ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ನಾಲ್ಕು ಸಾಮಾನ್ಯ ತಪ್ಪುಗಳನ್ನು ಮಾಡಬೇಡಿ
ನಾವೆಲ್ಲರೂ ನಿವೃತ್ತರಾದಾಗ ಸಾಕಷ್ಟು ಹಣ ಸಂಪಾದಿಸಬೇಕು ಎಂದು ಬಯಸುತ್ತೇವೆ. ಇದಕ್ಕಾಗಿ ಆರೋಗ್ಯವನ್ನು ಅಲಕ್ಷಿಸಿ ಕೆಲಸ ಮಾಡುತ್ತೇವೆ. ಆದರೆ ಆರೋಗ್ಯಕರವಾಗಿರುವುದು ಮತ್ತು ಆರೋಗ್ಯಕರ ಜೀವನಶೈಲಿಗಾಗಿ ಪ್ರಯತ್ನಿಸಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳುತ್ತೇವೆ. ಇದರಿಂದ ಭವಿಷ್ಯದಲ್ಲಿ ಗಂಭೀರ ವಿಷಯಗಳನ್ನು ಎದುರಿಸಬೇಕಾದೀತು.
ಭಾರವಾದ ಬ್ಯಾಗ್:
ಆರೋಗ್ಯಕ್ಕೆ ಮತ್ತು ಧೀರ್ಘ ಸಮಯದಲ್ಲಿ ಜೀವನಕ್ಕೆ ಇದು ಮಾರಕ. ನಮ್ಮ ಇಡೀ ವೃತ್ತಿ ಜೀವನವನ್ನು ಒಂದು ಬ್ಯಾಗಿನಲ್ಲಿ ಹೊತ್ತುಕೊಳ್ಳುತ್ತೇವೆ. ಇದರಿಂದ ತೋಳುಗಳು ಮತ್ತು ಬೆನ್ನಿನ ಮೇಲೆ ಭಾರ ಬೀಳುತ್ತದೆ. ಇದರಿಂದ ಗಂಭೀರ ಬೆನ್ನು ನೋವು ಬರಬಹುದು. ಅದನ್ನು ಅಲಕ್ಷಿಸುತ್ತಾ ಹೋದಂತೆ ನಿಧಾನವಾಗಿ ಸ್ಪಾಂಡಿಲೈಟಿಸ್, ಕುತ್ತಿಗೆ ನೋವು, ಮೊಣಕಾಲು ನೋವು ಬರಬಹುದು.
ಊಟ ಬಿಡುವುದು
ನಿಬಿಡ ಕೆಲಸದ ವೇಳೆಯಲ್ಲಿ ಮತ್ತು ನಮ್ಮ ವಿಚಿತ್ರ ಕಾರ್ಯಪಟ್ಟಿಯಲ್ಲಿ ಬಹಳಷ್ಟು ಸಲ ಬಾತರೂಂ ಹೋಗುವುದು, ನೀರು ಕುಡಿಯುವುದು, ಬ್ರೇಕ್ ಸಮಯದಲ್ಲಿ ವಾಕಿಂಗ್ ಕಳೆದುಕೊಳ್ಳುತ್ತೇವೆ. ಅಲ್ಲದೆ ಹಲವು ಸಲ ಊಟವನ್ನೂ ಬಿಡುತ್ತೇವೆ. ಬೆಳಗಿನ ಉಪಾಹಾರಕ್ಕೆ ಸಮಯವೂ ಸಿಗದೆ ಇರುವ ಸಂದರ್ಭ ಹಲವು ಬಾರಿ ಇರುತ್ತದೆ. ಸಭೆಗಳಿಂದಾಗಿ ಮಧ್ಯಾಹ್ನದ ಊಟ ಬಿಡುತ್ತೇವೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು ಬರುತ್ತವೆ. ಅದು ನಿಮ್ಮ ಕರುಳಿಗೆ ಮತ್ತು ಜೀರ್ಣವ್ಯವಸ್ಥೆಗೆ ಸಮಸ್ಯೆ ತರುತ್ತದೆ.
ತಪ್ಪು ಭಂಗಿಯಲ್ಲಿ ನಿದ್ದೆ
ಬೆನ್ನಿನ ಸಮಸ್ಯೆಗಳು ಹೊಸ ತಲೆಮಾರಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ಕೆಲಸದ ರೀತಿ ಮತ್ತು ಆರೋಗ್ಯವನ್ನು ಅಲಕ್ಷಿಸುವುದೂ ಕಾರಣ. ಸಾಕಷ್ಟು ನಿದ್ದೆ ಅತೀ ಮುಖ್ಯ. ಉತ್ತಮ ಆರೋಗ್ಯಕ್ಕೆ ಬೇಕು ಎಂಟು ಗಂಟೆಗಳ ನಿದ್ದೆ. ಸರಿಯಾದ ಭಂಗಿಯಲ್ಲಿ ನಿದ್ದೆ ಮಾಡದಿದ್ದರೂ ಬೆನ್ನು ಮತ್ತು ಕುತ್ತಿಗೆ ಸಮಸ್ಯೆಗಳು ಬರಬಹುದು.
ಕೆಲಸವೇ ಎಲ್ಲಾ ಎನ್ನುವ ಭಾವನೆ
ಚಿಕ್ಕ ವಯಸ್ಸಲ್ಲಿ ಹಗಲಿರುಳೂ ಗರಿಷ್ಠ ಮಟ್ಟದಲ್ಲಿ ಕೆಲಸ ಮಾಡುವುದರಿಂದ ಬೇಗನೇ ನಿವೃತ್ತಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಸದಾ ಕೆಲಸ ಮಾಡುವುದು ನಮ್ಮ ಆರೋಗ್ಯಕ್ಕೆ ಒಳಿತಲ್ಲ. ಸಣ್ಣ ಬ್ರೇಕ್ ತೆಗೆದುಕೊಳ್ಳುವುದು ಮತ್ತು ಡೆಸ್ಕಿನಿಂದ ಡೆಸ್ಕಿಗೆ ನಡೆಯುವುದು ಮತ್ತು ಮೂರು ತಿಂಗಳಿಗೊಮ್ಮೆ ಸಣ್ಣ ರಜಾ ತೆಗೆದುಕೊಳ್ಳುವುದು, ಸ್ಪಾ ಸೆಷನ್ ಗಳಲ್ಲಿ ರಿಲ್ಯಾಕ್ಸ್ ಮಾಡುವುದು ಅಗತ್ಯ. ನಿತ್ಯವೂ ಕೆಲ ನಿಮಿಷಗಳ ಧ್ಯಾನ ಮನಸ್ಸು ಮತ್ತು ದೇಹಕ್ಕೆ ಉತ್ತಮ.