ಶೂಟರ್ ಬಿಂದ್ರಾಗೆ ನೆರವಾದ ಸುಷ್ಮ್ಮಾ ಸ್ವರಾಜ್

Update: 2016-04-11 18:40 GMT

ಹೊಸದಿಲ್ಲಿ, ಎ.11: ಭಾರತದ ಸ್ಟಾರ್ ಶೂಟರ್ ಅಭಿನವ್ ಬಿಂದ್ರಾ ಕೋಚ್‌ರ ಪಾಸ್‌ಪೋರ್ಟ್ ಜರ್ಮನಿಯಲ್ಲಿ ಕಳೆದುಹೋಗಿದ್ದು, ವಿದೇಶಾಂಗ ಸಚಿವೆ ಸುಷ್ಮ್ಮಾ ್ಮ ಸ್ವರಾಜ್ ಸಕಾಲಿಕ ಮಧ್ಯಪ್ರವೇಶದಿಂದಾಗಿ ಬಿಂದ್ರಾ ಅವರು ಸಂಕಷ್ಟದಿಂದ ಪಾರಾಗಿದ್ದಾರೆ.

ಬಿಂದ್ರಾ ಅವರು ತಮ್ಮ ಕೋಚ್‌ರೊಂದಿಗೆ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾಗವಹಿಸಲು ರಿಯೊ ಡಿ ಜನೈರೊಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಜರ್ಮನಿಯಲ್ಲಿ ಬಿಂದ್ರಾರ ಕೋಚ್ ಪಾಸ್‌ಪೋರ್ಟ್ ಕಳೆದುಹೋಗಿತ್ತು. ಟೂರ್ನಿಯು ಶುಕ್ರವಾರದಿಂದ ಆರಂಭವಾಗಲಿದ್ದು, ಒಲಿಂಪಿಕ್ಸ್ ನಡೆಯುವ ಸ್ಥಳದಲ್ಲೇ ವಿಶ್ವಕಪ್ ನಡೆಯುತ್ತಿರುವ ಕಾರಣ ಬಿಂದ್ರಾಗೆ ಈ ಟೂರ್ನಿಯು ಅತ್ಯಂತ ಮುಖ್ಯವಾಗಿತ್ತು.

ನನ್ನ ಸಮಸ್ಯೆಗೆ ಸ್ಪಂದಿಸಿ, ಕಾರ್ಯಪ್ರವೃತ್ತರಾದ ಸುಷ್ಮಾ ಸ್ವರಾಜ್ ಹಾಗೂ ಜರ್ಮನಿಯ ರಾಯಭಾರಿ ಗುರುಜಿತ್ ಸಿಂಗ್‌ಗೆ ಋಣಿಯಾಗಿರುವೆ ಎಂದು ಬಿಂದ್ರಾ ಟ್ವೀಟ್ ಮಾಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News