ಎ.19ಕ್ಕೆ ವಾಹನ ಹರಾಜು
Update: 2016-04-15 23:50 IST
ಬೆಂಗಳೂರು, ಎ. 15: ವಾರಸುದಾರರಿಲ್ಲದ ವಿವಿಧ ದ್ವಿಚಕ್ರ ವಾಹನಗಳನ್ನು ನ್ಯಾಯಾಲಯದ ಆದೇಶದಂತೆ ಸಾರ್ವಜನಿಕವಾಗಿ ಎ.19ಕ್ಕೆ ಹರಾಜು ಪ್ರಕ್ರಿಯೆ ನಡೆಸಲು ಮಡಿವಾಳ ಪೊಲೀಸ್ ಠಾಣೆ ನಿರ್ಧರಿಸಿದೆ.
ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಮಡಿವಾಳ ಪೊಲೀಸ್ ಠಾಣೆಯಲ್ಲಿ ಅಂದು ಬೆಳಗ್ಗೆ 11 ಗಂಟೆಯಿಂದ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಆಸಕ್ತರು ಬಿಡ್ ಮೂಲಕ ವಾಹನಗಳನ್ನು ಖರೀದಿಸಿ ಸ್ಥಳದಲ್ಲಿಯೇ ಹಣ ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080 22942568ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ಹೇಳಿದೆ.