×
Ad

ಎಚ್ಚರ! ಧೂಮಪಾನದಿಂದ ದ್ರಷ್ಟಿಮಾಂದ್ಯರಾದೀರಿ

Update: 2016-04-11 13:46 IST

ಧೂಮಪಾನಿಗಳಿಗೆ ಇನ್ನೊಂದು ಬ್ಯಾಡ್‌ನ್ಯೂಸ್. ಭಾರತದಲ್ಲಿ ಕಣ್ಣಿನ ರೋಗಗಳು ಉಲ್ಬಣಿಸುತ್ತಿದ್ದು, ಇದಕ್ಕೆ ಧೂಮಪಾನ ಮುಖ್ಯಕಾರಣ ಎಂಬ ನಿರ್ಧಾರಕ್ಕೆ ನೇತ್ರ ತಜ್ಞರು ಬಂದಿದ್ದಾರೆ. ಧೂಮಪಾನಿಗಳು ದೃಷ್ಟಿ ಮಾಂದ್ಯರಾಗುವ ಸಾಧ್ಯತೆ ಅಧಿಕ ಎನ್ನುವುದು ಅವರ ವಾದ. ಈ ಬಗ್ಗೆ ಶೇಕಡ 10-20 ಮಂದಿಗೆ ಜಾಗೃತಿ ಇದೆ ಎಂದೂ ನೇತ್ರ ತಜ್ಞರು ಹೇಳುತ್ತಾರೆ.


ವೈದ್ಯರ ಪ್ರಕಾರ, ಧೂಮಪಾನದಿಂದ ವಯೋಸಹಜವಾದ ಮಾಂಸಖಂಡದ ಅಶಕ್ತತೆ, ಕ್ಯಾಟರ್ಯಾಕ್ಟ್, ಗ್ಲೋಕೊಮಾ, ಕಣ್ಣು ಒಣಗುವುದು ಮಧುಮೇಹದ ರೆಟಿನೊಪಥಿಯಂಥ ಹಲವು ರೋಗಗಳ ಸಾಧ್ಯತೆ ಹೆಚ್ಚುತ್ತದೆ ಎನ್ನುವುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ.


ವಯೋಸಹಜ ಮಾಂಸಖಂಡ ಅಶಕ್ತತೆ (ಎಎಂಡಿ) ಯನ್ನು ಕಡಿಮೆ ಮಾಡುವ ಉತ್ತಮ ವಿಧಾನವೆಂದರೆ ಧೂಮಪಾನ ಮಾಡದಿರುವುದು. ಧೂಮಪಾನಿಗಳು ಸಾಮಾನ್ಯರಿಗಿಂತ ಎಎಂಡಿ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಮೂರರಿಂದ ನಾಲ್ಕು ಪಟ್ಟು ಅಧಿಕ. ಧೂಮಪಾನಿಗಳ ಜತೆ ಇರುವವರಿಗೂ ಎಎಂಡಿ ಅಪಾಯ ಸಾಮಾನ್ಯರಿಗಿಂತ ಎರಡು ಪಟ್ಟು ಹೆಚ್ಚು ಎಂದು ಸೆಂಟರ್ ಫಾರ್ ಸೈಟ್‌ನ ಆಡಳಿತ ನಿರ್ದೇಶಕ ಮಹಿಪಾಲ್ ಎಸ್.ಸಚ್‌ದೇವ್ ಹೇಳುತ್ತಾರೆ.


ಮಾಂಸಖಂಡದ ಅಶಕ್ತತೆಯಿಂದ ದೃಷ್ಟಿಕ್ಷೇತ್ರದ ಕೇಂದ್ರ ಭಾಗಕ್ಕೆ ಹಾನಿಯಾಗುತ್ತದೆ. ಕಣ್ಣು ಒಣಗುವ ಸಮಸ್ಯೆಯಲ್ಲಿ, ರೆಟಿನಾದ ಕೇಂದ್ರ ಕ್ಷೀಣಿಸುತ್ತದೆ. ಎಎಂಡಿ ಆರಂಭಿಕ ಹಂತದಲ್ಲಿ ಮಧ್ಯಭಾಗದ ದೃಷ್ಟಿಯನ್ನು ಬಲಿತೆಗೆದುಕೊಳ್ಳುತ್ತದೆ. ಇದರಿಂದ ಓದಲು ಹಾಗೂ ಸೂಕ್ಷ್ಮ ವಸ್ತುಗಳನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ಅವರು ವಿವರಿಸುತ್ತಾರೆ.


ಸಾಮಾನ್ಯವಾಗಿ ಧೂಮಪಾನ ಮಾಡದವರಿಗೆ ಕಣ್ಣಿನ ಸಮಸ್ಯೆ ಕಡಿಮೆ ಎಂದು ಅವರು ಹೇಳುತ್ತಾರೆ. ಆದರೆ ಆರಂಭಿಕ ಹಂತದಲ್ಲೇ ಪರೀಕ್ಷೆ ನಡೆಸಿದರೆ, ದೃಷ್ಟಿದೋಷ ಉಂಟಾಗುವ ಮೊದಲೇ ಸರಿಪಡಿಸಲು ಅವಕಾಶವಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News