×
Ad

ಎ. 3ರಂದು ಕೇಂದ್ರ ಸರಕಾರ ನಿವೃತ್ತ ನೌಕರರ ಸಮಾವೇಶ

Update: 2016-03-30 22:40 IST

ಬೆಂಗಳೂರು, ಮಾ.30: ಕೇಂದ್ರ ಸರಕಾರ ನಿವೃತ್ತ ನೌಕಕರಿಗೆ ಹಾಗೂ ಕುಟುಂಬಸ್ಥರಿಗೆ ನೀಡುವ ಆರೋಗ್ಯ ಸೌಲಭ್ಯಗಳನ್ನು ಎಲ್ಲಾ ಸರಕಾರಿ ನಿವೃತ್ತ ನೌಕರರಿಗೆ ನೀಡಬೇಕು ಎಂದು ಶಾಸನಬದ್ಧ ಹಾಗೂ ಸ್ವಾಯತ್ತ ಸಂಸ್ಥೆಗಳ ಪಿಂಚಣಿದಾರರ ಒಕ್ಕೂಟದ ಅಧ್ಯಕ್ಷ ಎ.ಎನ್.ಬಲರಾಮ್ ಒತ್ತಾಯಿಸಿದ್ದಾರೆ. ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ನಿವೃತ್ತ ನೌಕಕರಿಗೆ ಕೆಲವರಿಗೆ ಮಾತ್ರ ಆರೋಗ್ಯ ಸೌಲಭ್ಯಗಳು ಲಭ್ಯವಾಗುತ್ತಿವೆ. ಇನ್ನು ಕೆಲವರಿಗೆ ಆರೋಗ್ಯ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ಕೇಂದ್ರ ಸರಕಾರದ ಎಲ್ಲಾ ನೌಕರರಿಗೆ ಒಂದೇ ರೀತಿಯ ಆರೋಗ್ಯ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸುವುದಕ್ಕೆ ಎ. 3 ರಂದು ನಗರದ ಕಾಫಿ ಮಂಡಳಿ ಸಭಾಂಗಣದಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಾರ್ಯಕ್ರಮವನ್ನು ಸಂಸದ ಪಿ.ಸಿ.ಮೋಹನ್ ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಪಿಂಚಣಿದಾರರ ಸಮಸ್ಯೆಗಳು ಆರೋಗ್ಯ ಸೌಲಭ್ಯಗಳ ಕುರಿತು ಚರ್ಚಿಸಲಾಗುವುದು ಹಾಗೂ ಈ ಸಂಸದರಿಗೆ ಸಂಘದಿಂದ ಮನವಿ ಪತ್ರವನ್ನು ಇದೇ ವೇಳೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News