ಕೃಷಿಕರಿಗೆ ಕೃಷಿಯಲ್ಲಿ ದೂರ ಶಿಕ್ಷಣ
ಬೆಂಗಳೂರು, ಮಾ. 30: ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ವಿಸ್ತರಣಾ ನಿರ್ದೇಶನಾಲಯವು ಕೃಷಿಯಲ್ಲಿನ ಹೊಸ ಆವಿಷ್ಕಾರಗಳನ್ನು ದೂರ ಶಿಕ್ಷಣದ ಮೂಲಕ ರೈತರಿಗೆ ಮುಟ್ಟಿಸುವ ಸಲುವಾಗಿ 2016-17ರ ಶೈಕ್ಷಣಿಕ ವರ್ಷದಲ್ಲಿ ಮೂರು ವಿಷಯಗಳಲ್ಲಿ ದೂರ ಶಿಕ್ಷಣ ಕಾರ್ಯಕ್ರಮವನ್ನು ಕನ್ನಡ ಭಾಷೆಯಲ್ಲಿ ನಡೆಸಲಿದೆ.
ಸಮಗ್ರ ಕೃಷಿ (12 ತಿಂಗಳು) ಆಹಾರ ಧಾನ್ಯ, ಹಣ್ಣು ಮತ್ತು ತರಕಾರಿಗಳ ಕೊಯ್ಲೋತ್ತರ ನಿರ್ವಹಣೆ (6 ತಿಂಗಳು) ಮತ್ತು ಸಾವಯವ ಕೃಷಿ (12 ತಿಂಗಳು ಅಂಚೆ ಶಿಕ್ಷಣದ ಮೂಲಕ) ಈ ಕೋರ್ಸ್‌ಗಳಿಗೆ ಓದು ಬರಹ ಬಲ್ಲವರು ಮತ್ತು ಏಳನೆ ತರಗತಿ ಪಾಸಾದವರು ಅರ್ಹರಾಗಿರುತ್ತಾರೆ.ರೂ.ಮೌಲ್ಯದಡಿ.ಡಿ/ಪೋಸ್ಟರ್ ಆರ್ಡರನ್ನು ಕಂಟ್ರೋಲರ್ ಕೃಷಿ ವಿಶ್ವ ವಿದ್ಯಾಲಯ, ಜಿಕೆವಿಕೆ, ಬೆಂಗಳೂರು ಇವರಿಗೆ ಸಂದಾಯವಾಗುವಂತೆ ಸಲ್ಲಿಸಿ ಅರ್ಜಿಯನ್ನು ಸಂಯೋಜಕರು, ದೂರ ಶಿಕ್ಷಣ ಘಟಕ, ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ, ಬೆಂಗಳೂರು-24 ಮತ್ತು ಅರ್ಜಿಗಳನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಎ.1ರಿಂದ ಪಡೆಯಬಹುದು.
ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಎ.30 ಕೊನೆಯ ದಿನ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ-080-2341 8883 ಅಥವಾ 2341 0560 ಸಂಪರ್ಕಿಸ ಬಹುದು ಎಂದು ಕೃಷಿ ವಿಶ್ವ ವಿದ್ಯಾಲಯದ ಪ್ರಕಟಣೆ ತಿಳಿಸಿದೆ.