×
Ad

ಕಸಾಪ ಸಾಂಸ್ಕೃತಿಕ, ಮಾಧ್ಯಮ ಸಲಹಾ ಸಮಿತಿ ರಚನೆ

Update: 2016-04-18 23:45 IST

ಬೆಂಗಳೂರು,ಎ.18: ಕನ್ನಡ ಸಾಹಿತ್ಯ ಪರಿಷತ್ ಸಾಂಸ್ಕೃತಿಕ ಹಾಗೂ ಮಾಧ್ಯಮ ಸಲಹಾ ಸಮಿತಿಯನ್ನು ರಚನೆ ಮಾಡಲಾಗಿದೆ. ನಾಟಕ ಅಕಾಡಮಿ ಸದಸ್ಯ ಹಾಗೂ ನಟ ಎಂ.ಎಸ್.ಗುಣಶೀಲನ್‌ರವರನ್ನು ಅದಕ್ಕೆ ಸಂಚಾಲಕರನ್ನಾಗಿ ನೇಮಿಸಲಾಗಿದೆ.

ನೂತನವಾಗಿ ನೇಮಿಸಿರುವ ಸಮಿತಿಯಲ್ಲಿ ಕೊಡಗಿನ ಬಿ.ಎಸ್.ಲೋಕೇಶ್ ಸಾಗರ್, ಕಲಬುರಗಿಯ ಅಪ್ಪಾರಾವ್ ಅಕ್ಕೋಣಿ, ಹಾಸನದ ಹೆಚ್.ಬಿ.ಮದನಗೌಡ, ಗದಗ ಜಿಲ್ಲೆಯ ಆರ್.ಕೆ.ಭಗವಾನ್, ಬೈಲಹೊಂಗಲದ ಮೋಹನ.ಬ.ಪಾಟೀಲ, ಉ.ಕ.ಜಿಲ್ಲೆಯ ಅರವಿಂದ ಕರ್ಕಿಕೋಡಿ, ಚಿಕ್ಕಬಳ್ಳಾಪುರದ ಗುಡಿಬಂಡೆ ಎನ್.ನಾರಾಯಣಸ್ವಾಮಿ, ತುಮಕೂರಿನ ಬಸವರಾಜು, ಬೆಂಗಳೂರು ಜಿಲ್ಲೆಯ ಡಾ.ಬಾನಂದೂರು ಕೆಂಪಯ್ಯ, ಆರ್.ಜಿ.ಹಳ್ಳಿ ನಾಗರಾಜ್, ಡಾ.ಟಿ.ಎಸ್.ಸತ್ಯವತಿ, ಎಂ.ಭಾರತಿ ಪ್ರಕಾಶ್, ರಂಗಶ್ರೀ ರಂಗಸ್ವಾಮಿ, ಎಚ್.ಫಲ್ಗುಣ, ನೊಣವಿನಕೆರೆ ರಾಮಕೃಷ್ಣಯ್ಯ, ರಾಫಾಯಲ್ ರಾಜ್ ಇದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅದೇ ರೀತಿಯಲ್ಲಿ ಪ್ರಸ್ತುತ ವರ್ಷದಲ್ಲಿ ಕಸಾಪ ಶತಮಾನೋತ್ಸವ ವನ್ನು ಆಚರಿಸಿಕೊಂಡಿರುವ ಪ್ರಯುಕ್ತವಾಗಿ ಪರಿಷತ್‌ನಿಂದ ಪ್ರಕಟಿಸಿರುವ ಎಲ್ಲ ಪುಸ್ತಕಗಳನ್ನು ಶೇ.10 ರಿಂದ ಶೇ.75 ರವರೆಗೆ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಕಸಪಾ ಅಧ್ಯಕ್ಷ ಮನುಬಳಿಗಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News