×
Ad

ಸಾಲ ಯೋಜನೆಯಡಿ ಜಿಲ್ಲೆಗೆ 1,580 ಕೋಟಿ ರೂ. ಬಿಡುಗಡೆ: ಲಕ್ಷ್ಮೀನಾರಾಯಣ್

Update: 2016-03-30 22:42 IST

ಬೆಂಗಳೂರು, ಮಾ. 30: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 2016-17ನೆ ಸಾಲಿಗೆ ಸಾಲ ಯೋಜನೆಯಡಿ 1,580 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಕೆನರಾ ಬ್ಯಾಂಕ್ ವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಲಕ್ಷ್ಮೀನಾರಾಯಣ್ ತಿಳಿಸಿದ್ದಾರೆ.
  
ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ 2016-17ನೆ ಸಾಲಿನ ಸಾಲ ಯೋಜನೆಗೆ ಸಂಬಂಸಿದ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲೆಗೆ ಪ್ರಸಕ್ತ ಸಾಲ ಯೋಜನೆಗೆ ಹಿಂದಿನ ಸಾಲಿಗಿಂತ 300 ಕೋಟಿ ರೂ.ಹೆಚ್ಚುವರಿಯಾಗಿ ದೊರೆತಿದ್ದು, ಬ್ಯಾಂಕ್ ಅಕಾರಿಗಳು ಲಾನುಭವಿಗಳಿಗೆ ತಲುಪಿಸಿ ನಿಗದಿತ ಗುರಿ ಸಾಸಬೇಕು ಎಂದರು.ವರ್ಷ ನಿಗದಿಯಾಗಿರುವ ಸಾಲದ ಮೊತ್ತದಲ್ಲಿ ಶೇ.70ರಷ್ಟು ಹಣ ಕೃಷಿ ವಲಯಕ್ಕೆ, ಉಳಿದ ಹಣ ಸೇವಾ, ವಾಣಿಜ್ಯ, ಕೈಗಾರಿಕಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗುವುದು. ಜಿಲ್ಲೆಯ ಅಂತರ್ಜಲಮಟ್ಟ ಹೆಚ್ಚಿಸಲು ಬ್ಯಾಂಕುಗಳು ವಿವಿಧ ಯೋಜನೆಗಳಿಗೆ ಸಾಲ ನೀಡುತ್ತಿದೆ. ಇವುಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ, ರೈತರಿಗೆ ತಲುಪುವಂತೆ ಬ್ಯಾಂಕ್ ಅಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.ೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಪಾಲಿಹೌಸ್ ನಿರ್ಮಾಣಕ್ಕಾಗಿ ಸರಕಾರದಿಂದ ಸಬ್ಸಿಡಿ ನೀಡಲಾಗುತ್ತಿರುವುದರಿಂದ ರೈತರಿಗೆ ಸಕಾಲದಲ್ಲಿ ಸಾಲ ನೀಡಬೇಕು. ಸಾಲ ನೀಡುವಾಗ ಪಾಲಿಹೌಸ್ ನಿರ್ಮಾಣ ಮಾಡುವ ಜಮೀನನ್ನೇ ಆಧಾರವಾಗಿ ಪಡೆದು ಸಾಲ ನೀಡಬೇಕೆ ಹೊರತು ನಗರ ಪ್ರದೇಶದಲ್ಲಿರುವ ನಿವೇಶನ ಹಾಗೂ ಪರಿವರ್ತಿತ ಭೂಮಿ ಕೋರಬಾರದು ಎಂದರು.ಪರ ಜಿಲ್ಲಾಕಾರಿ ಎಂ.ಎಸ್.ಅರ್ಚನಾ ಮಾತನಾಡಿ, ಕೇಂದ್ರ ಸರಕಾರದ ವಿವಿಧ ರೀತಿಯ ಪಿಂಚಣಿ ಪಡೆಯುತ್ತಿರುವ ನಾಗರಿಕರ ಆಧಾರ ಸಂಖ್ಯೆಯನ್ನು ಪಿಂಚಣಿ ಜೊತೆ ಲಿಂಕ್ ಮಾಡಬೇಕಾಗಿರುವುದರಿಂದ ಬ್ಯಾಂಕ್ ಅಕಾರಿಗಳು ಜಿಲ್ಲೆಯ ಪಿಂಚಣಿದಾರರಿಂದ ಆಧಾರ್ ಸಂಖ್ಯೆಯನ್ನು ಪಡೆದು ಅದಷ್ಟು ಶೀಘ್ರವಾಗಿ ಲಿಂಕ್ ಮಾಡುವಂತೆ ಸೂಚಿಸಿದರು.ಧಾರ್‌ಕಾರ್ಡ್ ಹೊಂದಿಲ್ಲದ 20 ರಿಂದ 30ಮಂದಿ ಪಿಂಚಣಿದಾರರನ್ನು ಗುರುತಿಸಿದರೆ ಸ್ಥಳದಲ್ಲೆ ಆಧಾರ್ ಯೂನಿಟ್ ಆರಂಭಿಸಿ ಅವರಿಗೆ ಹೊಸದಾಗಿ ಕಾರ್ಡ್ ಮಾಡಿಕೊಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಅಕಾರಿಗಳಿಗೆ ತಿಳಿಸಿದರು.ದೇ ವೇಳೆ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಲಾನುಭವಿಗಳಿಗೆ ತಲುಪಿಸಿ ನಿಗದಿತ ಗುರಿ ಸಾಸಿದ ನೆಲಮಂಗಲ ತಾಲೂಕಿನ ಬಿಲ್ಲನಕೋಟೆಯ ಕೆನರಾ ಬ್ಯಾಂಕ್‌ನ ಜಯಲಕ್ಷ್ನೀ, ದೊಡ್ಡಬಳ್ಳಾಪುರದ ಬ್ಯಾಂಕ್ ಆ್ ಇಂಡಿಯಾದ ಚಂದ್ರ ಶೇಖರ್ ಶೆಟ್ಟಿ, ದೇವನಹಳ್ಳಿಯ ಕಾವೇರಿ ಗ್ರಾಮೀಣ ಬ್ಯಾಂಕ್‌ನ ಸುರೇಶ್‌ಗೆ ಬಹುಮಾನ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News