×
Ad

ರಾಜ್ಯದ ಜನತೆಗೆ ಗಣ್ಯರ ಶುಭಾಶಯ

Update: 2016-04-07 23:28 IST

ಬೆಂಗಳೂರು, ಎ.7: ಸಡಗರ ಸಂಭ್ರಮದ ಯುಗಾದಿ ಹಬ್ಬದ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಶುಭ ಕೋರಿದ್ದಾರೆ.

ಯುಗಾದಿ ಹಬ್ಬ ಹೊಸತನದ ಸಂಕೇತ. ಆರೋಗ್ಯಕ್ಕೆ ಬೇವು, ಆನಂದಕ್ಕೆ ಬೆಲ್ಲ. ಯುಗಾದಿಯ ಸಂದರ್ಭದಲ್ಲಿ ಬೇವು ಮತ್ತು ಬೆಲ್ಲದ ಮಿಶ್ರಣವನ್ನು ಮೆಲ್ಲುವ ನಮ್ಮ ಸಂಪ್ರದಾಯವು ಜೀವನದಲ್ಲಿ ಕಷ್ಟ ಮತ್ತು ಸುಖವನ್ನು ಸಮಾನವಾಗಿ ಸ್ವೀಕರಿಸಬೇಕೆಂಬುದನ್ನು ಪ್ರತಿಪಾದಿಸುತ್ತದೆ.

ಚೈತ್ರದ ಚಿಗುರು ಪ್ರಕೃತಿಯ ಸೊಬಗನ್ನು ಎಲ್ಲೆಡೆ ಪಸರಿಸುತ್ತದೆ. ಒಣಗಿದ ಮರಗಳು ಹಸಿರು ಎಲೆಗಳಿಂದ ತುಂಬುತ್ತವೆ. ವಸಂತ ಕಾಲದ ವಿಶೇಷ ಮಾವು ಬೆಳೆಯ ಆಗಮನ. ರಾಜ್ಯದ ಬಹುತೇಕ ಪ್ರದೇಶಗಳು ಬರದ ಛಾಯೆಯಿಂದ ಬಳಲುತ್ತಿವೆ.

ಆದರೂ, ನಮ್ಮಲ್ಲಿ ಒಳ್ಳೆಯ ಜನ ಹಾಗೂ ಒಳ್ಳೆಯತನಕ್ಕೆ ಬರವಿಲ್ಲ ಎಂಬುದನ್ನು ಸಾಬೀತುಪಡಿಸಲು ಹಾಗೂ ನಮ್ಮ ಪರಿಸರದಲ್ಲಿ ಕಾಣುವ ನೈಸರ್ಗಿಕ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ದೊರಕಿಸಿಕೊಡಲು ಯುಗಾದಿ ಹಬ್ಬವು ನಾಡಿನ ಜನತೆಗೆ ಪ್ರೇರಣೆ ಹಾಗೂ ಸ್ಫೂರ್ತಿಯನ್ನು ನೀಡಲಿ ಎಂದು ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ಹಾರೈಸಿದ್ದಾರೆ.

ರಾಜ್ಯಪಾಲ ವಿ.ಆರ್.ವಾಲಾ: ನಾಡಿನ ಜನತೆಗೆ ರಾಜ್ಯಪಾಲ ವಜು ಭಾಯಿ ವಾಲಾ ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News