ಡಾ.ನಾಗೇಶ್ ಬೆಟ್ಟಕೋಟೆಗೆ ನಾಳೆ ಅಭಿನಂದನೆ
Update: 2016-03-27 23:31 IST
ಬೆಂಗಳೂರು, ಮಾ.27: ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರದರ್ಶನ ಕಲಾ ವಿಭಾಗದ ಪ್ರಾಧ್ಯಾಪಕ ಡಾ.ವಿ.ನಾಗೇಶ್ ಬೆಟ್ಟಕೋಟೆಯವರಿಗೆ ಮಾ.29ರ ಸಂಜೆ 7ಗಂಟೆಗೆ ಮಲ್ಲತ್ತಹಳ್ಳಿ ಕಲಾಗ್ರಾಮದ ಸಮುಚ್ಚಯ ಬಯಲು ರಂಗಮಂದಿರದಲ್ಲಿ ಅಭಿನಂದನೆಯನ್ನು ಸಲ್ಲಿಸಲಾಗುತ್ತದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಮತ್ತು ಸಕ್ಕರೆ ಸಚಿವ ಮಹದೇವ ಪ್ರಸಾದ್ ನೆರವೇರಿಸಲಿದ್ದಾರೆ. ಅಭಿನಂದನೆಯನ್ನು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಎ.ಮಂಜು, ಅಧ್ಯಕ್ಷತೆಯನ್ನು ಬೆಂವಿವಿ ಕುಲಪತಿ ಡಾ.ಬಿ.ತಿಮ್ಮೇಗೌಡ ವಹಿಸಲಿದ್ದಾರೆ. ಅಭಿನಂದನಾ ಗ್ರಂಥ ಬಿಡುಗಡೆಯನ್ನು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಅಭಿನಂದನಾ ನುಡಿಯನ್ನು ಜಾನಪದ ವಿದ್ವಾಂಸ ಡಾ.ಗೊ.ರು.ಚನ್ನಬಸಪ್ಪ, ಮುಖ್ಯ ಅತಿಥಿಗಳಾಗಿ ರಂಗಕಲಾವಿದ ಡಾ.ಮುಖ್ಯಮಂತ್ರಿ ಚಂದ್ರು, ಕವಿ ಡಾ.ಸಿದ್ದಲಿಂಗಯ್ಯ, ಬೆಂವಿವಿ ವಿಶ್ರಾಂತ ಕುಲಪತಿಗಳಾದ ಡಾ.ಎನ್.ಆರ್.ಶೆಟ್ಟಿ, ಡಾ.ಎಚ್.ಎ.ರಂಗನಾಥ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.