×
Ad

ಮೀನುಗಾರಿಕೆ ಕ್ಷೇತ್ರ ಸಹಾಯಕ ಹುದ್ದೆಗೆ ಪರೀಕ್ಷೆ

Update: 2016-04-15 23:42 IST

ಬೆಂಗಳೂರು, ಎ.15: ರಾಜ್ಯ ಪರೀಕ್ಷಾ ಪ್ರಾಧಿಕಾರವು ಮೀನುಗಾರಿಕೆ ಕ್ಷೇತ್ರ ಸಹಾಯಕ ಹುದ್ದೆಗೆ ಮೇ 6ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಿದೆ.
ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಈಜು ಸ್ಪರ್ಧೆಯಲ್ಲಿ ಉತ್ತೀರ್ಣರಾದವರು ಮಾತ್ರ ಈ ಲಿಖಿತ ಪರೀಕ್ಷೆ ಬರೆಯಲು ಅರ್ಹತೆಯನ್ನು ಹೊಂದಿರುತ್ತಾರೆ. ಪರೀಕ್ಷಾ ಪ್ರವೇಶ ಪತ್ರಗಳನ್ನು ಎ.20ರನಂತರ ರಾಜ್ಯ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್  http://kea.kar.nic.inನಿಂದ ಪಡೆದುಕೊಳ್ಳಬಹುದು. 100 ಅಂಕಗಳ ಪರೀಕ್ಷೆಯು ಎರಡು ಗಂಟೆಗಳ ಅವಧಿಯನ್ನು ಹೊಂದಿರುತ್ತದೆ. (50 ಅಂಕಗಳು ಸಾಮಾನ್ಯ ಜ್ಞಾನ ಹಾಗೂ 50 ಅಂಕಗಳು ಸಾಮಾನ್ಯ ಕನ್ನಡ ವಿಷಯಕ್ಕೆ ಸಂಬಂಧಿಸಿದ್ದಾಗಿರುತ್ತದೆ) ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News