ಎ.11 ರಿಂದ ವೈಎಂಸಿಎ ಬೇಸಿಗೆ ಶಿಬಿರ
Update: 2016-04-07 23:32 IST
ಬೆಂಗಳೂರು, ಎ.7: ಬಿಸಿಲಿನ ಝಳದಲ್ಲಿ ಬೆಂದು ಪರೀಕ್ಷೆಗಳನ್ನು ಮುಗಿಸಿಕೊಂಡಿರುವ ಮಕ್ಕಳು ಖುಷಿಯಿಂದ ಕಾಲ ಕಳೆಯಲಿಕ್ಕಾಗಿ ವೈಎಂಸಿಎ ಸಂಸ್ಥೆಯ ವತಿಯಿಂದ ಮಾಸಿಕ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್.ವಿ.ರತ್ನಕುಮಾರ್ ತಿಳಿಸಿದ್ದಾರೆ.
ಒಂದು ತಿಂಗಳು ಕಾಲ ನಡೆಯುವ ಬೇಸಿಗೆ ಶಿಬಿರದಲ್ಲಿ ಕ್ರಿಕೆಟ್, ಟೆನ್ನಿಸ್, ಬಾಸ್ಕೆಟ್‌ಬಾಲ್, ಕಬಡ್ಡಿ, ಕರಾಟೆ, ಯೋಗ, ಡ್ಯಾನ್ಸ್, ಗಿಟಾರ್ ವಾದನ, ಬೇಸಿಕ್ ಕಂಪ್ಯೂಟರ್, ಬ್ಯಾಡ್ಮಿಂಟನ್, ಸಂಗೀತ ಇನ್ನಿತರೆ ಆಕರ್ಷಕ ಕೋರ್ಸ್‌ಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಬೇಸಿಗೆ ಶಿಬಿರವನ್ನು ಎ.9 ರಂದು ಹ್ಯಾಂಡ್ ರೈಟಿಂಗ್ ಪರಿಣಿತರಾದ ರಫೀಯುಲ್ಲಾ ಬೇಗ್ ಉದ್ಘಾಟನೆ ಮಾಡಲಿದ್ದು, ರಾಷ್ಟ್ರೀಯ ಪೆಂಟಥ್ಲಾನ್ ಓಟಗಾರ್ತಿ ಪಲ್ಲವಿ ಸುಕುಮಾರ್, ವೈಎಂಸಿಎ ಅಧ್ಯಕ್ಷ ಜೆ.ಅಲೆಕ್ಸಾಂಡರ್ ಇನ್ನಿತರರು ಭಾಗವಹಿಸಲಿದ್ದಾರೆಂದು ತಿಳಿಸಿದರು.