ಹೈದರಾಬಾದ್ ವಿವಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ: ಕೇಂದ್ರ ಸಚಿವರ ರಾಜೀನಾಮೆಗೆ ಆಗ್ರಹ
ಬೆಂಗಳೂರು, ಮಾ, 30: ಹೈದಾರಬಾದ್ ಕೇಂದ್ರಿಯ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡಿರುವ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ, ಸ್ಮತಿ ಇರಾನಿ ಹಾಗೂ ವೆಂಕಯ್ಯನಾಯ್ಡು ರಾಜೀನಾಮೆಗೆ ಆಗ್ರಹಿಸಿ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ‘ಮಾನವ ಸರಪಳಿ ಮತ್ತು ಪ್ರತಿಕೃತಿ ದಹನ’ದ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ದಲಿತ ಮುಖಂಡ ಆರ್.ಮೋಹನ್ ರಾಜ್, ದಲಿತ ನಕ್ಷತ್ರ ರೋಹಿತ್ ವೇಮುಲಾನ ಆಶಯಗಳ ಈಡೇರಿಕೆಗಾಗಿ ರೋಹಿತ್‌ನ ಸಾವಿಗೆ ಕಾರಣರಾದವರನ್ನು ಬಂಸಬೇಕು. ಅಲ್ಲದೆ, ಈಗಾಗಲೇ ಬಂಸಿರುವ ವಿದ್ಯಾರ್ಥಿಗಳನ್ನು ಬೇಷರತ್ತಾಗಿ ಬಿಡುಗಡೆಗೊಳಿಸಿ ಮೊಕದ್ದಮೆಗಳನ್ನು ವಾಪಸು ಪಡೆಯಬೇಕೆಂದು ಆಗ್ರಹಿಸಿದರು.ೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ, ಸ್ಮತಿ ಇರಾನಿ ಹಾಗೂ ವೆಂಕಯ್ಯನಾಯ್ಡು ರಾಜೀನಾಮೆ ನೀಡಬೇಕು. ಅದೇ ರೀತಿ, ವೇಮುಲಾ ಪ್ರಕರಣದಲ್ಲಿ ಪ್ರಮುಖ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಮುದಾಯಕ್ಕೆ ಅವಮಾನ ಮಾಡಿರುವ ಕೇಂದ್ರ ಸಚಿವ ವೆಂಕಯ್ಯನಾಯ್ಡು ರವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಂಘಟನೆಯ ಬಸವರಾಜ್ ಕೌತಾಳ್, ಡಿ.ಸಿದ್ದರಾಜು, ಮುನಿಕೃಷ್ಣ, ಆದಿಲಕ್ಷ್ಮೀ ಸೇರಿ ಪ್ರಮುಖರು ಭಾಗವಹಿಸಿದ್ದರು.