×
Ad

ಎ.24ರಂದು ಗ್ರೀನ್ ಪಾಥ್‌ಗೆ ಸಿಎಂ ಚಾಲನೆ

Update: 2016-04-20 23:41 IST

ಬೆಂಗಳೂರು,ಎ.20: ದೇಶದ ಅತಿದೊಡ್ಡ ಸಾವಯವ ಹಬ್ ‘ಗ್ರೀನ್ ಪಾಥ್’ ಹಸಿರು ತೋಟ - ಆರ್ಗ್ಯಾನಿಕ್ ಸ್ಟೇಟ್‌ನ್ನು ಎ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.

ಪರಿಸರ ಸ್ನೇಹಿ ಕಟ್ಟಡದಲ್ಲಿ ಸಾವಯವ ಆಹಾರ ಪದಾರ್ಥಗಳ ಅಂಗಡಿ, ಮರೆತುಹೋದ ದೇಸಿ ಆಹಾರದ ಭೋಜನ ಗೃಹ, ಡಿಟಾಕ್ಸ್ ಕೆಫೆ, ಸಭಾಭವನ ಇನ್ನಿತರ ಸೌಲಭ್ಯಗಳು ಹೊಂದಿರುವ ದೇಶದ ಅತೀ ದೊಡ್ಡ ಸಾವಯವ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮರೆತುಹೋದ ದೇಸಿ ಆಹಾರದ ಪ್ರಕಾರಗಳನ್ನು, ತೃಣಧಾನ್ಯಗಳನ್ನು ಉಪಯೋಗಿಸಿ ಆರೋಗ್ಯದಾಯಕ ಮತ್ತು ರುಚಿಕರವಾದ ವಿವಿಧ ವಿಭಿನ್ನ ಆಹಾರಗಳನ್ನು ಗ್ರಾಹಕರಿಗೆ ನೀಡುವ ಪ್ರಯತ್ನವನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆರೋಗ್ಯಕ್ಕೆ ಹಾನಿಕಾರಕವಾದ ಮೈದಾ ಹಿಟ್ಟು, ಅತೀ ಸಂಸ್ಕರಿಸಲ್ಪಟ್ಟ ಸಕ್ಕರೆ, ಎಣ್ಣೆ, ವನಸ್ಪತಿ, ಉಪ್ಪುಗಳನ್ನು ಮತ್ತು ಯಾವುದೇ ರೀತಿಯ ರಾಸಾಯನಿಕ ಬಣ್ಣಗಳನ್ನು ಉಪಯೋಗಿಸದೆ ಆಹಾರ ತಿನಿಸುಗಳನ್ನು ತಯಾರು ಮಾಡಲಾಗುತ್ತಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ತೃಣಧಾನ್ಯಗಳ ಪಿಜ್ಜಾ ಮತ್ತು ಇತರ ತಿನಿಸುಗಳನ್ನು ತಯಾರು ಮಾಡಲಾಗಿದೆ. ವಿವಿಧ ರೀತಿಯ ಡಿಟಾಕ್ಸ್ ಪಾನೀಯಗಳನ್ನು ಸಹ ಗ್ರಾಹಕರಿಗೆ ಒದಗಿಸಲಾಗುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಜಯರಾಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News