ಗಾಳಿಪಟ ಉತ್ಸವಕ್ಕೆ ರಾಜ್ಯದ ಮೂವರ ಆಯ್ಕೆ
Update: 2016-04-07 23:34 IST
ಬೆಂಗಳೂರು, ಎ.7: ಚೈನಾದಲ್ಲಿ ಎ.16ರಂದು ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ರಾಜ್ಯದ ಕೈಟ್ ಕ್ಲಬ್ ಇಂಡಿಯಾ ಸಂಸ್ಥೆಯ 3 ಜನರ ತಂಡ ಆಯ್ಕೆಯಾಗಿದೆ ಎಂದು ಸಂಸ್ಥೆಯ ಅಂತಾರಾಷ್ಟ್ರೀಯ ಗಾಳಿಪಟ ಕಲಾವಿದ ವಿ.ಕೆ.ರಾವ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಕ್ರೀಡೆಗಳಲ್ಲಿ ಗಾಳಿಪಟ ಹಾರಿಸುವುದು ಒಂದು ಕಲೆಯಾಗಿದೆ. ಆದರೆ ಸರಕಾರಗಳು ಇದನ್ನು ಮಾನ್ಯ ಮಾಡುತ್ತಿಲ್ಲ. ಇದಕ್ಕಾಗಿ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೊಸ ಗಾಳಿಪಟ ತಯಾರು ಮಾಡಲಿಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಇದರಿಂದ ಗಾಳಿಪಟ ಹಾರಿಸುವುದನ್ನು ಸರಕಾರ ಕ್ರೀಡಾ ಇಲಾಖೆಯ ವ್ಯಾಪ್ತಿಗೆ ಒಳ ಪಡುತ್ತದೆ ಎಂದು ಪರಿಗಣಿಸಿ ಪ್ರೋತ್ಸಾಹಿಸಿದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ರಾಜ್ಯಕ್ಕೆ ಹೆಸರು ಗಳಿಸಿಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.