ಛಾಯಾಗ್ರಾಹಕ ಪ್ರಸಾದ್ ನಿಧನ
ಬೆಂಗಳೂರು, ಮಾ. 27: ದೂರದರ್ಶನ ಕೇಂದ್ರದ ನಿವೃತ್ತ ಕ್ಯಾಮರಾಮನ್ ಹಾಗೂ ಖ್ಯಾತ ಛಾಯಾಗ್ರಾಹಕ ಟಿ.ಎನ್.ಎಸ್.ಪ್ರಸಾದ್(63) ರವಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪ್ರಸಾದ್ ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಪ್ರಸಾದ್ ಅವರ ಛಾಯಾಗ್ರಹಣದಲ್ಲಿ ದೂರದರ್ಶನದಲ್ಲಿ ಮೂಡಿ ಬಂದ ‘ತಾಣ ಯಾನ’ ಪ್ರವಾಸಿ ತಾಣ, ದೇಗುಲಗಳ ಬಗೆಗಿನ ಕಾರ್ಯಕ್ರಮ ಜನಮನ್ನಣೆಗೆ ಪಾತ್ರವಾಗಿತ್ತು.ವರು ಮುಂಬೈ, ಬೆಂಗಳೂರು, ಹೈದರಾಬಾದ್, ಗುವಾಹಟಿ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಮೂರು ವರ್ಷಗಳ ಹಿಂದೆ ಹೈದರಾಬಾದ್ ದೂರದರ್ಶನ ಕೇಂದ್ರದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಮತ್ತಿಕೆರೆಯ ಮುತ್ಯಾಲನಗರದಲ್ಲಿ ಪ್ರಸಾದ್ ವಾಸವಾಗಿದ್ದರು.
ವಿದೇಶದಲ್ಲಿರುವ ಪುತ್ರಿಯರು ಆಗಮಿಸಿದ ಬಳಿಕ ನಗರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರಿಗೆ ನಗರದ ಪ್ರೆಸ್‌ಕ್ಲಬ್ ಸೇರಿದಂತೆ ಹಿರಿಯ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.