×
Ad

ಫೆಲೋಶಿಪ್‌ಗೆ ಅರ್ಜಿ ಆಹ್ವಾನ

Update: 2016-04-18 23:47 IST

ಬೆಂಗಳೂರು, ಎ. 18: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯು ಪ್ರಸಕ್ತ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗಾಗಿ ಯಕ್ಷಗಾನ ಬಯಲಾಟದ ಸಂಶೋಧನಾ ಕ್ಷೇತ್ರ ಹಾಗೂ ಅಧ್ಯಯನ ವಿಷಯಗಳ ಬಗ್ಗೆ ಒಂಬತ್ತು ತಿಂಗಳ ಕಾಲ ಅಧ್ಯಯನ ಮಾಡಿ ಪ್ರಬಂಧ ಮಂಡಿಸುವವರಿಗೆ ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನಿಸಿದೆ.

ಈ ಸಂಶೋಧನಾ ಕಾರ್ಯದಲ್ಲಿ ಒಬ್ಬ ಸಂಶೋಧನಾ ಅಭ್ಯರ್ಥಿಗೆ 1ಲಕ್ಷ ರೂ. ನಿಗದಿಪಡಿಸಲಾಗಿದೆ. ಆಸಕ್ತ ಕನ್ನಡ ಎಂ.ಎ., ಎಂ.ಫಿಲ್, ಪಿಎಚ್‌ಡಿ ವ್ಯಾಸಂಗ ಮಾಡಿರುವವರು ಅಂಕಪಟ್ಟಿಯ ಪ್ರತಿ ಹಾಗೂ ಜಾತಿ ಪ್ರಮಾಣ ಪತ್ರದೊಂದಿಗೆ ಎ.30 ರೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ, 2ನೆ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಬೆಂಗಳೂರು-2 ಅಥವಾ ಇಮೇಲ್ ವಿಳಾಸ kybabangalore@gmail.comಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಕಾಡಮಿ ಕಚೇರಿ ದೂ.ಸಂಖ್ಯೆ 080-2211 3146ನ್ನು ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News