ಎ.23ರಂದು ಪದ್ಮನಾಭ ವ್ಯಂಗ್ಯಚಿತ್ರ ಪ್ರದರ್ಶನ
Update: 2016-04-18 23:50 IST
ಬೆಂಗಳೂರು, ಎ.18: ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ ಸಂಸ್ಥೆಯ ವತಿಯಿಂದ ವ್ಯಂಗ್ಯ ಚಿತ್ರಕಾರ ದಿ.ಎಸ್.ವಿ.ಪದ್ಮನಾಭರವರ ವ್ಯಂಗ್ಯಚಿತ್ರಗಳನ್ನು ಎ.23ರಿಂದ 14 ದಿನಗಳ ಕಾಲ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಪ್ರದರ್ಶನವನ್ನು ಎ.23 ರಂದು ಏಶಿಯಾ ನ್ಯೂಸ್ ನೆಟ್‌ವರ್ಕ್ ಪ್ರೈ.ಲಿ.ನ ಸಂಪಾದಕೀಯ ನಿರ್ದೇಶಕ ಸುಗತ ಶ್ರೀನಿವಾಸರಾಜು ಉದ್ಘಾಟನೆ ಮಾಡ ಲಿದ್ದಾರೆ. ನಂತರ ಪ್ರತಿದಿನ ಬೆ.10 ರಿಂದ ಸಂಜೆ 6 ರವರೆಗೆ ಸಾರ್ವಜನಿಕರಿಗಾಗಿ ಮುಕ್ತ ವಾಗಿರಿಸಲಾಗಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.