ಅರುಣಲಕ್ಷ್ಮೀ ಎಸ್
Update: 2016-04-11 19:23 IST
ಪುತ್ತೂರು: ಪುತ್ತೂರು ಒಳಮೊಗರು ಗ್ರಾಮದ ಕುಂಬ್ರ ನಿವಾಸಿ ಕೊಂಬೆಟ್ಟು ಕಾಲೇಜ್‌ನ ಇಂಗ್ಲೀಷ್ ಉಪನ್ಯಾಸಕ ರಾಮಚಂದ್ರ ಭಟ್ ಅವರ ಪತ್ನಿ ಅರುಣಲಕ್ಷ್ಮೀ ಎಸ್(52) ಹೃದಯಾಘಾತದಿಂದ ಭಾನುವಾರ ನಿಧನರಾದರು. ಮೃತರು ಅರುಣಲಕ್ಷ್ಮೀ ಅವರು ಕಳೆದ 27 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಮೃತರು ಪತಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮೃತರ ಕುಟುಂಬಸ್ಥರು ಮೃತ ದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದೇಹದಾನ ಮಾಡಿದ್ದಾರೆ.