×
Ad

‘ದಾಖಲೆಯಿಲ್ಲದೆ ವಿನಾಕಾರಣ ಆರೋಪ ಸರಿಯಲ್ಲ’

Update: 2016-03-30 22:42 IST

ಬೆಂಗಳೂರು, ಮಾ. 30: ಕೀಳುಮಟ್ಟದ ಪ್ರಚಾರಕ್ಕಾಗಿಯೇ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಯಾವುದೇ ದಾಖಲೆಯಿಲ್ಲದೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಮೇಯರ್ ಮಂಜುನಾಥ್ ರೆಡ್ಡಿ ಕಿಡಿಕಾರಿದ್ದಾರೆ.
ಬುಧವಾರ ನಗರದ ಬಿಬಿಎಂಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದ್ಮನಾಭರೆಡ್ಡಿಯವರು ಪ್ರಚಾರದ ಹುಚ್ಚಿಗೆ ಸುಳ್ಳು ಆರೋಪಗಳನ್ನು ಮಾಡಿದ್ದರೆ, ಮತ್ತೊಬ್ಬ ಬಿಜೆಪಿ ಸದಸ್ಯ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಹೇಳುತ್ತಿದ್ದು, ಬಿಜೆಪಿ ಸದಸ್ಯರು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.
ನಮ್ಮ ವಿರುದ್ಧ ಅವರು ಬಿಡುಗಡೆ ಮಾಡಿರುವ 13 ಚಾರ್ಜ್‌ಶೀಟ್ ಎ್ಐಆರ್‌ನಲ್ಲಿ ಅನಗತ್ಯ ವಿಷಯಗಳಿವೆ. ಅಲ್ಲದೆ, ಎಲ್ಲ ಹಗರಣಗಳೂ ಬಿಜೆಪಿ ಕಾಲದಲ್ಲೇ ನಡೆದಿವೆ ಎಂದು ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಆಡಳಿತವು ಬಿಬಿಎಂಪಿಯಲ್ಲಿ ಉತ್ತಮ ಬಜೆಟ್ ಮಂಡಿಸಿದೆ. ಇಂತಹ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ದೂರಿದರು.
ವರಿಷ್ಠರಿಗೆ ಮಣಿದು ಬಿಜೆಪಿಯವರು ಕಸ ವಿಲೇವಾರಿ ಗುತ್ತಿಗೆಯನ್ನು ಡಿವಿಜಿ ಸಂಸ್ಥೆಗೆ ನೀಡಿದ್ದರು. ಚಾಮರಾಜಪೇಟೆಯಲ್ಲಿ ನಡೆದ ಅಕ್ರಮ ಸೇರಿದಂತೆ ಹಲವು ಅಕ್ರಮಗಳೆಲ್ಲ ಅವರ ಕಾಲದಲ್ಲೇ ಆಗಿವೆ. ಅದನ್ನೆಲ್ಲ ಬಿಟ್ಟು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಮಂಜುನಾಥರೆಡ್ಡಿ ಟೀಕಿಸಿದರು.
್ರೆೆರೇಟ್, ಕೊಳವೆ ಬಾವಿ ಶುಲ್ಕವನ್ನು ಕಡಿಮೆ ಮಾಡಲು ಪಾಲಿಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಆದಷ್ಟು ಬೇಗ ಇದು ಕಡಿಮೆಯಾಗಲಿದೆ ಎಂದು ಅವರು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಿವರಾಜು, ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News