×
Ad

ವಿತರಣೆಯಾಗದ 2014ರ ಮಳೆ ಪರಿಹಾರಕ್ಕೆ ಆಗ್ರಹ

Update: 2016-04-18 23:47 IST

ಬೆಂಗಳೂರು,ಎ.18: ಶಾಂತಿನಗರ ವಿಭಾಗಕ್ಕೆ ಮಂಜೂರಾಗಿರುವ ಮಳೆ ಪರಿಹಾರ ನಿಧಿ ಕಡತವನ್ನು ಕಳೆದುಕೊಂಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕಡತವನ್ನು ಪತ್ತೆ ಹಚ್ಚಿ ಫಲಾನುಭವಿಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಡಿ.ಸಿ.ಪ್ರಕಾಶ್ ಆಗ್ರಹಿಸಿದ್ದಾರೆ.

ಕಳೆದ 2014ರಲ್ಲಿ ಸುರಿದ ಬಾರಿ ಮಳೆಗೆ ನಗರದ ಶಾಂತಿನಗರ, ನೀಲಸಂದ್ರ, ಶಾಂತಲಾನಗರ ವಾರ್ಡ್ ಗಳಲ್ಲಿ ಗೋಡೆ ಕುಸಿದು, ಮನೆ ಮುರಿದು ಬಿದ್ದು ಸುಮಾರು 5,585 ಕುಟುಂಬಗಳು ಬೀದಿ ಪಾಲಾಗಿ ದ್ದವು. ಇವರಿಗೆ ಮಳೆ ಪರಿಹಾರ ಒದಗಿಸುವ ಸಲು ವಾಗಿ ಬಿಬಿಎಂಪಿ 1,39,62,500 ರೂಗಳನ್ನು ಬಿಡು ಗಡೆ ಮಾಡಲಾಗಿದೆ. ಆದರೆ ಇದುವರೆಗೂ ಈ ಹಣ ನೊಂದ ಜನರಿಗೆ ವಿತರಣೆಯಾಗಿಲ್ಲ ಎಂದು ಆರೋಪಿಸಿದ್ದಾರೆ.

ಈ ಕುರಿತು ಕಳೆದ ಒಂದೂವರೆ ವರ್ಷದಿಂದ ಮಳೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದಾಗ ಅಲ್ಲಿನ ಅಧಿಕಾರಿಗಳು ಕಡತವು ಇಲ್ಲಿಲ್ಲ, ಅದನ್ನು ಮೇಲಿನ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗಿದೆ ಎಂದು ಸಬೂಬುಗಳನ್ನು ಹೇಳುತ್ತಾ ಕಾಲ ಕಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 6 ತಿಂಗಳಿಂದ ಇದರ ಸಲುವಾಗಿ ಸುತ್ತಾಡಿ ಕಡತವನ್ನು ಪತ್ತೆ ಹಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತಾ ಬರುತ್ತಿದ್ದೇವೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಒಬ್ಬರು ಇನ್ನೊಬ್ಬರ ಮೇಲೆ ಚಾಡಿ ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆಯೇ ಹೊರತು ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ. ಅಂದರೆ ಪರಿಹಾರ ನೀಡಬೇಕಿರುವ ಕಡತ ಎಲ್ಲಿದೆ? ಏನಾಯ್ತು? ಎಂಬುದು ನಿಗೂಢವಾಗಿದೆ. ಆದುದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಹಾಗೂ ಪರಿಹಾರವನ್ನು ಒದಗಿಸಿ ಕೊಡಬೇಕು ಎಂದು ಪ್ರಕಾಶ್ ಪ್ರಕಟನೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News