ವಿವಿಧ ಹುದ್ದೆಗಳಿಗೆ ಸಂದರ್ಶನ
Update: 2016-03-30 22:37 IST
ಬೆಂಗಳೂರು, ಮಾ. 30: ಲೋಕಸೇವಾ ಆಯೋಗ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ, ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ಬೋಧಕರ ಹುದ್ದೆಗಳಿಗೆ ಹಾಗೂ ಇತರ ಇಲಾಖೆಗಳಲ್ಲಿನ ವಿವಿಧ ಹುದ್ದೆಗಳಿಗೆ ಸಂದರ್ಶನವನ್ನು ಬೆಂಗಳೂರಿನ ಉದ್ಯೋಗ ಸೌಧದ ಆಯೋಗದ ಕೇಂದ್ರ ಕಚೇರಿಯಲ್ಲಿ ನಡೆಸಲಿದೆ.
ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾ ಪತ್ರಗಳನ್ನು ಈಗಾಗಲೇ ಕಳುಹಿಸಲಾಗಿದೆ. ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ, ಸಂದರ್ಶನದ ವೇಳೆ, ದಿನಾಂಕ ಇತ್ಯಾದಿ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್ ಠಿಠಿ://ಠ್ಚ.ಚ್ಟ.್ಞಜ್ಚಿ.ಜ್ಞಿನಲ್ಲಿ ನೋಡಬಹುದು.ರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಪತ್ರ ಸ್ವೀಕೃತವಾಗದಿದ್ದಲ್ಲಿ ಸಂಬಂತ ದಾಖಲೆಗಳೊಂದಿಗೆ ಕೇಂದ್ರ ಕಚೇರಿಯನ್ನು ಸಂದರ್ಶನಕ್ಕೆ ನಿಗದಿಪಡಿಸಿರುವ ದಿನಾಂಕದೊಳಗೆ ಸಂಪರ್ಕಿಸಬಹುದು ಎಂದು ಲೋಕಸೇವಾ ಆಯೋಗದ ಪ್ರಕಟನೆ ಕೋರಿದೆ.