಪ್ರಕಾಶನ ವತಿಯಿಂದ ಆಯೋಜಿಸಲಾಗಿದ್ದ ರಾ.ಲ.ಪುರುಷೋತ್ತಮ ಅವರ ‘ಅರ್ಧಸತ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ರಿಸ್ಟಾಟಲ್‌ನಿಂದ ಇಂದಿನ ಯಾವುದೇ ಲೇಖಕರೂ ಎಲ್ಲವನ್ನು ಪರಿಪೂರ್ಣ ಎನ್ನುವುದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಕಾಲಕ್ಕೆ ತಕ್ಕಂತೆ ಪ್ರಸ್ತುತ ವಿದ್ಯಮಾನಗಳಿಗೆ ಅನುಗುಣವಾಗಿ ಯಾವ ದಿಕ್ಕಿನ ಕಡೆ ಪ್ರಯಾಣಿಸಬೇಕು ಎಂಬುದನ್ನು ಯೋಚಿಸುವವರೇ ಹೆಚ್ಚಿದ್ದಾರೆ. ಹಾಗಾಗಿ ಪ್ರತಿಯೊಬ್ಬ ಲೇಖಕನೂ ತನ್ನ ಇತಿಮಿತಿಯೊಳಗೆ ಹೊಸದನ್ನು ಹುಡುಕುವುದರಲ್ಲಿ ನಿರತರಾಗಿರುತ್ತಾರೆ. ಆದರೆ ಲೇಖಕ ಯಾವುದನ್ನಾದರೂ ಒಪ್ಪಿಕೊಳ್ಳದಿದ್ದರೂ ವಾಸ್ತವತೆಯನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಹೇಳಿದರು.
ಸದಾಕಾಲ ಅತೃಪ್ತಿಯಿಂದ, ಬರಹಗಾರರಾದವರಿಗೆ ನೆಮ್ಮದಿ, ಸಂತೋಷ ಇರುವುದಿಲ್ಲ. ಅವರು ಯಾವುದನ್ನು ಎಲ್ಲಿ, ಹೇಗೆ ಮಾಡಬೇಕು ಹಾಗೂ ಕಾಲಕ್ಕೆ ತಕ್ಕಂತೆ ಯಾವ ಹೊಸದಾದ ವಿಷಯವನ್ನು ಪ್ರಸ್ತುತಪಡಿಸಬೇಕು ಎನ್ನುವುದರ ಕುರಿತು ನಿರಂತರ ಹುಡುಕಾಟದಲ್ಲಿ ಜೀವನವನ್ನು ಕಳೆಯುತ್ತಾರೆ. ಹಾಗೂ ಲೇಖಕ ತಮ್ಮ ಸ್ವಾಗತವನ್ನು ಸಹ ಅಧರ್ ಸತ್ಯದಲ್ಲಿಯೇ ಕಾಣುತ್ತಾರೆ ಎಂದು ತಿಳಿಸಿದರು.ತ್ರಕಲಾ ಕಲಾವಿದ ಕೃಷ್ಣಶೆಟ್ಟಿ ಮಾತನಾಡಿ, ಸಮಾಜದ ಎಲ್ಲ ಸಾಹಿತಿಗಳ ಸಮವಾಗಿ ಕೆಲವೇ ಜನ ಸಾಹಿತಿಗಳು ಮಾತ್ರ ವೈಶ್ಯ ಸಮುದಾಯ ಸಾಹಿತಿಗಳು ಬರಲು ಸಾಧ್ಯವಾಗಿದೆ. ಸಮಾಜದ ಎಲ್ಲರ ಎತ್ತರಕ್ಕೆ ವೈಶ್ಯ ಸಮುದಾಯದ ಸಾಹಿತಿಗಳು ಬೆಳೆಯಬೇಕು. ಕುವೆಂಪು, ಬೇಂದ್ರೆಯವರ ಸಾಲಿಗೆ ವೈಶ್ಯ ಸಮುದಾಯದವರು ಸಾಹಿತಿಗಳಾಗಿ ಬರಬೇಕು ಎಂದು ಹೇಳಿದರು.ತ್ತೀಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ವೈಶ್ಯ ಸಮುದಾಯದ ಸಾಹಿತ್ಯ ಎಲ್ಲರ ಜೊತೆಗೆ ಸ್ಪರ್ಧೆಗೆ ನಿಲ್ಲುತ್ತಿವೆ. ಇದು ಇಲ್ಲಿಗೆ ಸಾಕಾಗುವುದಿಲ್ಲ, ಇನ್ನೂ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಕೇವಲ ಕೆಲವೇ ಮಂದಿ ಲೇಖಕರನ್ನು ಪ್ರೋತ್ಸಾಹಿಸುತ್ತಿರುವುದರಿಂದ ನಮ್ಮ ಸಮುದಾಯದ ಲೇಖಕರು ಸಾಹಿತ್ಯ ಕ್ಷೇತ್ರದಿಂದ ಹಿಂದುಳಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ಅರ್ಧಸತ್ಯ ಪುಸ್ತಕದಲ್ಲಿ ನೆಲ,ಜಲ, ಪರಿಸರ ಸಂಪತ್ತುಗಳ ಕುರಿತು ವಿಮರ್ಶೆ ಮಾಡಲಾಗಿದ್ದು, ಇದು ಹೊಸದೊಂದು ಪ್ರಪಂಚಕ್ಕೆ ಕರೆದೊಯ್ಯುತ್ತದೆ ಎಂದು ಶ್ಲಾಸಿದರು.
ವೈಶ್ಯ ಸಮುದಾಯದವರು ಕೇವಲ ಸಂಪತ್ತು ರಕ್ಷಣೆಗೆ ಮಾತ್ರ ಮೀಸಲಾಗಬಾರದು, ರಾಜರು ಆಗಬೇಕು. ಗಾಂ ಜನಾಂಗಕ್ಕೆ ಸೇರಿರುವ ಈ ಸಮುದಾಯ ಅವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಪಾಲಿಸಬೇಕು. ಆ ಮೂಲಕ ಹೊಸದೊಂದು ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.ತ್ತೀಚಿನ ವಿದ್ಯಮಾನಗಳಲ್ಲಿ ನಿಜವಾಗಿ ಗುರುತಿಸಬೇಕಾದಂತಹ ವ್ಯಕ್ತಿಗಳನ್ನು ಗುರುತಿಸುವಲ್ಲಿ ಎಲ್ಲರೂ ವಿಲರಾಗಿದ್ದಾರೆ. ಕೆಲವೇ ಜನರನ್ನು ರೋಲ್ ಮಾಡೆಲ್‌ಗಳಾಗಿ ಬಿಂಬಿಸಲಾಗುತ್ತಿದೆ. ಇದರಿಂದಾಗಿ ಅತ್ಯುತ್ತಮವಾಗಿ ಬರೆಯಬಲ್ಲ ಹೊಸ ಮುಖಗಳು ಹೊರ ಜಗತ್ತಿಗೆ ಕಾಣ ಸಿಗುವುದೇ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಾರ್ಯಕ್ರಮದಲ್ಲಿ ಸಾಹಿತಿ ಡಾ.ವಿಜಯಾ ಸುಬ್ಬಾರಾವ್, ಅಂಜನಾ ಶೆಟ್ಟಿ, ಲೇಖಕ ರಾ.ಲ.ಪುರುಷೋತ್ತಮ ಇನ್ನಿತರರು ಉಪಸ್ಥಿತರಿದ್ದರು.