ಮುಂಡಗೋಡ ಪ.ಪಂ ಮಾಜಿ ಅಧ್ಯಕ್ಷೆ ಸರೋಜಾ ಹೇಂದ್ರೆ ನಿಧನ
Update: 2016-04-15 14:58 IST
ಮುಂಡಗೋಡ: ಪಟ್ಟಣಪಂಚಾಯತ ಮಾಜಿ ಅಧ್ಯಕ್ಷೆ ವಿಶಾಲ ಮಹಿಳಾ ಖಾದಿಗ್ರಾಮದ್ಯೋಗ ಸಹಕಾರಿ ಸಂಘದ ಸ್ಥಾಪಕಿ ಸರೋಜಾ ಹೇಂದ್ರ(58) ಇಂದು ನಿಧನರಾದರು.
ಕಾಂಗ್ರೆಸ್ ನ ನಿಷ್ಠಾವಂತ ಸಕ್ರೀಯ ಕಾರ್ಯಕರ್ತರಾಗಿದ್ದ ಇವರು ಪಟ್ಟಣ ಪಂಚಾಯತ ಅಧ್ಯಕ್ಷರಾಗಿ, ಮಾರ್ಕೇಟಿಂಗ ಸೊಸೈಟಿಯ ಸದಸ್ಯರಾಗಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸಮಾಡಿದ್ದಾರೆ.
ಸರೋಜಾ ಹೇಂದ್ರೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ
ಶಾಸಕ ಶಿವರಾಮ ಹೆಬ್ಬಾರ, ಪ.ಪಂ ಅಧ್ಯಕ್ಷ ರಫೀಕ ಇನಾಮದಾರ ಬ್ಲಾಕ್ ಅಧ್ಯಕ್ಷ ರವಿಗೌಡಾಪಾಟೀಲ ಹಾಗು ಕಾಂಗ್ರೆಸ್ ಹಾಗು ವಿವಿಧ ಪಕ್ಷಗಳ, ಸಂಘ ಸಂಸ್ಥೆಗಳ ಪ್ರಮುಖರು ಹಾಗು ಹಿತೈಷಿಗಳು ಮೃತರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು
ಮೃತರು ಮಗ, ಎರಡು ಪುತ್ರಿಯರು, ಮೊಮ್ಮಗ, ಸೋಸೆ ಹಾಗು ಅಪಾರ ಬಂದು ಬಳಗ ಅಗಲಿದ್ದಾರೆ