ಆಯ್ಕೆಪಟ್ಟಿ ಪ್ರಕಟ
Update: 2016-04-15 23:44 IST
ಬೆಂಗಳೂರು, ಎ.15: ಲೋಕ ಸೇವಾ ಆಯೋಗವು ನಗರ ಯೋಜಕರು-22 ಹುದ್ದೆಗಳು, ಕಾರ್ಖಾನೆಗಳ ಸಹಾಯಕ ನಿರ್ದೇಶಕರು-12ಹುದ್ದೆಗಳು, ಮೊರಾರ್ಜಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ, ಇಂಗ್ಲಿಷ್, ರಸಾಯನಶಾಸ್ತ್ರ ಉಪನ್ಯಾಸಕರ ತಲಾ 5 ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಗಳನ್ನು ಎ.12ರಂದು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ.
ಆಕ್ಷೇಪಣೆಗಳನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಆಯ್ಕೆಪಟ್ಟಿಗಳನ್ನು ಪ್ರಕಟಿಸಿದ ದಿನದಿಂದ ಹದಿನೈದು ದಿನಗಳೊಳಗೆ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು -01 ಇವರಿಗೆ ಸಲ್ಲಿಸಬಹುದು.
ನಿಗದಿತ ದಿನಾಂಕದ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತರು ಆಯೋಗದ ತಾಣ http://kpsc.kar.nic.in/Result ನೋಡಬಹುದು ಎಂದು ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.