ಶುಶ್ರೂಷಕರ ನೇಮಕಾತಿ ದಾಖಲಾತಿ ಪರಿಶೀಲನೆ ವೇಳಾಪಟ್ಟಿ ಪ್ರಕಟ
Update: 2016-04-06 23:47 IST
ಬೆಂಗಳೂರು, ಎ.6: ರಾಜ್ಯದ ಸರಕಾರಿ ಮೆಡಿಕಲ್ ಕಾಲೇಜುಗಳು ಮತ್ತು ಅರೆಸರಕಾರಿ ಸಂಸ್ಥೆಗಳ ಶುಶ್ರೂಷಕರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 40ಕ್ಕಿಂತ ಮೇಲ್ಪಟ್ಟು ಅಂಕ ಪಡೆದಿರುವ ಬಿ.ಎಸ್ಸಿ ನರ್ಸಿಂಗ್ ಅಭ್ಯರ್ಥಿಗಳಿಗೆ ದಾಖಲಾತಿ ಪರೀಕ್ಷೆಯನ್ನು ಎ.13ರಿಂದ ವಿವಿಧ ಹಂತಗಳಲ್ಲಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿರ್ಧರಿಸಿದೆ.
ಮಾಜಿ ಸೈನಿಕ ಮತ್ತು ವಿಕಲಚೇತನ ಕೋಟಾದಡಿ ಮೀಸಲಾತಿ ಕೋರುವ ಡಿಪ್ಲೊಮಾ ಮತ್ತು ಬಿ.ಎಸ್ಸಿ ನರ್ಸಿಂಗ್ ಎರಡೂ ಅಭ್ಯರ್ಥಿಗಳು ಎ.13, ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಎ.15, 3ಬಿ ವಿಭಾಗದಲ್ಲಿ ಬರುವ ಅಭ್ಯರ್ಥಿಗಳು ಎ.16 ಹಾಗೂ 2ಎ ವಿಭಾಗದಲ್ಲಿ ಬರುವ ಅಭ್ಯರ್ಥಿಗಳು ಎ.18ರಂದು ದಾಖಲಾತಿ ಪರೀಕ್ಷೆಗೆ ಹಾಜರಾಗಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ http://kea.kar.nic.in ಸಂಪರ್ಕಿಸಲು ಕೋರಲಾಗಿದೆ.